Neer Dose Karnataka
Take a fresh look at your lifestyle.

ಪುನೀತ್ ನೋಡಿಕೊಳ್ಳುತ್ತಿದ್ದ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದ ವಿಶಾಲ್ ವಿರುದ್ಧ ಹೊಸ ಆರೋಪ ಮಾಡಿದ ವಿಜಯಲಕ್ಷ್ಮಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮಿ ಅವರ ಕುರಿತಂತೆ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಸುದ್ದಿ ಮಾಡಿದ್ದವು. ಈಗ ಮತ್ತೊಮ್ಮೆ ನಟಿ ವಿಜಯಲಕ್ಷ್ಮೀ ಅವರು ಸುದ್ಧಿಯಾಗುತ್ತಿದ್ದಾರೆ. ಈ ಹಿಂದೆ ನಟಿ ವಿಜಯಲಕ್ಷ್ಮಿ ಅವರ ಸುದ್ದಿಯಾಗುತ್ತಿದ್ದಕ್ಕೆ ಮುಖ್ಯ ಕಾರಣವೇನೆಂದರೆ ಅವರು ಹಲವಾರು ಬಾರಿ ತಮ್ಮ ಜೀವನವನ್ನು ಮುಗಿಸಿಕೊಳ್ಳಲು ಹೋಗಿದ್ದರು.

ಇಷ್ಟು ಮಾತ್ರವಲ್ಲದೆ ಅವರ ಅಕ್ಕ ಹಾಗೂ ಅಮ್ಮನಿಗಾಗಿ ಆಸ್ಪತ್ರೆ ಖರ್ಚನ್ನು ಭರಿಸಲು ಸಾಕಷ್ಟು ಬಾರಿ ವಿಡಿಯೋಗಳನ್ನು ಕೂಡ ಮಾಡಿದ್ದರು. ಇದಾದ ನಂತರ ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ಅವರ ತಾಯಿ ನಿಧನರಾದ ನಂತರ ವಿಜಯಲಕ್ಷ್ಮಿ ಅವರು ಅಕ್ಕನನ್ನು ಕರೆತಂದು ರೂಮ್ ಮಾಡಿಕೊಂಡು ಜೀವಿಸುತ್ತಿದ್ದಾರೆ. ಆದರೆ ಈಗ ಮತ್ತೆ ಒಬ್ಬ ಖ್ಯಾತ ತಮಿಳು ನಟನ ವಿರುದ್ಧ ವಿಡಿಯೋ ಮಾಡಿದ್ದಾರೆ. ಹೌದು ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ರವರ ವಿರುದ್ಧ ನಟಿ ವಿಜಯಲಕ್ಷ್ಮಿ ವೀಡಿಯೊ ಮಾಡಿರೋದು.

ವಿಡಿಯೋ ದಲ್ಲಿ ವಿಶಾಲ್ ರವರಿಗೆ ತಮ್ಮ ಅಕ್ಕನ ಆಪರೇಷನ್ ಸಮಯದಲ್ಲಿ ಆರ್ಥಿಕ ನೆರವನ್ನು ಕೇಳಿ ಫೋನ್ ಮಾಡಿದಾಗ ಸಹಾಯ ಮಾಡುತ್ತೇನೆಂದು ಹೇಳಿ ನಂತರ ಫೋನ್ ಎತ್ತಿರಲಿಲ್ಲ. ನಂತರ ಅಕ್ಕನನ್ನು ವಾಪಸ್ ಕರೆತರಲಾಯಿತು ಎಂಬುದಾಗಿ ಹೇಳಿದ್ದಾರೆ. ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಇತ್ತೀಚಿಗಷ್ಟೇ ವಿಶಾಲ್ ರವರು ಪುನೀತ್ ರಾಜಕುಮಾರ್ ರವರು ನೋಡಿಕೊಳ್ಳುತ್ತಿದ್ದ 1800 ಮಕ್ಕಳಿಗೆ ಉಚಿತ ಶಿಕ್ಷಣವನ್ನು ನಾನು ನೀಡುತ್ತೇನೆ ಎಂಬುದಾಗಿ ಹೇಳಿದ್ದಾರಲ್ಲವೇ ಇವರ ಇತಿಹಾಸ ಹೀಗಿದೆ ಇಂಥವರಿಗೆ ನಮ್ಮವರು ಪ್ರೋತ್ಸಾಹಿಸುತ್ತಿದ್ದಾರೆ. ಆದರೆ ನನ್ನನ್ನು ಬೇರೆ ರೀತಿಯ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಎಂಬುದಾಗಿ ನಟಿ ವಿಜಯಲಕ್ಷ್ಮಿ ಅವರು ತಮ್ಮ ವೀಡಿಯೋ ದಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.