Neer Dose Karnataka
Take a fresh look at your lifestyle.

ಮೊದಲು ಲೋಹಿತ್ ಎಂಬ ಹೆಸರು ಪುನೀತ್ ಆಯಿತು, ಆದರೆ ಅಪ್ಪು ಎಂದು ಹೆಸರು ಇಟ್ಟದ್ದು ಯಾರು ಗೊತ್ತೇ? ಸಿನಿಮಾದಲ್ಲಿ ಅಂತೂ ಅಲ್ಲವೇ ಅಲ್ಲಾ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಧ್ರುವತಾರೆ ಪುನೀತ್ ರಾಜಕುಮಾರ್ ಅವರನ್ನು ನಾವು ಈಗ ಕಳೆದುಕೊಂಡ ದುಃಖದಲ್ಲಿದ್ದೇವೆ. ಅದನ್ನು ಎಷ್ಟೇ ಮರೆಯೋದಕ್ಕೆ ಪ್ರಯತ್ನ ಪಟ್ಟರೂ ಕೂಡ ಮರೆಯಲಾಗದಂತಹ ನೋವನ್ನು ನಮ್ಮ ಹೃದಯದಲ್ಲಿ ಆಳವಾಗಿ ನೆಟ್ಟು ಬಿಟ್ಟುಹೋಗಿದೆ. ಇನ್ನು ಅದನ್ನೆಲ್ಲ ಬಿಟ್ಟು ನಾವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನವನ್ನು ನೋಡುವುದಾದರೆ.

ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಬಾಲನಟನಾಗಿ ಎಂಟ್ರಿ ನೀಡಿ ಹತ್ತನೇ ವಯಸ್ಸಿಗೆ ಯಾರು ಕೂಡ ಮಾಡಲಾಗದಂತಹ ರಾಷ್ಟ್ರಪ್ರಶಸ್ತಿ ವಿಜೇತ ಸಾಧನೆಯನ್ನು ಮಾಡಿದ್ದಾರೆ. ಹುಟ್ಟಿದಾಗಲೇ ಸ್ಟಾರ್ ಪಟ್ಟವನ್ನು ಪಡೆದುಕೊಂಡು ಬಂದಂತಹ ಕನ್ನಡ ಚಿತ್ರರಂಗದ ದೇವರ ಮಗ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಂದರೆ ಚಿಕ್ಕವಯಸ್ಸಿನ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರು ಲೋಹಿತ್ ಎನ್ನುವುದಾಗಿತ್ತು. ಇದಾದ ನಂತರ ಅವರನ್ನು ಪುನೀತ್ ರಾಜಕುಮಾರ್ ಎಂಬುದಾಗಿ ಹೆಸರಿಟ್ಟು ಕರೆಯಲಾಯಿತು.

ಆದರೆ ಇಡೀ ಜಗತ್ತು ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದದ್ದು ಅಪ್ಪು ಎಂಬುದಾಗಿ. ಮನೆಯವರು ಕೂಡ ಅಪ್ಪು ಎನ್ನುತ್ತಿದ್ದರು ಅಭಿಮಾನಿಗಳು ಅಪ್ಪು ಬಾಸ್ ಎಂದು ಕರೆಯುತ್ತಿದ್ದರು. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರೂ ಕೂಡ ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಹಾಗಿದ್ದರೆ ಈ ಅಪ್ಪು ಎಂಬ ಹೆಸರನ್ನು ಪುನೀತ್ ರಾಜಕುಮಾರ್ ರವರಿಗೆ ಇಟ್ಟಿದ್ದು ಯಾರು ಎಂಬುದರ ಕುರಿತಂತೆ ನಾವು ನಿಮಗೆ ಹೇಳುತ್ತೇವೆ. ಹೌದು ಗೆಳೆಯರೇ ಪುನೀತ್ ರಾಜಕುಮಾರ್ ರವರಿಗೆ ಅಪ್ಪು ಎನ್ನುವ ಹೆಸರನ್ನು ಇಟ್ಟಿದ್ದು ರಾಜಕುಮಾರ್ ಅವರ ತಾಯಿ ಪುನೀತ್ ರಾಜಕುಮಾರ್ ಅವರ ಅಜ್ಜಿ ಲಕ್ಷ್ಮಮ್ಮ. ಲಕ್ಷ್ಮಮ್ಮ ನವರಿಗೆ ಪುನೀತ್ ರಾಜಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ ಅದಕ್ಕಾಗಿ ಅವರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯಲು ಆರಂಭಿಸಿದರು. ಇದೇ ಮುಂದೆಹೋಗಿ ಎಲ್ಲರ ಬಾಯಲ್ಲೂ ಪ್ರೀತಿಯಿಂದ ಕರೆಯುವ ಹೆಸರು ಆಗಿಬಿಟ್ಟಿತು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೊದಲ ಚಿತ್ರದ ಹೆಸರು ಕೂಡ ಅಪ್ಪು ಎಂದಾಗಿತ್ತು. ಆದರೆ ಈಗ ಅಪ್ಪು ಎಂದು ಕರೆಯಲು ಅವರೇ ಇಲ್ಲ.

Comments are closed.