Neer Dose Karnataka
Take a fresh look at your lifestyle.

ಪಾಕಿಸ್ತಾನ ಅಲ್ಲವೇ ಅಲ್ಲ, ಈ ದೇಶವೇ ಟಿ 20 ವಿಶ್ವಕಪ್ ಗೆಲ್ಲುವುದು ಎಂದ ಇಂಜಮಾಮ್ ಉಲ್ ಹಕ್, ಆ ದೇಶ ಯಾವುದು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ 23 ಅಕ್ಟೋಬರ್ ಇಂದ ಶುರುವಾಗಿ ನವೆಂಬರ್ 14 ರ ವರೆಗೆ ನಡೆಯಲಿದೆ. ಈಗಾಗಲೇ ಒಂದೆಡೆ ಸೂಪರ್ 12 ಗೆ ಅರ್ಹತಾ ಸುತ್ತುಗಳು ನಡೆಯುತ್ತಿದ್ದು, ಇನ್ನೊಂದೆಡೆ ಅರ್ಹತೆಗೊಂಡ ದೇಶಗಳು ಅಭ್ಯಾಸ ಪಂದ್ಯಗಳನ್ನು ಸಹ ಆಡಿವೆ. ಇದರ ಜೊತೆಗೆ ವೀಕ್ಷಕ ವಿವರಣೆಗಾರರು ಹಾಗೂ ಹಿರಿಯ ಕ್ರಿಕೇಟ್ ಆಟಗಾರರು ಈ ಟೂರ್ನಿ ಬಗ್ಗೆ ತಮ್ಮ ವಿವಿಧ ರೀತಿಯ ಲೆಕ್ಕಾಚಾರಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಹಿರಿಯ ಕ್ರಿಕೇಟಿಗ ಇಂಜಮಾಮ್ ಉಲ್ ಹಕ್ ತಮ್ಮದೇ ಆದ ಶೈಲಿಯ ಭವಿಷ್ಯ ನುಡಿದಿದ್ದಾರೆ. ಅದಲ್ಲದೇ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಲಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ವಿರುದ್ದವು ಮಾತನಾಡಿ, ಈ ತಂಡ ಅತ್ಯಂತ ರೋಚಕವಾಗಿರಲಿದೆ. ವಿಜಯಲಕ್ಷ್ಮಿ ಕೊನೆಯ ಓವರ್ ನ ಕೊನೆಯ ಬಾಲ್ ನಲ್ಲಿ ನಿರ್ಧಾರವಾದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.

ಇನ್ನು ವಿಶ್ವಕಪ್ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದಿರುವ ಇಂಜಮಾಮ್, ಭಾರತ ತಂಡದ ಎಲ್ಲಾ ಆಟಗಾರರು ಐಪಿಎಲ್ ನಲ್ಲಿ ಇದೇ ಪಿಚ್ ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅದಲ್ಲದೇ ಆಡಿರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ಬಲಿಷ್ಠ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡವನ್ನ ಸುಲಭವಾಗಿ ಮಣಿಸಿದೆ. ಇದರ ಜೊತೆ ಭಾರತ ತಂಡ ಈ ಮೊದಲಿನಂತೆ ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ. ತಂಡದಲ್ಲಿರುವ ಹನ್ನೊಂದು ಆಟಗಾರರು ಸದ್ಯ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ತಂಡದ ಮ್ಯಾನೇಜ್ ಮೆಂಟ್ ಗೆ ಆಡುವ ಹನ್ನೊಂದು ಆಟಗಾರರು ಯಾರನ್ನ ಆಯ್ಕೆ ಮಾಡಬೇಕು ಎಂಬ ಸಮಸ್ಯೆ ಇದೆ. ಹಾಗಾಗಿ ಭಾರತಕ್ಕೆ ಈ ಭಾರಿ ವಿಶ್ವಕಪ್ ಗೆಲ್ಲುವ ಅವಕಾಶಗಳು ಹೆಚ್ಚಿವೆ ಎಂದು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ. ನಿಮ್ಮ ಪ್ರಕಾರ ಈ ಭಾರಿ ವಿಶ್ವಕಪ್ ನ್ನ ಯಾವ ತಂಡ ಗೆಲ್ಲಬಹುದು ಎಂಬ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.