Neer Dose Karnataka
Take a fresh look at your lifestyle.

ಯಾವುದೇ ಮನುಷ್ಯನಲ್ಲಿ ಈ ಮೂರು ಗುಣಗಳಿದ್ದರೆ, ಏನೇ ಮಾಡಿದರು ಯಶಸ್ವಿಯಾಗುವುದಿಲ್ಲ. ಯಾವ್ಯಾವು ಹಾಗೂ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮ್ಮಲ್ಲಿ ಈ ಮೂರು ಗುಣಗಳಿದ್ದರೆ ನೀವು ಎಂದಿಗೂ ಕೂಡ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಹೌದು ಇಂದು ಜಗತ್ತಿನಲ್ಲಿರುವ ಒಟ್ಟು ಹಣ ಕೇವಲ ಶೇಕಡಾ 10 ರಷ್ಟು ಜನರ ಬಳಿ ಇದೆ. ಉಳಿದ ಶೇಕಡಾವಾರು 90 ಭಾಗ ಜನರಲ್ಲಿ ಈ ಹಣಕ್ಕಾಗಿ ಹಪಾಹಪಿಸುತ್ತಾರೆ. ಜೀವನವೆಲ್ಲಾ ಹಗಲಿರುಳು ದುಡಿದರೂ ಕೂಡ ಅವರಿಗೆ ಯಶಸ್ಸು ಎಂಬುದು ಕನಸಾಗಿಯೇ ಉಳಿದಿರುತ್ತದೆ. ಕೆಲವರು ಮಾತ್ರ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಾ ಸಾಗುತ್ತಿರುತ್ತಾರೆ. ಹಾಗಾದರೆ ಯಶಸ್ಸು ಕಾಣುತ್ತಿರುವ ವ್ಯಕ್ತಿಗಳಿಗೂ ಅಭಿವೃದ್ದಿ ಕಾಣದೆ ಬರೀ ಸಮಸ್ಯೆ,ಸಂಕಷ್ಟಗಳಿಗೆ ಒಳಗಾಗಿ ತೊಂದರೆ ಅನುಭವಿಸುತ್ತಿರುವ ವ್ಯಕ್ತಿಗಳಿಗೂ ವ್ಯತ್ಯಾಸವಾದರೂ ಏನು ಎಂಬುದನ್ನ ತಿಳಿಯುವುದಾದರೆ. ಯಾವ ವ್ಯಕ್ತಿ ಸ್ವತಃ ತಮ್ಮ ಮೇಲೆ ತಾವೇ ಸಂಶಯ ಪಡುತ್ತಾರೋ ಅವರಿಗೆ ಯಾವುದೇ ಕಾರಣಕ್ಕೂ ಯಶಸ್ಸು ಪ್ರಗತಿ ಎಂಬುದು ದೊರೆಯುವುದಿಲ್ಲ.

ಇಡೀ ಜಗತ್ತೇ ಅವರನ್ನ ನಂಬಿದರು ಸಹ ಅವರಿಗೆ ಅವರ ಮೇಲೆಯೇ ನಂಬಿಕೆ,ವಿಶ್ವಾಸ ಇಲ್ಲದಿದ್ದಾಗ ಅವರ ಕೆಲಸ ಕಾರ್ಯಗಳಲ್ಲಿ ಒಳಿತು ಕಾಣಲು ಸಾಧ್ಯವಾಗುತ್ತದೆ ಎಂಬುದು ಅಸ್ಪಷ್ಟ ನಿಲುವೇ ಸರಿ. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಜಗತ್ತಿನಲ್ಲಿ ಯಾರೂ ಕೂಡ ದುರ್ಬಲರಲ್ಲ. ಪ್ರತಿಯೊಬ್ಬರಲ್ಲಿಯೂ ಸಹ ಅತ್ಯುತ್ತಮ ಸಾಮರ್ಥ್ಯ ಶಕ್ತಿ ಇರುತ್ತದೆ.ಅದನ್ನ ನಾವು ಹೇಗೆ ಕಂಡುಕೊಂಡು ಹೊರ ಬರುತ್ತೇವೆ. ಒಳ ಮನಸ್ಸನ್ನು ತೆರೆದು ಪ್ರಪಂಚವನ್ನು ನೋಡಿದಾಗ ಸತ್ಯ ದರ್ಶನ ನಮಗಾಗುತ್ತದೆ.

ಹೀಗಾಗಿ ಪ್ರತಿಯೊಬ್ಬರು ಕೂಡ ನನ್ನಲ್ಲಿ ಅಗಾಧವಾದ ಶಕ್ತಿಯಿದೆ. ನಾನು ಎಂತಹ ವಿಚಾರಗಳನ್ನು ಕೂಡ ಕಲಿಯಬಲ್ಲೇ,ಗೆಲ್ಲಬಲ್ಲೇ ನನ್ನಿಂದ ಈ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂಬ ಆತ್ಮ ವಿಶ್ವಾಸ ನಂ‌ಬಿಕೆಯನ್ನು ಹೊಂದಿರಬೇಕು. ಇನ್ನು ಎರಡನೇಯದಾಗಿ ನಮ್ಮಲ್ಲಿ ಇರುವ ನ್ಯೂನತೆ ಅಂದರೆ ನಂಬಿಕೆ. ಕೆಲವು ಬಾರಿ ನಮ್ಮ ಮೇಲೆ ಸಂಶಯ ಇಟ್ಟಿರುವಂತೆ ಅನುಮಾನವನ್ನು ಕೂಡ ಆಗಾಗ ವ್ಯಕ್ತಪಡಿಸುವುದುಂಟು. ಈ ರೀತಿಯಾಗಿ ಅಪನಂಬಿಕೆ ಇರಬಾರದು. ಯಾಕೆಂದರೆ ನಮ್ಮಲ್ಲಿರುವ ಆತ್ಮ ವಿಶ್ವಾಸ ನಮ್ಮನ್ನು ಅರ್ಧದಷ್ಟು ಜಯಶೀಲರಾಗಿ ಮಾಡುವಂತೆ ಪ್ರೇರೇಪಿಸುತ್ತದೆ. ಯಾವುದು ಅಸಾಧ್ಯವಲ್ಲ ನನ್ನಿಂದ ಈ ಕಾರ್ಯ ಕೆಲಸ ನಡೆಯುತ್ತದೆ ಎಂಬ ನಂಬಿಕೆ ಇದ್ದರೆ ಖಂಡಿತವಾಗಿಯೂ ಕೂಡ ಇದು ಸಾದ್ಯವಾಗುತ್ತದೆ. ಯಶಸ್ಸನ್ನು ಪಡೆಯುತ್ತೀರಿ. ಇತರರು ನಿಮ್ಮ ಸಾಮರ್ಥ್ಯ ಅಳೆಯುವುದಕ್ಕೆ ಅವಕಾಶ ಮಾಡಕೊಡಬೇಡಿ.

ಯಾರೇ ಏನೇ ಕೊಂಕು ಮಾತು,ವ್ಯಂಗ್ಯ ಮಾಡಿದರು ಕೂಡ ಅದರಿಂದ ನಾವು ಧೃತಿಗೆಡದೆ ನಮ್ಮ ಮೇಲೆ ನಾವು ನಂಬಿಕೆ ಇಟ್ಟು ಕೆಲಸ ಮಾಡಬೇಕು.ಇದಕ್ಕೆ ಒಂದು ಉತ್ತಮ ಸಕರಾತ್ಮಕ ಉದಾಹರಣೆ ತಿಳಿಸುವುದೆಂದರೆ ರಸ್ತೆಯಲ್ಲಿ ಹೀಗೆ ಬಲೂನ್ ವ್ಯಾಪಾರಿಯೊಬ್ಬ ಬಣ್ಣ ಬಣ್ಣದ ಬಲೂನ್ ಗಳನ್ನು ಮಾರಾಟ ಮಾಡುತ್ತಿರುತ್ತಾನೆ.ಅಲ್ಲಿಗೆ ಬಂದ ಮಕ್ಕಳು ವಿವಿಧ ರೀತಿಯ ಆಕರ್ಷಕ ಬಣ್ಣ ಬಣ್ಣದ ಬಲೂನ್ ಗಳನ್ನ ನೋಡುತ್ತಾ ನಿಲ್ಲುತ್ತಾರೆ.ಅಲ್ಲಿ ಒಂದೊಂದು ಬಲೂನ್ ಗಳು ಒಂದೊಂದು ಅಂತರದಲ್ಲಿ ಎತ್ತರವಾಗಿ ಹಾರಾಡುತ್ತಿರುತ್ತವೆ.ಹುಡುಗನೊಬ್ಬನಿಗೆ ಅನುಮಾನ ಬರುತ್ತದೆ.ಅದೇನೂ ನೀಲೀ ಬಣ್ಣದ ಬಲೂನ್ ಅಷ್ಟು ಎತ್ತರದಲ್ಲಿ ಹಾರಾಡುತ್ತಿದೆ.ಕೆಂಪು ಬಣ್ಣದ ಬಲೂನ್ ಇಲ್ಲೆ ಹತ್ತಿರದಲ್ಲಿ ಹಾರಾಡುತ್ತಿದೆ.ಗಾತ್ರದಲ್ಲಿಯೂ ಕೂಡ ಚಿಕ್ಕದಾಗಿದೆ.ಇದಕ್ಕೆ ಕಾರಣ ಏನು ಎಂದು ಬಲೂನ್ ವ್ಯಾಪಾರಿಯನ್ನು ಹುಡುಗ ಕೇಳುತ್ತಾನೆ.ಇದಕ್ಕೆ ಉತ್ತರಿಸಿದ ವ್ಯಾಪಾರಿ ನೋಡು ಹುಡುಗ,ಈ ಬಲೂನ್ ಗಳು ಮೇಲೆತ್ತರಕ್ಕೆ ಹಾರಡುತ್ತಿರುವುದು ಅವುಗಳ ಬಣ್ಣದಿಂದಲ್ಲ ಅದರೊಳಗಿರುವ ಗಾಳಿಯಿಂದಾಗಿ ಎಂದು ಹೇಳುತ್ತಾನೆ.

ಅಂದರೆ ಇದರ ನೀತಿ ಏನನ್ನು ತಿಳಿಸುತ್ತದೆ ಅಂದರೆ ಮುಖ ನೋಡಿ ಮಣೆ ಹಾಕೋದು ಎಂಬು ಮಾತಿನಂತೆ ಮೇಲೆ ನಾವು ಎಷ್ಟು ಸುಂದರವಾಗಿದ್ದರು,ಶಿಸ್ತಿನ ಸಿಪಾಯಿಗಳಂತೆ ಸ್ವಚ್ಚವಾದ ಐರನ್ ಸಹಿತ ಉಡುಪುಗಳನ್ನು ತೊಟ್ಟರೆ ಮಾತ್ರ ನಾವು ಗೆಲ್ಲುವುದಿಲ್ಲ.ಆಂತರ್ಯ ಮನದಲ್ಲಿ ಆತ್ಮವಿಶ್ವಾಸ ತುಂಬಿಕೊಂಡು ನಮ್ಮ ಮೇಲೆ ನಾವು ನಂಬಿಕೆ ಹೊಂದಿದ್ದರೆ ಸಾಕು ನಾವು ಅಂದುಕೊಂಡದ್ದನ್ನ ಸಾಧಿಸುತ್ತೇವೆ.ಅಂತೆಯೇ ಮೂರನೇದಾಗಿ ನಾವು ನಮ್ಮನ್ನು ಮೊದಲು ಪ್ರೀತಿಸಬೇಕು.ಇದು ತುಂಬಾ ಮುಖ್ಯ.ನಮ್ಮನ್ನು ನಾವೇ ಇಷ್ಟ ಪಡದೇ ಹೋದಲ್ಲಿ ಇನ್ನೊಬ್ಬರನ್ನು ಹೇಗೆ ಪ್ರೀತಿಸುತ್ತೇವೆ.ಅದರಿಂದ ಪ್ರಯೋಜನವಾದರೂ ಏನೂ.ನಮ್ಮನ್ನ ನಾವು ಇಷ್ಟ ಪಟ್ಟು ಮತ್ತೊಬ್ಬರನ್ನ ಇಷ್ಟ ಪಟ್ಟಾಗ ಅದಕ್ಕೆ ಅರ್ಥ ಸಿಗುತ್ತದೆ.ಇಲ್ಲವಾದಲ್ಲಿ ಆದು ವ್ಯರ್ಥವೇ ಸರಿ.ಹೀಗೆ ಯಾವ ವ್ಯಕ್ತಿ ಇಂತಹ ವ್ಯಕ್ತಿತ್ವ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾನೋ ಅವರು ಜೀವನದಲ್ಲಿ ಉತ್ತುಂಗಕ್ಕೆ ಏರುತ್ತಾರೆ.

Comments are closed.