Neer Dose Karnataka
Take a fresh look at your lifestyle.

ಕುರಿ ಕಾಯುವವರೊಂದಿಗೆ ಊಟ ಮಾಡಿ ನಂತರ ಪುನೀತ್ ಅವರಿಗೆ ಮಾಡಿದ ಸಹಾಯವೇನು ಗೊತ್ತಾ?? ಯಾರಿಗೂ ತಿಳಿಯದ ಮತ್ತೊಂದು ವಿಚಾರ ಬಯಲು

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ಸ್ವರ್ಗಸ್ಥರಾಗಿ ಹಲವಾರು ದಿನಗಳು ಕಳೆದುಹೋಗಿವೆ ಆದರೂ ಕೂಡ ಅವರ ನಗುಮುಖದಿಂದ ಇಂದಿಗೂ ಕೂಡ ನಮ್ಮ ಮನಸ್ಸಿನಾಳದಲ್ಲಿ ಅಜರಾಮರರಾಗಿದ್ದಾರೆ. ಬಾಲ್ಯದಿಂದಲೂ ಕೂಡ ತಮ್ಮ ತಂದೆಯೊಂದಿಗೆ ನಟನೆ ಮಾಡುತ್ತ 10ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡು ಬಂದಂತಹ ಅದ್ವಿತೀಯ ಪ್ರತಿಭಾವಂತ ನಮ್ಮ ಅಪ್ಪು.

ಇನ್ನು ಕೇವಲ ಚಿತ್ರರಂಗದಲ್ಲಿ ಮಾಡಿದ ಸಾಧನೆ ಮಾತ್ರವಲ್ಲದೆ ಅವರ ಸಮಾಜ ಸೇವೆಗಳು ಕೂಡ ಈಗ ಅವರು ಹೋದ ನಂತರ ಒಂದೊಂದಾಗಿ ಹೊರಬರುತ್ತಿವೆ. ಯಾರಿಗೆ ಸಹಾಯ ಮಾಡಿದರು ಕೂಡ ಅದನ್ನು ಇದುವರೆಗೂ ಕೂಡ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಇದುವರೆಗೂ ಪುನೀತ್ ರಾಜಕುಮಾರ್ ಅವರು ತಿಳಿದುಬಂದಂತೆ ಅನಾಥಾಶ್ರಮ ವೃದ್ಧಾಶ್ರಮ ಗೋಶಾಲೆಗಳು ಉಚಿತ ಶಾಲೆಗಳು 1800 ಮಕ್ಕಳಿಗೆ ಉಚಿತ ಶಿಕ್ಷಣ ಹೀಗೆ ಹಲವಾರು ದೊಡ್ಡಮಟ್ಟದ ಜನ ಸೇವೆಗಳನ್ನು ಮಾಡಿಕೊಳ್ಳುತ್ತ ಬಂದಿದ್ದಾರೆ. ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೆ ಕೂಡ ತಿಳಿಯಬಾರದು ಎಂಬುದು ಪುನೀತ್ ರಾಜಕುಮಾರ್ ಅವರ ನೀತಿಯಾಗಿತ್ತು.

ಇನ್ನು ಒಮ್ಮೆ ತಿರುಗಾಡಲು ಹೋಗಿದ್ದ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರು ಕುರಿಗಾಹಿಗಳ ಅಂದಿಗೆ ಸಿಕ್ಕು ಮಾತನಾಡಿ ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆದಿದ್ದರು. ಇಷ್ಟು ಮಾತ್ರವಲ್ಲದೆ ಅವರೊಂದಿಗೆ ನೆಲದಲ್ಲಿ ಕೂತು ಊಟವನ್ನು ಕೂಡ ಮಾಡಿ ತಮ್ಮ ಸರಳತೆಯನ್ನು ಮೆರೆದಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ 60000 ದಷ್ಟು ಹಣದ ಸಹಾಯವನ್ನು ಕೂಡ ಮಾಡಿದ್ದರು. ಆದರೆ ಇದನ್ನು ಅವರು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಇಂತಹ ಎಷ್ಟೋ ಸಹಾಯಗಳನ್ನು ಮಾಡಿದ್ದಾರೆ ನಮ್ಮ ಅಪ್ಪು ತಮ್ಮ ಆದಾಯದ 70% ಹಣವನ್ನು ಇಂತಹ ಸಾಮಾಜಿಕ ಸೇವೆಗಳಿಗಾಗಿ ಬಳಸಿದ್ದಾರೆ. ಅಂತಹ ಒಳ್ಳೆಯ ಕೆಲಸದಲ್ಲಿ ಇನ್ನೂ ಕೂಡ ಅವರು ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ.

Comments are closed.