Neer Dose Karnataka
Take a fresh look at your lifestyle.

ವಿಜಯಲಕ್ಷ್ಮಿ ರವರ ಬಹುದಿನದ ಆಸೆ ಈಡೇರಿಸಿದ ಡಿ ಬಾಸ್ ದರ್ಶನ್, ಕ್ರಾಂತಿ ಚಿತ್ರುಕ್ಕೂ ಮುನ್ನವೇ ನೀಡಿದ ವಿಶೇಷ ಉಡುಗೊರೆ ಏನು ಗೊತ್ತೇ??

12

ನಮಸ್ಕಾರ ಸ್ನೇಹಿತರೇ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರ ಇದೇ ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾಗಿತ್ತು. ರಾಬರ್ಟ್ ಚಿತ್ರ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸನ್ನು ಕಂಡಿತ್ತು. ಇನ್ನು ಇದೇ ಕಾರಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಯಾವುದೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಿಲ್ಲ ಬೇರೆ ನಟರ ಚಿತ್ರಗಳು ಬಿಡುಗಡೆಯಾಗಲಿ ಎಂಬುದಾಗಿ ಬಿಡುವನ್ನು ತೆಗೆದುಕೊಂಡಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಸ್ನೇಹಿತರೊಂದಿಗೆ ಹಲವಾರು ಪ್ರವಾಸಕ್ಕೆ ಕೂಡ ತೆರಳಿದ್ದರು. ಮತ್ತು ತಮ್ಮ ಮೈಸೂರಿನ ತೋಟದ ಮನೆಯಲ್ಲಿ ಕೃಷಿಕಾರ್ಯದಲ್ಲಿ ಕೊಡತೊಡಗಿದರು. ನಿಮಗೆ ತಿಳಿದಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹೆಚ್ಚಾಗಿ ಸಮಯ ಕಳೆಯುವುದು ತಮ್ಮ ಸ್ನೇಹಿತರ ಜೊತೆ ಅಲ್ಲವೇ. ಇನ್ನು ಈ ಬಿಡುವಿನ ಸಂದರ್ಭದಲ್ಲಿ ಹೆಚ್ಚಾಗಿ ಅವರು ಸಮಯ ಕಳೆದಿದ್ದು ತಮ್ಮ ಸ್ನೇಹಿತರೊಡನೆ ಅದು ಕೂಡ ಬೈಕ್ ರೈಡಿಂಗ್ ನಲ್ಲಿ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರದ ಚಿತ್ರೀಕರಣ ನೆನ್ನೆಯಿಂದ ಪ್ರಾರಂಭವಾಗಿದ್ದು ಇದಕ್ಕೂ ಮುನ್ನ ತಮ್ಮ ಪತ್ನಿ ವಿಜಯಲಕ್ಷ್ಮಿಯವರಿಗೆ ಒಂದು ಸ್ಪೆಷಲ್ ಉಡುಗೊರೆ ನೀಡಿದ್ದಾರೆ.

ಅದೇನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಚ್ಚಾಗಿ ತಮ್ಮ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುತ್ತಾರೆ ಹೀಗಾಗಿ ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ನೆನ್ನೆಯಷ್ಟೇ ಕ್ರಾಂತಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು ಚಿತ್ರೀಕರಣ ಪ್ರಾರಂಭವಾದ ಮೇಲೆ ಕುಟುಂಬಕ್ಕೆ ಸಮಯ ನೀಡುವುದು ಕಷ್ಟಸಾಧ್ಯ ಹೀಗಾಗಿ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಅವರ ಜೊತೆಗೆ ಕರ್ನಾಟಕ ರಾಜ್ಯದಾದ್ಯಂತ ಎರಡು ವಾರಗಳ ಕಾಲ ಅದ್ದೂರಿ ಪ್ರವಾಸವನ್ನು ಮಾಡಿದ್ದಾರೆ. ಕೇವಲ ಮೈಸೂರಿನ ಸುತ್ತಮುತ್ತ ಮಾತ್ರವಲ್ಲದೆ ಉತ್ತರ ಕರ್ನಾಟಕದ ಪ್ರವಾಸವನ್ನು ಕೂಡ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಫೋಟೋ ಹಾಗೂ ವಿಡಿಯೋಗಳು ಡಿ ಬಾಸ್ ಹಾಗೂ ವಿಜಯಲಕ್ಷ್ಮಿಯವರ ಕುರಿತಂತೆ ಆಗಿರುವುದು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ಇನ್ನು ಸದ್ಯಕ್ಕೆ ಚಿತ್ರೀಕರಣದ ಮೂಡ್ ಗೆ ತೆರಳಿರುವ ಡಿ ಬಾಸ್ ಕ್ರಾಂತಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳು ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಕಾತುರರಾಗಿದ್ದಾರೆ.

Leave A Reply

Your email address will not be published.