Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಕರೋನ ಮುಗಿಯಿತು ಎಂದು ಕೊಂಡರೆ ಚಿಕ್ಕ ಮಕ್ಕಳಿಗೂ ಶ್ರುಗರ್ ಬರುತ್ತಿದೆ, ಹೀಗೆ ಮಾಡುವ ಮೂಲಕ ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ.

ನಮಸ್ಕಾರ ಸ್ನೇಹಿತರೇ ಮಧುಮೇಹ ಅಥವಾ ಡಯಾಬಿಟಿಸ್ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತದೆ ಎಂದರೆ ಅದು ತಪ್ಪು ಕಲ್ಪನೆ ಇತ್ತೀಚಿಗೆ ಸಣ್ಣ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಒಮ್ಮೆ ಮಧುಮೇಹ ದೇಹವನ್ನು ಹೊಕ್ಕರೆ ಮತ್ತೆ ಅದರೊಂದಿಗೇ ಜೀವನ ಕಳೆಯಬೇಕು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಹಾಗಾಗಿ ಪೋಷಕರೆ ನಿಮ್ಮ ಮಕ್ಕಳ ದೀರ್ಘಕಾಲದ ಆರೋಗಕ್ಕೆ ಪ್ರಮುಖವಾಗಿ ನಿವೇ ಜವಾಬ್ದಾರಿ ವಹಿಸಬೇಕು.

ದೊಡ್ದವರನ್ನು ನೋಡಿಯೇ ಮಕ್ಕಳು ಕಲಿಯುವುದು ಹಾಗಾಗಿ ನಾವು ಯಾವ ರೀತಿ ಬದುಕುತ್ತೇವೋ ಯಾವ ಜೀವನಪದ್ದಹ್ತಿಯನ್ನು ರೂಢಿಸಿಕೊಳ್ಳುತ್ತೇವೋ ಅದೇ ಮಕ್ಕಳೂ ಕೂಡ ಅನುಸರಿಸುತ್ತಾರೆ. ಹಾಗಾಗಿ ನಾವು ಸರಿಯಾದ ಜೀವನ ಶೈಲಿ ಆಹಾರ ಪದ್ದತಿಗಳನ್ನು ಅನುಸರಿಸುವುದು ಹಾಗೂ ಮಕ್ಕಳಿಗೂ ಅದನ್ನು ರೂಢಿ ಮಾಡಿಸುವುದು ಅತ್ಯಗತ್ಯ.

ಇತ್ತೀಚಿನ ದಿನಗಳಲ್ಲಿ ನಮ್ಮ ದೈಹಿಕ ಚಟುವಟಿಕೆಗಳಿಗಿಂತ ಕುಳಿತಲ್ಲಿಯೇ ಪಪಂಚ ನೋಡುವ ಕೆಲಸವೇ ಹೆಚ್ಚಾಗಿದೆ. ಹೌದು ಮಕ್ಕಳೂ ಕೂಡ ಹೊರಗಡೆ ಆಟ ಆಡುವುದಕ್ಕಿಂತಲೂ ಹೆಚ್ಚಾಗಿ ಮನೆಯಲ್ಲಿಯೇ ಕುಳಿತು ಟಿ ವಿ, ಮೊಬೈಲ್, ಕಂಪ್ಯೂಟರ್ ಗಳಲಿಯೇ ಕಾಲ ಕಳೆಯುತ್ತಾರೆ. ಇದರಿಂದ ಸ್ಥೂಲಕಾಯ ಸಮಸ್ಯೆ ಉಂಟಾಗುವುದು, ಹೀಗಾದಾಗ ಮಧುಮೇಹ ಖಾಯಿಲೆ ಸರ್ವೇ ಸಾಮಾನ್ಯ. ಹಾಗಾಗಿ ದಿನದಲ್ಲಿ ಒಂದು ಗಂಟೆಯಾದರೂ ಮಕ್ಕಳ ದೈಹಿಕ ಚಟುವಟಿಕೆ ಬಗ್ಗೆ ಗಮನ ಕೊಡಿ. ಅವರೊಂದಿಗೆ ನೀವೂ ಆಟವಾಡಿದರೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದೆ.

ಇನ್ನು ತೂಕವನ್ನು ಇಳಿಸಿಕೊಳ್ಳುವುದು ಕೂಡ ಮುಖ್ಯ. ಕೆಲವು ಮಕ್ಕಳು ಅವರ ವಯಸ್ಸಿಗೆ ಅಗತ್ಯಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರುತ್ತಾರೆ. ಅಂಥ ಸಂದರ್ಭದಲ್ಲಿ ದೈಹಿಕ ಚಟುಚಟಿಕೆಯ ಜೊತೆಗೆ ಉತ್ತಮವಾದ ಆರೋಗ್ಯಕರ ಆಹಾರವನ್ನು ಸೇವಿಸುವುದು ತುಂಬಾನೇ ಮುಖ್ಯ. ಇನ್ನು ಸಿಹಿ ತಿನಿಸುಗಳನ್ನು, ಸಕ್ಕರೆಯನ್ನು ಹೆಚ್ಚಾಗಿ ಮಕ್ಕಳಿಗೆ ಕೊಡಬೇಡಿ. ಮೊಬೈಲ್, ಕಂಪ್ಯೂಟರ್ ಪರದೆಯನ್ನು ಹೆಚ್ಚು ಸಮಯ ಮಕ್ಕಳು ನೋಡದಂತೆ ಗಮನವಹಿಸಿ. ಒಂದು ಸಮಯವನ್ನು ಗೊತ್ತು ಮಾಡಿ ಮಕ್ಕಳಿಗೆ ತಿಳಿಸಿ. ಇದು ಮಕ್ಕಳ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಇನ್ನು ಸರಿಯಾದ ಸಮಯಕ್ಕೆ ಮಕ್ಕಳಿಗೆ ಆಹಾರವನ್ನು ಕೊಡಬೇಕು. ರಾತ್ರಿ ಬೇಗ ಊಟ ಮಾಡಿ ಮಲಗುವಂತೆ ತಿಳಿಸಬೇಕು. ಈ ಎಲ್ಲಾ ಕ್ರಮಗಳನ್ನು ಸರಿಯಾಗಿ ಮಾಡುತ್ತಾ ಬಂದರೆ ಮಕ್ಕಳಲ್ಲಿ ಮಧುಮೇಹ ಮಾತ್ರವಲ್ಲ, ಇನ್ನೂ ಹತ್ತು ಹಲವು ಖಾಯಿಲೆಗಳು ಬಾರದಂತೆ ತಡೆಗಟ್ಟಬಹುದು.

Comments are closed.