Neer Dose Karnataka
Take a fresh look at your lifestyle.

ಬಾರಿ ಸದ್ದು ಮಾಡಿದ್ದ ಈ ಮದುವೆಗೆ ಕಾರಣ ಹಣನಾ?? ನಿಜವಾಗಲೂ ಶಂಕ್ರಣ್ಣ ಅವರ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ??

10

ನಮಸ್ಕಾರ ಸ್ನೇಹಿತರೇ ನೀವೆಲ್ಲಾ ಇತ್ತೀಚಿನ ದಿನಗಳಲ್ಲಿ ಅನಿರುದ್ಧ್ ಹಾಗೂ ಮೇಘ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ದಾರವಾಹಿಯನ್ನು ನೋಡುತ್ತಿರಬಹುದು. ಹೌದು ಅದರಲ್ಲಿ ತನಗಿದ್ದ 20 ವರ್ಷದ ಹೆಚ್ಚಿನ ವಯಸ್ಸಿನ ಆರ್ಯವರ್ಧನ್ ಅನ್ನು ಅನು ಎಂಬಾಕೆ ಪ್ರೀತಿಸುತ್ತಿರುತ್ತಾಳೆ ಎಂಬುದನ್ನು ನೋಡಿರುತ್ತೀರಿ.

ಇಷ್ಟು ಮಾತ್ರ ಏಕೆ ಅದೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಕೂಡ ಇದೇ ರೀತಿಯ ಕಥೆಯ ಪುನರಾವರ್ತನೆ ಆಗಿದೆ. ಇವೆರಡು ಧಾರವಾಹಿಯನ್ನು ನೆನಪಿಸುವಂತಹ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದ್ದು ನೀವೆಲ್ಲ ಕೇಳಿರುತ್ತೀರಿ. ಶಂಕ್ರಣ್ಣ ಎಂಬ 45 ವರ್ಷದ ವ್ಯಕ್ತಿಯನ್ನು 20ವರ್ಷದ ಶ್ವೇತ ಎಂಬಾಕೆ ಮೂರು ವರ್ಷಗಳಿಂದ ಪ್ರೀತಿಸಿ ನಂತರ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು. ಈ ಕುರಿತಂತೆ ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಕೂಡ ಆಗಿತ್ತು. ಇವರಿಬ್ಬರ ಕುರಿತಂತೆ ಸಾಕಷ್ಟು ಟ್ರೋಲ್ ಗಳನ್ನು ಕೂಡ ಮಾಡಲಾಗಿತ್ತು. ಅದೇನೆಂದರೆ ಶ್ವೇತ ದುಡ್ಡಿಗಾಗಿ ಇವನನ್ನು ಮದುವೆ ಆಗಿದ್ದಾಳೆ ಎಂಬುದಾಗಿ. ಹೌದು ಸ್ನೇಹಿತರೇ, ಈ ರೀತಿಯ ಮಾತುಗಳು ಸಾಕಷ್ಟು ಕೇಳಿ ಬರುತ್ತಿವೆ ಆದರೆ ಅಸಲಿಗೆ ಅಲ್ಲಿ ಇರುವ ಆಸ್ತಿ ಎಷ್ಟಿದೆ ಅಂತ ತಿಳಿಸುತ್ತೇವೆ ಕೇಳಿ.

ಹಾಗಿದ್ದರೆ ಶಂಕ್ರಣ್ಣನ ಆಸ್ತಿ ಎಷ್ಟಿದೆ ಎಂಬುದನ್ನು ತಿಳಿದು ಕೊಳ್ಳೋಣ ಬನ್ನಿ. ಈ ಕುರಿತಂತೆ ಸಂದರ್ಶಕರು ಶಂಕ್ರಣ್ಣನನ್ನು ಪ್ರಶ್ನಿಸಿದಾಗ ನಾನೊಬ್ಬ ರೈತ ನನ್ನ ಬಳಿ ಎಷ್ಟು ಆಸ್ತಿ ಇದ್ದೀತು ನೀವೇ ಹೇಳಿ ಎಂಬುದಾಗಿ ಹೇಳಿದ್ದಾರೆ. ಇವರ ಬಳಿ ಯಾವುದೇ ಬಂಗಲೆ ಇಲ್ಲ ಕೇವಲ ಸಾಧಾರಣವಾದ ಹಳ್ಳಿ ಮನೆ ಇದೆ. ಹಾಗೂ 20 ಎಕರೆ ಕೃಷಿ ಭೂಮಿ ಇದೆ ಎಂಬುದಾಗಿ ಹೇಳಿದ್ದಾರೆ. ಇವರಿಬ್ಬರ ಮದುವೆ ವಿಚಾರದ ಕುರಿತಂತೆ ಯಾರೇನೇ ಹೇಳಲಿ ಇವರಿಬ್ಬರು ಸುಖ ಸಂತೋಷದಿಂದ ದಾಂಪತ್ಯ ಜೀವನವನ್ನು ನಡೆಸಲಿ ಎಂದು ಹಾರೈಸೋಣ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Leave A Reply

Your email address will not be published.