Neer Dose Karnataka
Take a fresh look at your lifestyle.

ಪುನೀತ್ ನಮನ ವೇದಿಕೆಯಲ್ಲಿ ಒಂದಾದ್ರಾ ದಚ್ಚು ಕಿಚ್ಚ?? ಕೇಳಿ ಬರುತ್ತಿರುವ ಸುದ್ದಿಯ ಅಸಲಿಯತ್ತೇನು ಗೊತ್ತೇ?? ಇಲ್ಲಿದೆ ನೋಡಿ ನಿಜವಾಗಲೂ ನಡೆದದ್ದು.

4

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಇಂದು ಭಾವಾಂಜಲಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಚಲನಚಿತ್ರ ನಟರು ಸೇರಿದಂತೆ ಪರಭಾಷೆಯ ಖ್ಯಾತ ನಟರಿಗೂ ಕೂಡ ಆಹ್ವಾನ ಹೋಗಿದೆ.

ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಕೂಡ ಭಾಗವಹಿಸಲಿದ್ದಾರೆ. ಶಿವಣ್ಣ ಸೇರಿದಂತೆ ದೊಡ್ಮನೆ ಕುಟುಂಬಸ್ಥರು ಕೂಡ ಹಾಜರಿರಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟದ ಎಲ್ಲರೂ ಕೂಡ ಭಾಗಿಯಾಗಲಿದ್ದಾರೆ. ಇನ್ನು ಗುರುಕಿರಣ್ ಹಾಗೂ ವಿಜಯ್ ಪ್ರಕಾಶ್ ನಾಗೇಂದ್ರಪ್ರಸಾದ್ ರವರ ಹಾಡುಗಳ ಮೂಲಕ ಗೀತನಮನ ಪ್ರಾರಂಭವಾಗಲಿದ್ದು ನಂತರ ಎಲ್ಲಾ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ನಮನವನ್ನು ಸಲ್ಲಿಸಿದ್ದಾರೆ. ಇನ್ನು ಈ ಹಿಂದೆ ಕೂಡ ನವರಸ ನಾಯಕ ಜಗ್ಗೇಶ್ ಅವರು ಪರೋಕ್ಷವಾಗಿ ಇನ್ನಾದರೂ ಒಂದಾಗಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ರವರಿಗೆ ಕೋರಿಕೆಯನ್ನು ಮಾಡಿದ್ದಾರು.

ಇನ್ನು ಇದೆ ಪುನೀತ್ ರಾಜಕುಮಾರ್ ರವರ ನಮನ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಾಗೂ ಕಿಚ್ಚ ಸುದೀಪ್ ರವರು ಒಂದಾಗುವ ನಿರೀಕ್ಷೆ ಇದೆ ಎಂಬುದಾಗಿ ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಈ ಸುದ್ದಿಗಳು ಸುಳ್ಳು ಎಂಬುದಾಗಿ ಕೇಳಿಬರುತ್ತದೆ. ಈ ವೇದಿಕೆಯಲ್ಲಿ ಅವರಿಬ್ಬರು ಒಂದಾಗಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದರೂ ಕೂಡ ಇದು ಸತ್ಯಕ್ಕೆ ದೂರವಾದಂತಹ ಮಾತು. ಆದರೂ ಕೂಡ ಇಬ್ಬರು ಒಂದಾಗಬೇಕು ಎಂಬುವುದೇ ಕೇವಲ ಇಬ್ಬರ ಅಭಿಮಾನಿಗಳ ಆಶಯವಲ್ಲದೆ ಇಡೀ ಕನ್ನಡ ಪ್ರೇಕ್ಷಕ ಆಶಯ.

Leave A Reply

Your email address will not be published.