Neer Dose Karnataka
Take a fresh look at your lifestyle.

ಯಾರಿಗೂ ಸಿಗದ ಗೌರವವನ್ನು ಪುನೀತ್ ರವರಿಗೆ ನೀಡಲು ಒಂದಾಗಿ ದಕ್ಷಿಣ ಭಾರತ ಚಿತ್ರರಂಗ ಮಾಡುತ್ತಿರುವುದಾದರೂ ಏನು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವೆಲ್ಲರೂ ಕರೆದುಕೊಂಡು ಈಗಾಗಲೇ ಒಂದು ವಾರಕ್ಕೂ ಮೀರಿದೆ. ಆದರೂ ಕೂಡ ಅವರನ್ನು ನೆನ್ನೆ ಮೊನ್ನೆಯಷ್ಟೇ ನೋಡಿದಂತಹ ಭಾವನೆ ಮನಸ್ಸಿನಲ್ಲಿ ಅಳಿಯದೇ ಉಳಿದುಕೊಂಡಿದೆ. ಹೌದು ಗೆಳೆಯರೇ ಭಜರಂಗಿ 2 ಚಿತ್ರದಲ್ಲಿ ಶಿವಣ್ಣ ಹಾಗೂ ಯಶ್ ಜೊತೆ ಅಪ್ಪು ಸ್ಟೆಪ್ಸ್ ಹಾಕಿದ್ದು ಗುರುಕಿರಣ್ ರವರ ಜನ್ಮ ದಿನ ಸಂಭ್ರಮಾಚರಣೆಯಲ್ಲಿ ಅವರು ಸಂತೋಷದಿಂದ ಪಾಲ್ಗೊಂಡಿದ್ದು. ಹೀಗೆ ಎಲ್ಲವೂ ಕೂಡ ಕೆಟ್ಟ ಕನಸಿನಂತೆ ಭಾಸವಾಗುತ್ತಿದೆ.

ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 5ನೇ ದಿನದ ಹಾಲು ತುಪ್ಪ ಕಾರ್ಯಕ್ರಮ ಕುಟುಂಬದಿಂದ ಪೂರ್ಣವಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿಗೆ ವೀಕ್ಷಿಸಲು ಈಗಾಗಲೇ 25 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ದಾರೆ ಎಂಬುದು ಜಾಗತಿಕವಾಗಿ ಕೂಡ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ವೀಕ್ಷಿಸಲು ದೇಶದ ಹಲವಾರು ಭಾಗಗಳಿಂದ ಗಣ್ಯಾತಿಗಣ್ಯರು ಬಂದಿದ್ದರು. ಸ್ವತಹ ಪ್ರಧಾನಮಂತ್ರಿ ಮೋದಿ ಅವರೇ ಪುನೀತ್ ರಾಜಕುಮಾರ್ ರವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಇನ್ನು ಈಗ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನವೆಂಬರ್ 16ಕ್ಕೆ ಪುನೀತ ನಮನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ದೊಡ್ಡಮನೆ ಕುಟುಂಬಸ್ಥರು ಹೊರರಾಜ್ಯಗಳ ಟಾಪ್ ನಟರು ಕೂಡ ಭಾಗವಹಿಸಲಿದ್ದಾರೆ, ಅವರು ಈಗಾಗಲೇ ತಾವೇ ಬರುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಮುಖರಾಗಿರುವ ಸಾರಾ ಗೋವಿಂದ್ ಅವರು ಹೇಳುವಂತೆ ನಾಗೇಂದ್ರ ಪ್ರಸಾದ್ ರವರು ಪುನೀತ್ ರಾಜಕುಮಾರ್ ಅವರ ಕುರಿತಂತೆ ರಚಿಸಿರುವ ಹೊಸ ಗೀತೆಯ ಮೂಲಕ ಪ್ರಾರಂಭವಾಗುವ ಈ ಕಾರ್ಯಕ್ರಮ ಹಲವಾರು ಪುನೀತ್ ರಾಜಕುಮಾರ್ ಅವರ ಚಿತ್ರದ ಹಾಡುಗಳ ಮೂಲಕ ಮುಂದುವರೆಯಲಿದೆ. ಇನ್ನು ಈ ಕುರಿತಂತೆ ಅವರು ಶಿವಣ್ಣ ಹಾಗೂ ರಾಘಣ್ಣನ ಅವರಲ್ಲಿ ಸಲಹೆ ಹಾಗೂ ಒಪ್ಪಿಗೆಯನ್ನು ಕೂಡ ಪಡೆದು ಕೊಂಡಿದ್ದಾರೆ.

Leave A Reply

Your email address will not be published.