Neer Dose Karnataka
Take a fresh look at your lifestyle.

ಇನ್ನು ಸಿಗದ ಖಚಿತ ಮಾಹಿತಿ, ಪುನೀತ್​ ಆಸ್ಪತ್ರೆಗೆ ಬಂದಾಗ ಸಹಜವಾಗಿಯೇ ಇದ್ದರು ಹಾಗಿದ್ದರೇ ತಪ್ಪು ನಡೆದ್ದದೇಲ್ಲಿ, ವೈದ್ಯರು ಏನು ಹೇಳಿದ್ದಾರೆ ಗೊತ್ತೇ??

13

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇಂದು ನಮ್ಮೊಂದಿಗೆ ಇಲ್ಲ ಆದರೆ ಅವರು ನಿಧನರಾಗಿರುವ ಕುರಿತಂತೆ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಗೊಂದಲವನ್ನು ತಿಳಿಗೊಳಿಸಲು ಈ ಕುರಿತಂತೆ ನಿಮಗೆ ವಿವರವಾಗಿ ಹೇಳಲಿದ್ದೇವೆ. ಹೌದು ಗೆಳೆಯರೇ ಈ ಕುರಿತಂತೆ ಅವರನ್ನು ಮೊದಲ ಬಾರಿಗೆ ಪರೀಕ್ಷಿಸಿರುವ ಫ್ಯಾಮಿಲಿ ಡಾಕ್ಟರ್ ರಮಣ ರಾವ್ ಈ ಕುರಿತಂತೆ ಮಾಹಿತಿ ನೀಡಿದ್ದಾರೆ.

ಹೌದು ಅಕ್ಟೋಬರ್ 29ರ ಬೆಳಿಗ್ಗೆ 11.15 ರ ಸುಮಾರಿಗೆ ಪುನೀತ್ ರಾಜಕುಮಾರ್ ರವರು ನಿಯಮಿತ ವರ್ಕೌಟ್ ಸೆಷನ್ ಹಾಗೂ ಸ್ಟೀಮಿಂಗ್ ಮಾಡಿದ ನಂತರ ಸುಸ್ತಾದ ಕಾರಣದಿಂದಾಗಿ ಫ್ಯಾಮಿಲಿ ಡಾಕ್ಟರ್ ರಮಣರಾವ್ ರವರ ಬಳಿ ಬಂದಿದ್ದಾರೆ. ಅಲ್ಲಿ ಬಿಪಿ ಹಾಗೂ ಹೃದಯ ಬಡಿತವನ್ನು ಚೆಕ್ ಮಾಡಿದಾಗ ಏನು ಕಾಣಿಸಿಕೊಂಡಿರಲಿಲ್ಲ. ನಂತರ ಇಸಿಜಿ ಮಾಡಿದಾಗ ಏನೋ ತೊಂದರೆ ಇದೆ ಎಂಬಂತೆ ಭಾಸವಾಗುತ್ತದೆ. ಅದಾದ ನಂತರ ಕೂಡಲೇ ವಿಕ್ರಮ ಆಸ್ಪತ್ರೆಗೆ ಹೋಗಲು ಹೇಳಿದ್ದಾರೆ. ಅದೇ ಕೂಡಲೆ ಹೊರಟರು ಕೂಡ ವಿಕ್ರಂ ಆಸ್ಪತ್ರೆಗೆ ತಲುಪುವ ಮುನ್ನವೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಸುನೀಗಿದರು.

ಇದರ ಕುರಿತಂತೆ ಪ್ರತಿಕ್ರಿಯಿಸುತ್ತಾ ರಮಣ್ ರಾವ್ ರವರು ಪುನೀತ್ ರಾಜಕುಮಾರ್ ರವರ ಶ್ರಮದಾಯಕ ವರ್ಕೌಟ್ ನಿಂದಾಗಿ ಏಕಾಏಕಿ ಹೃದಯ ಸ್ತಂಭನವಾಗಿ ಇರಬಹುದು. ಈ ಕಾರಣದಿಂದಾಗಿಯೇ ಹೃದಯದ ಪರಿಧಮನಿ ಹಾಗೂ ಅಪಧಮನಿ ಛಿದ್ರ ವಾಗಿರಬಹುದು ಎಂಬುದಾಗಿ ಹೇಳಿದ್ದಾರೆ. ಪುನೀತ್ ರಾಜಕುಮಾರ್ ರವರಿಗೆ ಯಾವುದೇ ವಿಧವಾದ ಕಾಯಿಲೆಯಿರಲಿಲ್ಲ ಅವರು ಹಿಂದಿನ ರಾತ್ರಿ ಬರ್ತಡೇ ಪಾರ್ಟಿಯಲ್ಲಿ ಕೂಡ ಸಹಜವಾಗಿ ಕಾಣಿಸಿಕೊಂಡಿದ್ದರು. ಆದರೆ ಅನಿರೀಕ್ಷಿತ ಹೃದಯಾಘಾತದಿಂದಾಗಿ ಅನಿರೀಕ್ಷಿತವಾಗಿ ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತವಾಗಿ ಪುನೀತ್ ರಾಜಕುಮಾರ್ ಅವರು ನಿಧನರಾಗಿ ಇರಬಹುದು ಆದರೆ ಅದರ ನೋವನ್ನು ನಿಜವಾಗಿ ಪಡೆದು ಕೊಂಡಿರುವವರು ಕರ್ನಾಟಕದ ಜನತೆ.

Leave A Reply

Your email address will not be published.