Neer Dose Karnataka
Take a fresh look at your lifestyle.

ಅಪ್ಪು ಪುನೀತ್ ರಾಜ್ ಕುಮಾರ್ ಅವರ ಹೆಸರು ಎಂದು ನನಗೆ ತಿಳಿದಿರಲಿಲ್ಲ ಎಂದ ಟಾಲಿವುಡ್ ಗಾಯಕಿ ಮಂಗ್ಲಿ. ಅಪ್ಪು ಕುರಿತು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಾಲಿವುಡ್ ಚಿತ್ರರಂಗದ ಗಾಯಕಿ ಯಾಗಿರುವ ಮಂಗ್ಲಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಅದಿರಿಂದಿ ಎನ್ನುವ ಹಾಡಿನ ಮೂಲಕ ಕನ್ನಡಿಗರ ಮನಗೆದ್ದಿರುವುದು ನಿಮಗೆಲ್ಲಾ ಗೊತ್ತಿದೆ. ಈಗ ಪ್ರೇಮ್ ನಿರ್ದೇಶನದ ರಕ್ಷಿತಾ ಪ್ರೇಮ್ ನಿರ್ಮಾಣದ ರಾಣಾ ನಟನೆಯ ಏಕ್ ಲವ್ ಯ ಚಿತ್ರದ ಎಣ್ಣೆ ಸಾಂಗ್ ಕೂಡ ಹಾಡಿ ಇನ್ನಷ್ಟು ಕನ್ನಡ ಪ್ರೇಕ್ಷಕನ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇನ್ನು ಮೊನ್ನೆಯಷ್ಟೇ ಈ ಚಿತ್ರದ ಅದ್ದೂರಿ ಆಡಿಯೋ ಬಿಡುಗಡೆ ನಡೆದಿದ್ದು ಈ ಸಂದರ್ಭದಲ್ಲಿ ಮಂಗ್ಲಿ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಭಾವುಕರಾಗಿದ್ದಾರೆ.

ಈ ಕುರಿತಂತೆ ಮಾತನಾಡುತ್ತಾ ನಾನು ಅಕ್ಟೋಬರ್ 29ರಂದು ಸ್ಟುಡಿಯೋದಲ್ಲಿ ಆರ್ ಸಿ ಪಟ್ನಾಯಕ್ ಅವರ ಹಾಡನ್ನು ಹಾಡುತ್ತಿದ್ದೆ. ಆ ಸಂದರ್ಭದಲ್ಲಿ ಅವರಿಗೆ ಕಾಲೊಂದು ಬಂದಿತ್ತು. ಅದನ್ನು ಕೇಳಿ ಅವರು ಬಹಳಷ್ಟು ಬೇಸರವಾಗಿದ್ದರು. ಏನಾಯ್ತು ಎಂದು ನಾನು ಕೇಳಿದಾಗ ಅಲ್ಲಿ ಅವರು ಅಪ್ಪು ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎಂಬುದಾಗಿ ಹೇಳುತ್ತಾರೆ. ನಾನು ಹಾಡಿನ ಕೊನೆಯ ಹಂತಕ್ಕೆ ಬಂದಿದ್ದಾಗ ಅಲ್ಲಿ ಎಲ್ಲರೂ ಕೂಡ ಡಿಸ್ಟರ್ಬ್ ಆಗಿದ್ದರು. ಅದಾದನಂತರ ಅಪ್ಪು ಯಾರೆಂದು ನಾನು ಯೂಟ್ಯೂಬ್ನಲ್ಲಿ ನೋಡಿದಾಗ ಪುನೀತ್ ರಾಜಕುಮಾರ್ ಅವರ ಕುರಿತಂತೆ ನನಗೆ ತಿಳಿಯಿತು.

ನನಗೆ ಅವರ ಅಪ್ಪು ಹೆಸರು ತಿಳಿದಿರಲಿಲ್ಲ ಪುನೀತ್ ರಾಜಕುಮಾರ್ ಅವರನ್ನು ನಾನು ಮೊದಲಿನಿಂದಲೂ ಕೂಡ ಪಾಲು ಮಾಡಿಕೊಂಡು ಬಂದವಳು. ಆ ಸುದ್ದಿ ಕೇಳಿ ನನಗೆ ಎಲ್ಲಿಲ್ಲದ ಬೇಸರ ಹಾಗು ದುಃಖಗಳು ಒಮ್ಮೆಲೆ ಉಮ್ಮಳಿಸಿ ಬಂದವು. ನಾನು ನನಗೆ ಕೊಂಚ ಬ್ರೇಕ್ ಬೇಕೆಂದು ಮನೆಗೆ ಹೋಗಿ 1 ವಾರಗಳ ಕಾಲ ಸುಮ್ಮನಿದ್ದುಬಿಟ್ಟಿದ್ದೆ. ಅವರಿಲ್ಲದ ದುಃಖವನ್ನು ತಾಳಲಾರದಂತಾಗಿತ್ತು. ಅವರ ಕುಟುಂಬದವರಿಗೆ ಅವರನ್ನು ಕಳೆದುಕೊಂಡಿರುವ ದುಃಖವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಹಾರೈಸಿದರು. ಇನ್ನು ಕನ್ನಡಿಗರು ಅವರನ್ನು ಎರಡು ಹಾಡುಗಳ ಮೂಲಕ ಆದರಿಸಿ ಕೊಂಡಿರುವ ರೀತಿಗೆ ಅವರು ಸದಾ ಕೃತಜ್ಞಳಾಗಿದ್ದೇನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ.

Comments are closed.