Neer Dose Karnataka
Take a fresh look at your lifestyle.

ಪುನೀತ್ ರವರ ಪತ್ನಿ ಅಶ್ವಿನಿಯವರ ತಂದೆ ಯಾರು ಗೊತ್ತೇ?? ಕುಟುಂಬದ ಸಂಪೂರ್ಣ ಹಿನ್ನೆಲೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಇಷ್ಟಪಡುತ್ತಿದ್ದರು. ಯಾರೊಂದಿಗೂ ಕೂಡ ವಿರೋಧವನ್ನು ಕಟ್ಟಿಕೊಂಡವರು ಅಲ್ಲ ನಮ್ಮ ಅಪ್ಪು. ಕನ್ನಡ ಚಿತ್ರರಂಗದ ಏಳಿಗೆಗಾಗಿ ಸದಾಕಾಲ ಅವಿರತವಾಗಿ ಪರಿಶ್ರಮ ಪಡುತ್ತಿದ್ದವರು ನಮ್ಮ ಅಪ್ಪು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಎಷ್ಟು ಕೊಡುಗೆಯನ್ನು ನೀಡಿದ್ದಾರೋ ಅದಕ್ಕಿಂತ ಹೆಚ್ಚಾಗಿ ಒಬ್ಬ ನಿರ್ಮಾಪಕನಾಗಿ ತಮ್ಮ ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯುವ ಅವಕಾಶವನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಬೆಳವಣಿಗೆಯನ್ನು ತರಬೇಕು ಎಂಬುದಾಗಿ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ರೀತಿಯ ಕಥೆಗಳನ್ನು ಹಾಗೂ ಸಿನಿಮಾಗಳನ್ನು ಮಾಡುವ ಯೋಜನೆಯನ್ನು ಕೂಡ ಹಾಕಿಕೊಂಡಿದ್ದರು.

ಇನ್ನು ಪ್ರತಿಯೊಂದು ಯಶಸ್ಸಿಗೂ ಹೆಣ್ಣು ಪುರುಷನ ಹಿಂದೆ ಇರುತ್ತಾರೆ ಎಂಬ ಮಾತಿನಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಎಲ್ಲಾ ಕೆಲಸದ ಹಿಂದೆಯೂ ಕೂಡ ಅಶ್ವಿನಿ ಅವರ ಬೆಂಬಲವಿತ್ತು. ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಚಾಮರಾಜನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಿ ಗಂಧದಗುಡಿ ಎಂಬ ಡಾಕ್ಯುಮೆಂಟರಿ ಮಾಡಿ ಅದನ್ನು ಬಿಡುಗಡೆ ಮಾಡಬೇಕೆಂಬುದಾಗಿ ಕೂಡ ಅಂದುಕೊಂಡಿದ್ದರು.

ಇಷ್ಟು ಮಾತ್ರವಲ್ಲದೆ ಹೊಸ ಹೊಸ ಸಿನಿಮಾಗಳ ಘೋಷಣೆಯನ್ನು ಕೂಡ ಮಾಡಬೇಕೆಂದು ಪುನೀತ್ ರಾಜಕುಮಾರ್ ಅವರು ಅಂದುಕೊಂಡಿದ್ದರು ಆದರೆ ಆ ಕಾರ್ಯ ನಡೆಯುವ ಮೊದಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಲೋಕದಿಂದ ಹೊರನಡೆದಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರು ಇದ್ದಷ್ಟು ದಿನ ಅವರ ಕಾರ್ಯಗಳಿಗೆ ಬೆಂಬಲವಾಗಿ ನಿಂತಂತಹ ಏಕೈಕ ದೊಡ್ಡ ಶಕ್ತಿಯೆಂದರೆ ಅವರ ಪತ್ನಿ ಅಶ್ವಿನಿ. ಅಶ್ವಿನಿ ಅವರು ಯಾರು ಹಾಗೂ ಅವರ ತಂದೆ ಯಾರು ಎಲ್ಲಿನವರು ಎಂಬ ಕುರಿತಂತೆ ವಿವರವಾಗಿ ಹೇಳುತ್ತೇವೆ ಬನ್ನಿ.

ಅಶ್ವಿನಿ ಅವರ ತಂದೆ ರೇವನಾಥ್ ಬೆಂಗಳೂರು ಮಹಾನಗರಪಾಲಿಕೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಅಶ್ವಿನಿ ಅವರ ತಾಯಿ ವಿಜಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಶ್ವಿನಿ ಅವರ ತಂಗಿಯ ಹೆಸರು ಡಿಂಪಲ್ ಹಾಗೂ ತಮ್ಮನ ಹೆಸರು ವಿನಯ್ ಎಂದು. ಅಶ್ವಿನಿ ಅವರು ಮೂಲತಹ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಗಮನೆ ಗ್ರಾಮದವರು.

ಇನ್ನು ಪುನೀತ್ ರಾಜಕುಮಾರ್ ರವರು ಹಾಗೂ ಅಶ್ವಿನಿ ಅವರು ಕಾಮನ್ ಫ್ರೆಂಡ್ ಮೂಲಕ ಪರಿಚಿತರಾಗಿ ಪರಿಚಯ ಸ್ನೇಹದಿಂದ ಪ್ರೀತಿಗೆ ತಿರುಗಿ ಇಬ್ಬರು ಕೂಡ ಮನೆಯವರ ಒಪ್ಪಿಗೆ ಮೇರೆಗೆ 1999 ರಲ್ಲಿ ರಾಜರಾಜೇಶ್ವರಿನಗರದ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾರೆ. ಇನ್ನು ಮೊದಲಿನಿಂದಲೂ ಕೂಡ ಪುನೀತ್ ರಾಜಕುಮಾರ್ ಅವರಿಗೆ ಎಲ್ಲಾ ಕೆಲಸಗಳಲ್ಲಿಯೂ ಅಶ್ವಿನಿ ಅವರು ಬೆಂಗಾವಲಾಗಿ ನಿಲ್ಲುತ್ತಿದ್ದರು. ಇನ್ನುಮುಂದೆ ಅಶ್ವಿನಿ ಅವರಿಗೆ ಪುನೀತ್ ರವರ ಆಶೀರ್ವಾದ ಎಲ್ಲಾ ಕೆಲಸಗಳಲ್ಲಿ ಇರಲಿ ಎಂಬುದು ಅಭಿಮಾನಿಗಳ ಆಸೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.