Neer Dose Karnataka
Take a fresh look at your lifestyle.

ಸೆಲೆಬ್ರೆಟಿ ಎಂದು ಗೊತ್ತೇ ಆಗದೇ ಪುನೀತ್ ರವರ ಸಮಾಧಿ ಬಳಿ ಹೋಗಿ ಮೇಘನರಾಜ್ ಮಾಡಿದ್ದೇನು ಗೊತ್ತಾ?? ಕಣ್ಣೀರು ಬರುತ್ತದೆ ಕಣ್ರೀ.

3

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ದುಃಖ ಇಂದಿಗೂ ಕೂಡ ಕಡಿಮೆಯಾಗಿಲ್ಲ. ಕೇವಲ ಇಂದಿಗೆ ಮಾತ್ರವಲ್ಲ ವರ್ಷಗಳೇ ಕಳೆದುಹೋದರೂ ಅವರ ಸ್ಥಾನವನ್ನು ಯಾರೂ ಕೂಡ ಭರಿಸಲು ಸಾಧ್ಯವಿಲ್ಲ ಅವರನ್ನು ಕಳೆದುಕೊಂಡಿರುವ ದುಃಖ ಯಾರು ಕೂಡ ಕಡಿಮೆ ಮಾಡಲು ಸಾಧ್ಯವಿಲ್ಲ.

ಅಪ್ಪು ಅವರು ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರುವಾಗಿದ್ದರು ಯಾರ ವಿರೋಧವನ್ನು ಕೂಡ ಕಟ್ಟಿಕೊಂಡಿರಲಿಲ್ಲ. ಎಲ್ಲರಿಗೂ ಕೂಡ ಅಪ್ಪು ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಅವರಿಗೆ ಹೀಗೆ ದಿಡೀರನೆ ಮರಣ ಸಂಭವಿಸಿದೆ ಎಂದರೆ ಯಾರಿಗೂ ಕೂಡ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಲ್ಲರೂ ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 12ನೇ ದಿನದ ಪ್ರಯುಕ್ತವಾಗಿ ನೆನ್ನೆಯಷ್ಟೇ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಸೇರಿದಂತೆ ರಾಘಣ್ಣ ಹಾಗೂ ಶಿವಣ್ಣ ಅಭಿಮಾನಿಗಳಿಗೆ ಊಟವನ್ನು ಬಡಿಸಿದ್ದಾರೆ. ಈ ಸಂದರ್ಭದಲ್ಲಿ ಮೇಘನರಾಜ್ ರವರು ಕೂಡ ಬಂದಿದ್ದಾರೆ.

ಅಪ್ಪು ಅವರ ಸಮಾಧಿಗೆ ಬಂದು ಮೇಘನಾ ರಾಜ್ ರವರು ನಮಿಸಿ ಕಣ್ಣೀರು ಹಾಕಿದ್ದಾರೆ. ಚಿರು ಅವರನ್ನು ಕಳೆದುಕೊಂಡಿರುವ ಒಂದು ವರ್ಷದಲ್ಲೇ ಕುಟುಂಬಕ್ಕೆ ಆತ್ಮೀಯರಾಗಿರುವ ಅಪ್ಪು ಅವರನ್ನು ಕಳೆದುಕೊಂಡಿರುವ ದುಃಖ ಇನ್ನಷ್ಟು ಮೇಘನರಾಜ್ ರವರಿಗೆ ಕಾಡಿದೆ, ನಿಜಕ್ಕೂ ಈ ಎಲ್ಲರ ದೃಶ್ಯ ಗಳನ್ನು ನೋಡುತ್ತಿದ್ದರೇ ಎಂತವರು ಕೂಡ ಒಂದು ಕ್ಷಣ ಭಾವುಕರಾಗುತ್ತಾರೆ. ಅಪ್ಪು ಅವರು ಕೇವಲ ನಟನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿ ಎಲ್ಲರಿಗೂ ಸಾಕಷ್ಟು ಇಷ್ಟವಾಗುತ್ತಾರೆ. ಇದಕ್ಕಾಗಿಯೇ ಅವರ ಅಗಲಿಕೆಯನ್ನು ತಮ್ಮ ಸ್ವಂತ ನಷ್ಟದಂತೆ ಎಲ್ಲರೂ ಭಾವಿಸುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.