Neer Dose Karnataka
Take a fresh look at your lifestyle.

ರೈತರ ನೆಚ್ಚಿನ ಮಣ್ಣಿನ ಮಗ ಶ್ರೀ ಬಿಸಿ ಪಾಟೀಲ್, ರೈತರ ನಡುವೆ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ನಮಸ್ಕಾರ ಸ್ನೇಹಿತರೇ ನಿನ್ನೆಯಷ್ಟೇ ಕೃಷಿ ಮಂತ್ರಿಗಳಾದ ಬಿ ಸಿ ಪಾಟೀಲ್ ರವರು ತಮ್ಮ 66ನೇ ಜನ್ಮದಿನಾಚರಣೆಯನ್ನು ತಮ್ಮ ಮತ ಕ್ಷೇತ್ರವಾದ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಒಬ್ಬ ಮಾದರಿ ಜನನಾಯಕ ಹೇಗಿರಬೇಕೆಂಬುದನ್ನು ಬಿ ಸಿ ಪಾಟೀಲ್ ಅವರನ್ನು ನೋಡಿ ಕಲಿಯಬೇಕು‌.

ರಾಜಕೀಯ ನಾಯಕರ ಮೇಲಿರುವ ಕೆಟ್ಟ ಅಭಿಪ್ರಾಯಗಳನ್ನು ಬಿ ಸಿ ಪಾಟೀಲ್ ಅವರನ್ನು ನೋಡಿ ಮರೆತುಬಿಡುವಂತೆ ಆಗುತ್ತದೆ. ಯಾಕೆಂದರೆ ಅಷ್ಟೊಂದು ಉತ್ತಮ ಗುಣ ಹಾಗೂ ವ್ಯಕ್ತಿತ್ವ ಹೊಂದಿರುವ ಜನನಾಯಕರು ನಾವು ನೋಡುವುದೇ ಬಹಳ ಕಡಿಮೆಯಾಗಿಬಿಟ್ಟಿದೆ. ಬಿಸಿ ಪಾಟೀಲ್ ರವರು ತಮ್ಮ ಬಳಿ ಬರುವ ಎಲ್ಲಾ ರೀತಿಯ ಜನರಿಗೆ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ತಮ್ಮ ಕರ್ತವ್ಯವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ತಾನೊಬ್ಬ ಮಂತ್ರಿಯನ್ನುವುದಕ್ಕಿಂತ ಹೆಚ್ಚಾಗಿ ಮಂತ್ರಿ ಮಾಡಬೇಕಾಗಿರುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದನ್ನು ತನ್ನ ಕರ್ತವ್ಯ ಎಂಬುದಾಗಿ ಭಾವಿಸಿದ್ದಾರೆ ಶ್ರೀಮಾನ್ಯ ಬಿಸಿ ಪಾಟೀಲ್ ರವರು.

ಇದೇ ಸಂದರ್ಭದಲ್ಲಿ ರೈತರೊಂದಿಗೆ ಒಂದು ದಿನ ಎನ್ನುವ ಕಾರ್ಯಕ್ರಮದಡಿಯಲ್ಲಿ ತಮ್ಮ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಕ್ರಮಬದ್ಧವಾಗಿ ಆಚರಿಸಿಕೊಂಡಿದ್ದಾರೆ ನಮ್ಮೆಲ್ಲರ ನೆಚ್ಚಿನ ಕೃಷಿ ಮಂತ್ರಿ ಗಳಾಗಿರುವ ಶ್ರೀ ಬಿ ಸಿ ಪಾಟೀಲ್. ಇನ್ನು ಈ ಸಂದರ್ಭದಲ್ಲಿ ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರದ ಶೀರ್ಷಿಕೆಯನ್ನು ಕೂಡ ಬಿಡುಗಡೆ ಮಾಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಶ್ರೀ ಬಿಸಿ ಪಾಟೀಲ್ ರವರು ತಮ್ಮ ಜನ್ಮದಿನಾಚರಣೆ ಸಂದರ್ಭದಲ್ಲಿ ಬೇರೆಯವರ ಮುಖದಲ್ಲಿ ನಗು ಮೂಡಿಸಲು ಪ್ರಯತ್ನಿಸಿದ್ದಾರೆ. ಇನ್ನೂ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಮಾನ್ಯ ಕೃಷಿ ಮಂತ್ರಿಗಳ ಜೊತೆಗೆ ಕೃಷಿ ಇಲಾಖೆಯ ರಾಯಭಾರಿ ಗಳಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಭಾಗಿಯಾಗಿದ್ದರು. ಇಬ್ಬರು ಜೊತೆಗೆ ಕೃಷಿಕರ ಜೊತೆಗೆ ಒಂದು ಸಂಪೂರ್ಣ ದಿನವನ್ನು ಕಳೆದಿರುವುದು ರೈತರ ಮನಸ್ಸಿಗೆ ಬಹಳಷ್ಟು ಸಂತೋಷವನ್ನುಂಟು ಮಾಡಿದೆ.

Comments are closed.