Neer Dose Karnataka
Take a fresh look at your lifestyle.

ತೆಲುಗು, ತಮಿಳು ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಚಿತ್ರರಂಗದವರು ಪುನೀತ್ ರವರ ಕುರಿತು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದು ಹೇಳಿದರೆ ಕಂಡಿತವಾಗಿ ತಪ್ಪಾಗಲಾರದು. ಸಿನಿಮಾಗಿಂತ ಆಚೆಗೂ ಕೂಡ ಮೇರು ವ್ಯಕ್ತಿತ್ವವನ್ನು ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಎಲ್ಲರ ನೆಚ್ಚಿನ ಮನೆ ಮಗನಾಗಿದ್ದರು. ಕನ್ನಡ ಚಿತ್ರರಂಗದ ದೇವರು ಎಂದೇ ಖ್ಯಾತರಾಗಿರುವ ಅಣ್ಣಾವ್ರ ಮಗನಾಗಿದ್ದರೂ ಕೂಡ ಯಾವುದೇ ಹಮ್ಮು-ಬಿಮ್ಮುಗಳಿಲ್ಲದ ಎಲ್ಲರಿಗೂ ಕೂಡ ಮರ್ಯಾದೆ ಗೌರವಗಳನ್ನು ನೀಡುತ್ತಿದ್ದಂತಹ ಗುಣವಂತ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ದುಃಖ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಅವರ ಅಗಲಿಕೆಗೆ ಕಣ್ಣೀರನ್ನು ಹಾಕಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಪರಭಾಷೆಯ ಖ್ಯಾತ ನಟ-ನಟಿಯರು ಕೂಡ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ಬೇರೆ ಭಾಷೆಗಳಲ್ಲಿ ನಟಿಸದಿದ್ದರು ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಲವಾರು ದೊಡ್ಡ ನಟರ ಸ್ನೇಹವನ್ನು ಕೂಡ ಹೊಂದಿದ್ದರು. ಕನ್ನಡ ಚಿತ್ರರಂಗದ ಸ್ನೇಹಜೀವಿ ಪುನೀತ್ ರಾಜಕುಮಾರ್ ಎಂದರೆ ಕೂಡ ಅತಿಶಯೋಕ್ತಿಯಲ್ಲ.

ಇನ್ನು ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ರವರು ಪುನೀತ್ ರಾಜಕುಮಾರ್ ರವರ ಅನಿರೀಕ್ಷಿತ ನಿಧನದಿಂದಾಗಿ ನಾನು ಸ್ಥಬ್ದ ಆಗಿದ್ದೇನೆ. ನಾನು ಕಂಡಂತಹ ವ್ಯಕ್ತಿಗಳಲ್ಲಿ ಪುನೀತ್ ತುಂಬ ವಿನಮ್ರ ವ್ಯಕ್ತಿತ್ವವುಳ್ಳ ನಟ. ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ಅವರನ್ನು ಕಳೆದುಕೊಂಡಿರುವ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಹೇಳಿದ್ದಾರೆ. ಇನ್ನು ಸಚಿವ ಆರ್ ಅಶೋಕ್ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅನಿರೀಕ್ಷಿತ ನಿಧನದಿಂದಾಗಿ ದುಖಿತ ನಾಗಿದ್ದೇನೆ ಹಂಚಿಕೊಂಡಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದಿಂದಾಗಿ ಇಲ್ಲಿ ಯಾರೂ ಶಾಶ್ವತವಲ್ಲ ಜೀವನವನ್ನು ಆದಷ್ಟು ಬೇಗ ವಾಗಿ ಆನಂದಿಸಿ ಎಂಬುದಾಗಿ ತಿಳಿ ಮಾತನ್ನು ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘದ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡ ಗೊಂಬೆ ಹೇಳುತೈತೆ ನೀನೇ ರಾಜಕುಮಾರ ಎಂಬುದಾಗಿ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸುವ ಪ್ರಯತ್ನವನ್ನು ಮಾಡಿದ್ದಾರೆ.

ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಮಲಯಾಳಂ ಚಿತ್ರರಂಗದ ಲೆಜೆಂಡರಿ ನಟರಾದಂತಹ ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ದುಲ್ಕರ್ ಸಲ್ಮಾನ್ ಪ್ರಥ್ವಿರಾಜ್ ಸುಕುಮಾರನ್ ಬಾಲಿವುಡ್ ಚಿತ್ರರಂಗದ ಅಭಿಷೇಕ್ ಬಚ್ಚನ್ ಹೀಗೆ ಹಲವಾರು ನಟರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ರವರನ್ನು ಸ್ಮರಿಸಿಕೊಳ್ಳುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ದೈಹಿಕವಾಗಿ ನಮ್ಮನ್ನೆಲ್ಲ ಆಗಲಿರುವ ಬೆಟ್ಟದ ಹೂವು ಪುನೀತ್ ರಾಜಕುಮಾರ್ ರವರು ಸದಾ ಎಂದೆಂದಿಗೂ ನಮ್ಮೊಂದಿಗೆ ನೆಲೆಸಿದ್ದಾರೆ ಎಂಬುದಾಗಿ ಹೇಳಬಲ್ಲೆ.

ಜೊತೆಗಿರದ ಜೀವ ಸದಾ ಎಂದಿಗಿಂತ ಜೀವಂತ ಇದು ಅವರ ಚಿತ್ರದ ಸಾಲುಗಳು. ಎಂದಿಗೂ ಕೂಡ ನಮ್ಮ ಮನಸ್ಸಿನ ಮನದಾಳದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸದಾ ಅಜರಾಮರರಾಗಿ ಉಳಿದುಕೊಂಡಿರುತ್ತಾರೆ. ಅವರು ಕನ್ನಡ ಚಿತ್ರರಂಗಕ್ಕೆ ನೀಡಿದಂತಹ ಕೊಡುಗೆ ಸದಾ ಚಿರನೂತನ. ಕೇವಲ 46 ವರ್ಷಕ್ಕೆ ತಮ್ಮ ಬದುಕಿನ ಪಯಣವನ್ನು ಮುಗಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಲವಾರು ಅಭಿಮಾನಿಗಳನ್ನು ದುಃಖಕ್ಕೆ ತಳ್ಳಿದ್ದಾರೆ. ಆದರೆ ಅವರ ಸದಾ ಹಸನ್ಮುಖಿ ಮುಖ ಎಂದಿಗೂ ಕೂಡ ನಮ್ಮ ಮನಸ್ಸಿನಲ್ಲಿ ಅವರ ನೆನಪು ಬಂದಾಗಲೆಲ್ಲ ಕಾಡುವುದು ಸಹಜ.

Comments are closed.