Neer Dose Karnataka
Take a fresh look at your lifestyle.

ಧರ್ಮಸ್ಥಳದಲ್ಲಿರುವ ಈ ಒಂದು ಅಚ್ಚರಿಯನ್ನು ನೀವು ಕೇಳಿರಲು ಸಾಧ್ಯವೇ ಇಲ್ಲ, ಈ ಹೊಸ ಅಚ್ಚರಿಯ ಬಗ್ಗೆ ನಿಮಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಲೂಕಿನಲ್ಲಿರುವ ಧರ್ಮಸ್ಥಳ ಮಹಾ ಮಂಜುನಾಥನ ದರ್ಶನ ಪಡೆದವರೇ ಧನ್ಯ ಅಗಾಧ ಶಕ್ತಿಯನ್ನು ಹೊಂದಿರುವ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ ಹಲವು ವೈವಿಧ್ಯತೆಗಳನ್ನು ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಕರ್ನಾಟಕದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇಲ್ಲಿಗೆ ಅರುವ ಭಕ್ತಾಧಿಗಳ ಸಂಖ್ಯೆ ಅಪಾರ. ಹತ್ತು ಹಲವು ಹರಕೆಗಳನ್ನು ಕಟ್ಟಿಕೊಂಡು ಮಂಜುನಾಥನಲ್ಲಿಗೆ ಬರುವ ಭಕ್ತಾಧಿಗಳು ಧನ್ಯತಾಭಾವದಿಂದಲೇ ಹಿಂದಿರುಗುತ್ತಾರೆ.

ಧರ್ಮಸ್ಥಳ ಕೇವಲ ಮಂಜುನಾಥನ ದೇವಾಲಯಕ್ಕೆ ಮಾತ್ರ ಹೆಸರಾಗಿಲ್ಲ, ಬದಲಿಗೆ ಇಲ್ಲಿರುವ ಹಲವಾರು ವಿಚಾರಗಳು ಪ್ರವಾಸಿಗರ ಮನಸೆಳೆಯುತ್ತವೆ. ಹೌದು ಧರ್ಮಸ್ಥಳದ ಮಂಜುನಾಥನನ್ನು ನೆನೆದರೆ ಯಾರಿಗೇ ಆಗಲಿ, ಅವರ್ ಬಯಸಿದ ಬೇಡಿಕೆಯನ್ನು ಇಡೇರಿಸುತ್ತಾನೆ ಶಿವ ಎಂದೇ ಹೇಳಲಾಗುತ್ತದೆ. ಹಾಗಾಗಿ ಇಲ್ಲಿಗೆ ಪ್ರತಿವರ್ಷ ಬರುವ ಜನಸಾಗರವೂ ಅಪಾರ. ಇಲ್ಲಿ ಹಲವು ಹರಕೆಗಳನ್ನು ತೀರಿಸಲು ಭಕ್ತಾಧಿಗಳು ಬರುತ್ತಾರೆ.

ಧರ್ಮಸ್ಥಳದ ವೈಶಿಷ್ಟ್ಯತೆಗಳನ್ನು ನೋಡುವುದಾದರೆ, ಮೊದಲನೆಯದಾಗಿ ತುಲಾಭಾರ. ಒಂದು ಕಡೆಗೆ ಭಕ್ತ ಹಾಗೂ ಇನ್ನೊಂದು ಕಡೆಗೆ ಅವರದ್ದೇ ತೂಕದ, ಅವರು ದೇವರಿಗೆ ಅರ್ಪಿಸಲು ಬಯಸುವ ವಸ್ತುಗಳನ್ನು ಇನ್ನೊಂದು ತಕ್ಕಡಿಯಲ್ಲಿಟ್ಟು ತುಲಾಭಾರ ಮಾಡಲಾಗುತ್ತದೆ. ಈ ಹರಕೆಯನ್ನು ಸಾಮಾನ್ಯರು ಮಾತ್ರವಲ್ಲ ಅದೆಷ್ಟೋ ಸೆಲಿಬ್ರೆಟಿಗಳೂ ಕೂಡ ಬಂದು ಮಾಡಿ ಹೋಗಿದ್ದಾರೆ. ಇನ್ನು ಇಲ್ಲಿ ಸಾಮೂಹಿಕ ಮದುವೆ, ನೇತ್ರಾವತಿ ನೀರಿನಲ್ಲಿ ಸ್ನಾನ, ಸಾಮೂಹಿಕ ಭೋಜನ ಮೊದಲಾದವುಗಳೂ ಕೂಡ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿವೆ.

ಇನ್ನು ಇತ್ತೀಚಿಗೆ ಧರ್ಮಸ್ಥಳದತ್ತ ಇನ್ನಷ್ಟು ಜನರನ್ನು ಆಕರ್ಷಿಸುತ್ತಿರುವುದು, ಅಲ್ಲಿನ ಎಲ್ಲರ ಮೆಚ್ಚಿನ ಶಿವಾನಿ. ಹೌದು, ಮಾನ್ಯ ವೀರೇಂದ್ರ ಹೆಗ್ಗಡೆಯವರೇ ಕುಟುಂಬದ ಸದಸ್ಯಳನ್ನಾಗಿ ಮಾಡಿಕೊಂಡಿರುವ ಮರಿ ಆನೆ ಶಿವಾನಿ. ಇದರ ಆಟಪಾಠಗಳು ಭಕ್ತಾಧಿಗಳಿಗೆ ಅತ್ಯಂತ ಸಂತೋಷವನ್ನು ನೀಡುತ್ತಿದೆ. ಜೊತೆಗೆ ಮಂಜೂಷಾ ವಸ್ತು ಸಂಗ್ರಹಾಲಯ, ಕಾರ್ ಗಳ ಪ್ರದರ್ಶನ ಇವೆಲ್ಲವೂ ದೇವಸ್ಥಾನದ ಒಂದು ಭಾಗ. ಇನ್ನು ಮಂಜುನಾಥೇಶ್ವರ ಸಂಸ್ಥೆ ಹಲವು ಶಾಲಾ ಕಾಲೇಜುಗಳನ್ನು, ಆಸ್ಪತ್ರೆಗಳನ್ನೂ ನಡೆಸುತ್ತಿದ್ದು, ಬಡವರ ಪಾಲಿಗೆ ವರದಾನವಾಗಿದೆ.

ಕರ್ನಾಟಕದ ಎಲ್ಲಾ ಭಾಗಗಳಿಂದಲೂ ಧರ್ಮಸ್ಥಳಕ್ಕೆ ಭೇಟಿ ನೀಡಲು ಬಸ್ ಗಳು ಲಭ್ಯ. ನೀವು ಇದುವರೆಗೂ ಈ ಮಹಾನ್ ಕ್ಷೇತ್ರಕ್ಕೆ ಭೇಟಿ ನೀಡದೇ ಇದದ್ರೆ ತಪ್ಪದೇ ಭೇಟಿ ಕೊಡಿ, ಆ ಮಂಜುನಾಥನ ಕೃಪೆಗೆ ಪಾತ್ರರಾಗಿ.

Comments are closed.