Neer Dose Karnataka
Take a fresh look at your lifestyle.

ಮಧ್ಯರಾತ್ರಿಯಲ್ಲಿ ಪತಿಯ ಟಾರ್ಚಾರ್, ರಾತ್ರಿಯಲ್ಲಿ ನನ್ನ ಪತಿ ಎದ್ದು ಈ ಕೆಲಸ ಮಾಡಿದ, ಖುಷಿಯ ಜೊತೆ ಕೋಪವು ಬರುತ್ತದೆ ಎಂದ ಕಾಜಲ್, ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ನಟಿಯರಲ್ಲಿ ಕಾಜಲ್ ಅಗರ್ವಾಲ್ ಕೂಡ ಒಬ್ಬರು. ಕಾಜಲ್ ಅಗರ್ವಾಲ್ ರವರು 17 ವರ್ಷಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಮದುವೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವ ನಟಿ ಕಾಜಲ್ ಅಗರವಾಲ್ ಅವರು ತಮ್ಮ ಪತಿ ಗೌತಮ್ ರವರ ಕುರಿತಂತೆ ಒಂದು ವಿಶೇಷವಾದ ಮಾಹಿತಿಯನ್ನು ಹೊರಹಾಕಿದ್ದಾರೆ. ಅದೇನೆಂದರೆ ಅವರ ಪತಿ ಗೌತಮ್ ರವರು ಮಧ್ಯ ರಾತ್ರಿಯಲ್ಲಿ ಎದ್ದು ಕಿವಿಯಲ್ಲಿ ಪಿಸುಗುಡುತ್ತಾ ನೀನು ಎದ್ದಿದ್ದೀಯ ನಿನಗೆ ಒಂದು ನಾಯಿಯ ವಿಡಿಯೋ ತೋರಿಸಬೇಕು,ಎಂದು ಹೇಳಿ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ಮಧ್ಯರಾತ್ರಿಯಲ್ಲಿ ಹೇಳಿದ್ದೀರ ಎಂಬುದಾಗಿ ಹೇಳಿಕೊಂಡಿದ್ದಾರೆ.

ಇನ್ನೊಂದು ಕಡೆ ಗೌತಮ್ ಕೂಡ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿ ಎಂಬುದಾಗಿ ಹಂಚಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಬೆಳಿಗ್ಗೆ ವರ್ಕೌಟ್ ಗೆ ನಿಮ್ಮ ಜೊತೆ ಹೋಗುವ ಬೆಸ್ಟ್ ಫ್ರೆಂಡ್ ನಿಂದ ಹಿಡಿದು ಈಗ ನಿಮ್ಮೊಂದಿಗೆ ಜೀವನವನ್ನು ಕಳೆಯುತ್ತಿರುವ ಪತಿಯಾಗಿ ಹೊಸ ಪ್ರೀತಿಯ ಜೀವನಕ್ಕೆ ನಾನು ಆಭಾರಿಯಾಗಿದ್ದೇನೆ ಇನ್ನು ಮುಂದೆ ನಿಮ್ಮ ಜೊತೆಗೆ ಜೀವಿಸಲು ನಾನು ಎಕ್ಸೈಟೆಡ್ ಆಗಿದ್ದೇನೆ ಎಂಬುದಾಗಿ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ಇನ್ನು ನಿಮಗೆಲ್ಲ ತಿಳಿದಿರುವಂತೆ ನಟಿ ಕಾಜಲ್ ಅಗರ್ವಾಲ್ ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟಿಯಾಗಿದ್ದಾರೆ. ಗೌತಮ್ ಕಿಚ್ಲು ರವರು ಖ್ಯಾತ ಹಾಗೂ ಯಶಸ್ವಿ ಬಿಸಿನೆಸ್ ಮ್ಯಾನ್ ಆಗಿದ್ದಾರೆ. ಇನ್ನು ಇವರಿಬ್ಬರು ಕೂಡ ಎಂಟು ವರ್ಷಗಳಿಂದ ಪರಿಚಿತರು. ಮೊದಲ ನಾಲ್ಕು ವರ್ಷಗಳ ಕಾಲ ಕೇವಲ ಸ್ನೇಹಿತರಾಗಿದ್ದರು. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗುತ್ತದೆ. ನಂತರ ಮೂರು ವರ್ಷಗಳ ಕಾಲ ಡೇಟ್ ಮಾಡಿ ಮಹಾಮಾರಿಯ ಸಮಯದ ಲಾಕ್ಡೌನ್ ನಲ್ಲಿ ಅಂದರೆ 2020 ಅಕ್ಟೋಬರ್ 30 ರಲ್ಲಿ ಮದುವೆಯಗುತ್ತಾರೆ. ಈಗ ಮದುವೆಯಾಗಿ ಒಂದು ವರ್ಷಗಳು ಕಳೆದಿವೆ.

ಇನ್ನು ನಟಿ ಕಾಜಲ್ ಅಗರ್ವಾಲ್ ರವರು ಮೊದಲಿಗೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಮಿತಾ ಬಚ್ಚನ್ ನಟಿಸಿರುವ ಚಿತ್ರದಲ್ಲಿ ಐಶ್ವರ್ಯ ರವರಿಗೆ ತಂಗಿಯಾಗಿ ನಟಿಸುತ್ತಾರೆ. ಆದರೆ ಬಾಲಿವುಡ್ ಚಿತ್ರರಂಗದಲ್ಲಿ ಕಾಜಲ್ ರವರಿಗೆ ಅಷ್ಟೊಂದು ಯಶಸ್ಸು ಸಿಗದಿದ್ದ ಕಾರಣ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಮಾಡುತ್ತಾರೆ.

17 ವರ್ಷಗಳ ಅವಧಿಯಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ಟಾಪ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಸದ್ಯಕ್ಕೆ ಚಿತ್ರರಂಗದಿಂದ ದೂರವಿದ್ದು ಸಂಸಾರದಲ್ಲಿ ಮಗ್ನರಾಗಿದ್ದಾರೆ ಎಂದು ಹೇಳಬಹುದಾಗಿದೆ. ಆದರೂ ಕೂಡ ಅಭಿಮಾನಿಗಳು ಕಾಜಲ್ ಅಗರ್ವಾಲ್ ಅವರು ಮತ್ತೊಮ್ಮೆ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂಬ ಆಸೆಯಲ್ಲಿ ಇದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.