Neer Dose Karnataka
Take a fresh look at your lifestyle.

ದೊಡ್ಮನೆ ಮಗ, ಕೋಟಿ ಕೋಟಿ ಹಣ ಇದ್ದರೂ ಕೂಡ ತನ್ನ ಮಕ್ಕಳನ್ನು ಯಾವ ಶಾಲೆಗೆ ಕಳುಹಿಸಿದ್ದರು ಗೊತ್ತಾ ಅಪ್ಪು??

ನಮಸ್ಕಾರ ಸ್ನೇಹಿತರೇ ನೆನ್ನೆ ಮೊನ್ನೆಯಷ್ಟೇ ಅಪ್ಪು ಅವರನ್ನು ಟಿವಿಯಲ್ಲಿ ನೋಡಿದಂತಿತ್ತು ಎಂದು ಭಾವಿಸಿದವರಿಗೆ ಅದಾಗಲೇ ಅವರ ಮರಣದ ವಾರ್ತೆ ಬರಸಿಡಿಲಿನಂತೆ ಬಂದು ಅಪ್ಪಳಿಸಿತು. ಹೌದು ಗೆಳೆಯರೇ ಅಪ್ಪು ಅವರ ಅಕಾಲಿಕ ಹಾಗೂ ಆಕಸ್ಮಿಕ ಮರಣದ ವಾರ್ತೆ ಇಂದಿಗೂ ಕೂಡ ಅರಗಿಸಿಕೊಳ್ಳಲು ಯಾರಿಗೂ ಕೂಡ ಸಾಧ್ಯವಾಗಿಲ್ಲ. ಆರು ತಿಂಗಳ ವಯಸ್ಸಿನಲ್ಲಿಯೇ ಪ್ರೇಮದ ಕಾಣಿಕೆ ಚಿತ್ರದ ಮೂಲಕ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದರು.

ಅದಾದ ನಂತರ ಹಲವಾರು ಚಿತ್ರಗಳಲ್ಲಿ ಬಾಲನಟನಾಗಿ ತಮ್ಮ ತಂದೆಯ ಜೊತೆಗೆ ಕೂಡ ನಟಿಸಿದ್ದರು. ಬೆಟ್ಟದ ಹೂವು ಚಿತ್ರದ ರಾಮ ಪಾತ್ರಕ್ಕಾಗಿ ಹತ್ತನೇ ವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದುಕೊಂಡರು. ಅದಾದ ನಂತರ ಹಲವು ವರ್ಷಗಳ ವಿರಾಮದ ನಂತರ 2002 ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ನೀಡುತ್ತಾರೆ. ಕೇವಲ ನಾಯಕನಾಗಿ ಮಾತ್ರವಲ್ಲದೆ ಅಣ್ಣಾವ್ರ ಮಗನಾಗಿ ಕೂಡ ಚಿತ್ರರಂಗದಲ್ಲಿ ಅವರು ಬಹಳಷ್ಟು ನೋಡಿಕೊಂಡು ಹೆಜ್ಜೆ ಇಡಬೇಕಾಗಿತ್ತು. ಆದರೆ ಅಣ್ಣಾವ್ರ ಹಲವಾರು ಗುಣಗಳು ಅಪ್ಪು ಅವರಿಗೆ ಜನ್ಮದತ್ತವಾಗಿ ಬಂದಿದ್ದವು.

ಅಣ್ಣಾವ್ರ ಹಲವಾರು ಗುಣಗಳನ್ನು ಜನರು ಅಪ್ಪು ಅವರಲ್ಲಿ ನೋಡುತ್ತಿದ್ದರು. ಇನ್ನು ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ 29 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಣ್ಣಾವ್ರ ಮೌಲ್ಯಗಳನ್ನು ತಮ್ಮ ಕೊನೆಯವರೆಗೂ ಕೂಡ ಪುನೀತ್ ರಾಜಕುಮಾರ್ ಅವರು ನಿರ್ವಹಿಸಿಕೊಂಡು ಬಂದಿದ್ದಾರೆ. ಅದು ಚಿತ್ರರಂಗದಲ್ಲಿ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರಲ್ಲಾಗಲಿ ಅಥವಾ ಸಾಕಷ್ಟು ಸಮಾಜ ಸೇವೆಗಳ ಮೂಲಕ ಬಡ ಜೀವಗಳ ಪಾಲಿಗೆ ಬೆಳಗಾಗುವುದರಲ್ಲಾಗಲಿ ನೀವು ಕಾಣಬಹುದಾಗಿದೆ.

ಇನ್ನು ತಂದೆಯಂತೆ ಸಿನಿಮಾಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರುತ್ತಿದ್ದರು ಹಾಗೂ ಯಾವುದೇ ಕೆಟ್ಟ ದೃಶ್ಯಗಳಲ್ಲಿ ಕೂಡ ನಟಿಸುತ್ತಿರಲಿಲ್ಲ. ಇನ್ನು ತಂದೆಯಂತೆಯೇ ಕನ್ನಡದ ಕಟ್ಟಾಳುವಾಗಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರ ನಟಿಸಿ ಡಬ್ಬಿಂಗ್ ವಿರುದ್ಧವೂ ಕೂಡ ತಮ್ಮ ಧ್ವನಿಯನ್ನು ಎತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಮರಣಾನಂತರ ಎಲ್ಲರೂ ಕೂಡ ಅಪ್ಪುವಿನಲ್ಲಿ ಅಣ್ಣಾವ್ರನ್ನು ಕಾಣುತ್ತಿದ್ದರು. ಅಷ್ಟೊಂದು ಪ್ರಜ್ಞಾವಂತ ನಡವಳಿಕೆಯನ್ನು ಪುನೀತ್ ರಾಜಕುಮಾರ್ ಅವರು ಹೊಂದಿದ್ದರು.

ಇನ್ನು ಪುನೀತ್ ರಾಜಕುಮಾರ್ ಅವರ ಕೋಟ್ಯಾಧಿಪತಿ ಆಗಿದ್ದರೂ ಕೂಡ ತಮ್ಮ ಮಕ್ಕಳನ್ನು ಸಿಂಪಲ್ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಸೇರಿದರು. ಇಷ್ಟು ಮಾತ್ರವಲ್ಲದೆ ಮಕ್ಕಳಿಗೆ ಕನ್ನಡ ಭಾಷೆ ಹಾಗೂ ಸಾಂಗ್ ಕನ್ನಡ ಸಂಸ್ಕೃತಿಯ ಕುರಿತಂತೆ ಹೆಚ್ಚಿನ ತಿಳುವಳಿಕೆ ಇರಬೇಕೆಂಬುದು ಅವರ ಮನಸ್ಸಾಗಿತ್ತು. ಅಪ್ಪು ಅವರ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೂಡ ಯಾವುದೇ ಬಾಡಿಗಾರ್ಡ್ ಇಲ್ಲದೆ ಸರಳವಾಗಿ ಸಾಮಾನ್ಯ ಪೋಷಕರಂತೆ ಬರುತ್ತಿದ್ದರು.

ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ಪುನೀತ್ ರಾಜಕುಮಾರ್ ರವರು ಕಲಿಸಿದ್ದಾರೆ. ಕೋಟ್ಯಾಧಿಪತಿ ಆಗಿದ್ದರು ಕೂಡ ತಮ್ಮ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸದೆ ಸಿಂಪಲ್ ಎಜುಕೇಶನ್ ನೀಡಿದ್ದರು. ಇದು ಪುನೀತ್ ರಾಜಕುಮಾರ್ ರವರ ಸರಳತೆಯನ್ನು ಸವಿವರವಾಗಿ ನಿಮಗೆ ಹೇಳುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.