Neer Dose Karnataka
Take a fresh look at your lifestyle.

ಪುನೀತ್ ರವರಿಗೆ ಹೀಗೆ ಆಗಬಹುದೇ?? ಬೇರೆ ಎಲ್ಲ ಬಿಡಿ, ದೇವರಿಗೆ ಪುನೀತ್ ರವರ ಈ ಕೆಲಸ ಕಾಣಲಿಲ್ಲವೇ?? ನಿಜಕ್ಕೂ ಕಣ್ಣೀರು ಬರುತ್ತದೆ ಸ್ವಾಮಿ.

5

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ನಟನಾಗಿ ಮಾತ್ರವಲ್ಲದೆ ಸಿನಿಮಾದಿಂದ ಆಚೆಗೂ ಕೂಡ ಉತ್ತಮವಾದ ವ್ಯಕ್ತಿತ್ವವನ್ನು ಹೊಂದಿರುವವರು. ಅಂತಹ ಚಿನ್ನದಂತಹ ಮನುಷ್ಯನನ್ನು ಇಂದು ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ಜನತೆ ಕಳೆದುಕೊಂಡಿದ್ದಾರೆ.

ನಮ್ಮ ಅಪ್ಪು ಕೇವಲ ಚಿತ್ರರಂಗದಲ್ಲಿ ಹಲವಾರು ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಸಹಾಯ ಮಾಡಿದ್ದಾರೆ ಎಂಬುದಾಗಿ ಕೇಳಿ ತಿಳಿದುಕೊಂಡಿದ್ದೇವೆ. ಆದರೆ ಸಿನಿಮಾದ ಹೊರತಾಗಿಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹಲವಾರು ಒಳ್ಳೆಯ ಕೆಲಸಗಳನ್ನು ಹಾಗೂ ಸಹಾಯಗಳನ್ನು ಮಾಡಿದ್ದಾರೆ. ಆದರೆ ಅದರ ಕುರಿತಂತೆ ಎಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಪ್ರಚಾರ ಗಿಟ್ಟಿಸಿ ಕೊಂಡಿರಲಿಲ್ಲ. ಇಂದು ಅವುಗಳ ಕುರಿತಂತೆ ನಾವು ನಿಮಗೆ ಹೇಳುತ್ತೇವೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡುತ್ತಿರುವ ಸಾಮಾಜಿಕ ಸೇವೆಗಳು, 26 ಅನಾಥಾಶ್ರಮ 45 ಚಿತ್ರಶಾಲೆ 16 ವೃದ್ಧಾಶ್ರಮ 19 ಗೋಶಾಲೆ 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿಧಾಮ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕನ್ನಡದ ಏಕೈಕ ನಟ ಎಂದರೆ ಅದು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಪ್ಪು. ಇಷ್ಟು ಮಾತ್ರವಲ್ಲದೆ ತಾವು ಯಾವುದೇ ಸಿನಿಮಾಗಳಿಗೆ ಹಾಡಿದರು ಕೂಡ ಅದರಿಂದ ಬರುವ ಸಂಭಾವನೆಯನ್ನು ಅನಾಥಾಶ್ರಮಕ್ಕಾಗಿ ನೀಡುತ್ತಾರೆ. ಇಂತಹ ಚಿನ್ನದ ಮನುಷ್ಯನ ಬಂಗಾರದ ವ್ಯಕ್ತಿತ್ವವನ್ನು ಕಳೆದುಕೊಂಡಂತಹ ನಾವೇ ನತದೃಷ್ಟರು ಎಂದು ಹೇಳಬಹುದಾಗಿದೆ. ಇನ್ನು ಯಾವತ್ತೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ಮಾಡಿರುವ ಸಹಾಯದ ಹಾಗೂ ಸಮಾಜ ಸೇವೆಯ ಕುರಿತಂತೆ ಎಲ್ಲಿ ಕೂಡ ಹೇಳಿಕೊಂಡು ಪ್ರಚಾರವನ್ನು ಪಡೆದುಕೊಂಡಿರಲಿಲ್ಲ. ಇದು ಅವರ ವ್ಯಕ್ತಿತ್ವದ ಮುಖ್ಯವಾದ ಗುಣ ಎಂದು ಹೇಳಬಹುದು.

Leave A Reply

Your email address will not be published.