Neer Dose Karnataka
Take a fresh look at your lifestyle.

ಭಾರತೀಯ ಮಹಿಳೆಯರನ್ನು ಮದುವೆಯಾಗಿರುವ ಪಾಕಿಸ್ತಾನದ ಕ್ರಿಕೇಟಿಗರು ಯಾರ್ಯಾರು ಗೊತ್ತೇ?? ಹೇಗಿದ್ದಾರೆ ಗೊತ್ತಾ ಇವರ ಹೆಂಡತಿಯರು??

19

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಹಾಗೆ ಮದುವೆಗೆ ದೇಶ ,ಖಂಡಗಳ ಹೊರಗೆ ಇರುತ್ತದೆ. ಅದರಲ್ಲೂ ಕ್ರಿಕೇಟಿಗರು ಬೇರೆ ದೇಶದವರನ್ನ ಮದುವೆಯಾಗಿರುವ ಹಲವಾರು ಉದಾಹರಣೆಗಳನ್ನ ನಾವು ನೋಡಿದ್ದೇವೆ. ವಿಶೇಷವಾಗಿ ಪಾಕಿಸ್ತಾನದ ಕ್ರಿಕೇಟ್ ಆಟಗಾರರು ಭಾರತೀಯ ಮಹಿಳೆಯನ್ನ ಮದುವೆಯಾಗಿರುವ ಹಲವಾರು ಉದಾಹರಣೆಗಳು ಇವೆ. ಸದ್ಯ ಪಾಕಿಸ್ತಾನದ ಪರ ಕ್ರಿಕೇಟ್ ಆಡುತ್ತಿರುವ ಐವರು ಕ್ರಿಕೇಟಿಗರು ಭಾರತೀಯ ಮಹಿಳೆಯರನ್ನ ಮದುವೆಯಾಗಿದ್ದಾರೆ. ಬನ್ನಿ ಅವರ ಬಗ್ಗೆ ತಿಳಿಯೋಣ.

ಮೊದಲನೆಯದಾಗಿ ಹಸನ್ ಅಲಿ – ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಭಾರತದ ಅಳಿಯ. ಹೌದು ಇವರು ಮದುವೆಯಾಗಿರುವುದು ಹರಿಯಾಣ ಮೂಲದ ಸಾಮಿಯಾ ಅರ್ಜೂ ರವರನ್ನ. ಸದ್ಯ ದಂಪತಿಗಳಿಬ್ಬರು ದುಬೈನಲ್ಲಿ ವಾಸವಾಗಿದ್ದಾರೆ.

ಎರಡನೆಯದಾಗಿ ಇಮಾದ್ ವಾಸಿಮ್ – ಪಾಕಿಸ್ತಾನ ತಂಡದ ಭರವಸೆಯ ಆಲ್ ರೌಂಡರ್ ಇಮಾದ್ ವಾಸಿಮ್ ಸಹ ಭಾರತೀಯ ಮೂಲದವರನ್ನ ಮದುವೆಯಾಗಿದ್ದಾರೆ. 2019 ರಲ್ಲಿ ಸಾನಿಯಾ ಅಶ್ಫಕ್ ರನ್ನ ಇಸ್ಲಾಮಾಬಾದ್ ನಲ್ಲಿ ಮದುವೆಯಾದರು. ಸಾನಿಯಾ ಸದ್ಯ ಲಂಡನ್ ನಲ್ಲಿ ವಾಸವಾಗಿದ್ದಾರೆ.

ಮೂರನೆಯದಾಗಿ ಶೋಯೆಬ್ ಮಲೀಕ್ – ಇದು ಎಲ್ಲರಿಗೂ ತಿಳಿದಿರುವ ವಿಷಯ. ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯೆಬ್ ಮಲೀಕ್, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ.

ನಾಲ್ಕನೆಯದಾಗಿ ಮಹಮದ್ ಹಫೀಜ್ – ಪಾಕಿಸ್ತಾನ ತಂಡದ ಆಲ್ ರೌಂಡರ್ ಹಾಗೂ ಹಿರಿಯ ಆಟಗಾರ ಹಫೀಜ್ ಸಹ ಭಾರತದ ಅಳಿಯ. ಇವರು 2007 ರಲ್ಲಿಯೇ ಭಾರತ ಮೂಲದ ನಾಜಿಯಾರವರನ್ನ ವಿವಾಹವಾಗಿದ್ದಾರೆ.

ಐದನೆಯದಾಗಿ ಸರ್ಫರಾಜ್ ಅಹಮದ್ – ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ವಿಕೇಟ್ ಕೀಪರ್ ಸರ್ಫರಾಜ್ ಸಹ ಭಾರತದ ಅಳಿಯರಾಗಿದ್ದಾರೆ. ಇವರು ಭಾರತೀಯ ಮೂಲದ ಸಯೆದಾ ಖುಷ್ಭಕ್ತರವರನ್ನ ಮದುವೆಯಾಗಿದ್ದಾರೆ. ದಂಪತಿಗೆ ಇಬ್ಬರೂ ಮಕ್ಕಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.