Neer Dose Karnataka
Take a fresh look at your lifestyle.

ಆಶ್ರಮಕ್ಕೆ ಹೋಗಿ ಬಂದ ನಂತರ ನಿರ್ಧಾರ ಬದಲಿಸಿದರೇ ಸಮಂತಾ??ಸಿಹಿ ಸುದ್ದಿ ನೀಡಲು ಮುಂದಾದರೆ ಸಮಂತಾ, ನಡೆಯುತ್ತಿರುವುದಾದರೂ ಏನು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿರುವ ವಿಷಯವೆಂದರೆ ನಟಿ ಸಮಂತ ಹಾಗೂ ನಟ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ದಿ. ಅನಿರೀಕ್ಷಿತವಾಗಿ ಇಬ್ಬರೂ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವುದು ಕೇವಲ ಅವರ ಮನೆಯವರಿಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಕೂಡ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಹೌದು ಗೆಳೆಯರೇ ಏಳು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ 2017 ರಲ್ಲಿ ಮದುವೆಯಾಗಿದ್ದಂತಹ ನಟಿ ಸಮಂತ ಹಾಗೂ ನಾಗಚೈತನ್ಯ ರವರು ಈಗ ವಿವಾಹ ವಿಚ್ಛೇದನವನ್ನು ನೀಡುವ ಮೂಲಕ ತಮ್ಮ ಸಂಬಂಧಕ್ಕೆ ಕೊನೆ ಹಾಡಿದ್ದಾರೆ.

ನಟಿ ಸಮಂತಾ ರವರು ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡವರು. ಇನ್ನು ನಟ ನಾಗಚೈತನ್ಯ ರವರು ಕೂಡ ನಟನಾಗಿ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಪ್ರತಿಭೆ ಯಾಗಿದ್ದಾರೆ. ಆದರೆ ಇವರಿಬ್ಬರ ನಡುವೆ ಯಾವ ಕಾರಣಕ್ಕಾಗಿ ಮನಸ್ತಾಪ ಮೂಡಿಬಂದು ಇವರಿಬ್ಬರು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎಂಬ ಮಾತು ಇಂದು ಕೂಡ ಗಾಳಿ ಸುದ್ದಿ ಹರಿದಾಡುತ್ತಿದೆ ಹೊರತು ಇಬ್ಬರು ಕೂಡ ಇದರ ಕುರಿತಂತೆ ಎಲ್ಲಿಯೂ ಮಾತನಾಡಿಲ್ಲ.

ಹೀಗಾಗಿ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಕುರಿತಂತೆ ಸಾಕಷ್ಟು ಗಾಳಿಸುದ್ದಿಗಳು ಯುಟ್ಯೂಬ್ ಚಾನೆಲ್ ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇನ್ನು ಕೆಲವರು ಹೇಳುವಂತೆ ಹಿಂದಿಯಲ್ಲಿ ಇತ್ತೀಚಿಗೆ ಸಾಕಷ್ಟು ಬೋಲ್ಡ್ ದೃಶ್ಯಗಳಲ್ಲಿ ಸಮಂತ ರವರು ನಟಿಸಿದ್ದ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಮೊದಲ ಬಾರಿಗೆ ತಿಳಿದುಬಂದಿದ್ದು ಇವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಸಮಂತ ಅಕ್ಕಿನೇನಿ ಎಂಬ ಹೆಸರನ್ನು ಕೇವಲ ಸಮಂತ ಅಥವಾ ಎಸ್ ಎಂಬುದಾಗಿ ಬದಲಾಯಿಸಿಕೊಂಡಿದ್ದರು.

ಇದರಿಂದಾಗಿ ಇವರಿಬ್ಬರ ನಡುವೆ ಏನೋ ಮೈಮನಸ್ಸುಗಳು ಪ್ರಾರಂಭವಾಗಿದೆ ಎಂಬುದಾಗಿ ಹೊಗೆ ಹರಿದಾಡಲಾರಂಭಿಸಿದವು. ಇನ್ನು ಇದೆ ಅಕ್ಟೋಬರ್ 2 ರಂದು ಇದನ್ನು ನಾಗಚೈತನ್ಯ ಹಾಗೂ ಸಮಂತ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡುವುದರ ಮುಖಾಂತರ ಇವರಿಬ್ಬರು ವೈವಾಹಿಕ ಜೀವನದಿಂದ ದೂರವಾಗುವ ಒಪ್ಪಿಗೆಯನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.

ಇದರಿಂದಾಗಿ ಒಮ್ಮೆಲೆ ಅಭಿಮಾನಿಗಳು ದುಃಖಿತರಾಗಿದ್ದಾರೆ. ಇನ್ನು ಇಷ್ಟು ಮಾತ್ರವಲ್ಲದೆ ನಾಗಚೈತನ್ಯ ರವರ ತಂದೆಯಾಗಿರುವ ನಾಗಾರ್ಜುನ ರವರು ಕೂಡ ಇದು ಹೀಗೆ ಆಗಬಾರದಿತ್ತು. ​ಆದರೆ ಏನು ಮಾಡುವುದು ಆಗಿಹೋಗಿದೆ ಇಬ್ಬರಿಗೂ ಕೂಡ ಒಳ್ಳೆಯದಾಗಲಿ ಇಂದಿಗೂ ಕೂಡ ಸಮಂತ ನಮ್ಮ ಮನೆಯ ಮಗಳೇ ಎಂಬುದಾಗಿ ಹೇಳಿಕೊಂಡಿದ್ದರು. ಇನ್ನು ಇದಾದ ನಂತರ ಸಾಕಷ್ಟು ಸುದ್ದಿಗಳು ಕೂಡ ಇವರಿಬ್ಬರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಇದರಿಂದಾಗಿ ಬೇಸರವಾಗಿದ್ದ ಸಹಸಂಬಂಧ ಅವರು ಇತ್ತೀಚೆಗಷ್ಟೇ ಕಾನೂನಾತ್ಮಕವಾಗಿ ಕೂಡ ಇದರ ಕುರಿತಂತೆ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದರು.

ಆದರೆ ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಸಮಂತ ಹಾಗೂ ನಾಗಚೈತನ್ಯ ರವರ ಪೋಷಕರು ಮತ್ತೆ ಚರ್ಚೆಗೆ ಕುಳಿತಿದ್ದು, ಮುಂದಿನ ದಿನಗಳಲ್ಲಿ ಇವರಿಬ್ಬರ ಭವಿಷ್ಯ ಏನಾಗಲಿದೆ ಎಂಬುದರ ಕುರಿತಂತೆ ನಿರ್ಧರಿಸಲಿದ್ದಾರೆ ಅಂತೆ. ಇಲ್ಲಿ ಏನಾಗಬಹುದು ಎಂಬುದು ನಿಮ್ಮ ನಿರೀಕ್ಷೆ ಆಗಿದೆ ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ

Leave A Reply

Your email address will not be published.