Neer Dose Karnataka
Take a fresh look at your lifestyle.

ರೇಟಿಂಗ್ ಸೂಪರ್ ಸಿಕ್ಕಿದೆ ಚಿತ್ರ ಗೆದ್ದಿತು ಎನ್ನುಕೊಳ್ಳುವಷ್ಟರಲ್ಲಿ ಜೈ ಭೀಮ್ ಚಿತ್ರಕ್ಕೆ ಶಾಕ್, ಕೋಟಿ ಕೋಟಿ ಪರಿಹಾರ ನೀಡಲು ಪ್ರಕರಣ, ಯಾಕೆ ಹಾಗೂ ಎಷ್ಟು ಕೋಟಿ ಗೊತ್ತೇ??

5

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೂರ್ಯ ನಾಯಕ ನಟನಾಗಿ ನಟಿಸಿರುವ ನೈಜ ಘಟನೆಯಾಧಾರಿತ ಜೈ ಭೀಮ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆಯುತ್ತಿದೆ. ಜೈಭೀಮ್ ಚಿತ್ರದ ಜನಪ್ರಿಯತೆ ಈಗಾಗಲೇ ಎಲ್ಲೆಗೂ ಮೀರಿ ಪರಭಾಷಿಗರು ಕೂಡ ಮೆಚ್ಚಿ ಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ 1993 ರಲ್ಲಿ ತಮಿಳುನಾಡಿನಲ್ಲಿ ನಡೆದಂತಹ ನೈಜ ಘಟನೆಯನ್ನು ಆಧರಿಸಿ ಅದನ್ನು ಮನಮುಟ್ಟುವಂತೆ ಚಿತ್ರೀಕರಿಸಿದ್ದಾರೆ. ಜೈ ಭೀಮ್ ಚಿತ್ರ ಅಸ್ಪೃಶ್ಯ ಕೆಳಜಾತಿಯವರಿಗೆ ನ್ಯಾಯ ಕೊಡಿಸುವ ಅಂತಹ ಹೃದಯ ಮುಟ್ಟುವಂತಹ ಕಥೆಯಾಗಿದೆ. ಕೆಲವು ವರ್ಗದ ಜನರಿಗೆ ನ್ಯಾಯ ಒದಗಿಸುವಂತಹ ಸಮಾಜವೇ ಒಪ್ಪುವಂತಹ ಚಿತ್ರದ ಕಥಾನಕವಾಗಿದೆ. ಇನ್ನು ಜೈ ಭೀಮ್ ಚಿತ್ರಕ್ಕೆ ಐ ಎಂ ಡಿ ಬಿ ಸೈಟ್ನಲ್ಲಿ ಅತ್ಯಂತ ಹೆಚ್ಚು ರೇಟಿಂಗ್ ಪಡೆದ ಸಿನಿಮಾವಾಗಿ ಗುರುತಿಸಲಾಗಿದೆ. ಇದು ರೇಟಿಂಗ್ ವಿಷಯದಲ್ಲಿ ಹಾಲಿವುಡ್ ಚಿತ್ರವಾಗಿರುವ ಶಾಶಂಕ್ ರೆಡಂಪ್ಷನ್ ಚಿತ್ರವನ್ನು ಕೂಡ ಹಿಂದಿಕ್ಕಿದೆ. ಆದರೆ ಈಗ ಜೈಭೀಮ್ ಚಿತ್ರದ ಮೇಲೆ 5ಕೋಟಿ ರೂಪಾಯಿಯ ಪ್ರಕರಣ ದಾಖಲಾಗಿದೆ. ಇದರ ಕುರಿತಂತೆ ಸವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ.

ಚಿತ್ರದಲ್ಲಿ ಕೆಲವು ಜಾತಿಯ ಯುವಕನೊಬ್ಬ ಏನು ಕದ್ದಿಲ್ಲದಿದ್ದರೂ ಕೂಡ ಆತನ ಕದ್ದಿದ್ದಾನೆ ಎಂಬುದಾಗಿ ಹೇಳಿ ಪೊಲೀಸ್ ಅಧಿಕಾರಿಯೊಬ್ಬ ಆತನನ್ನು ಜೈಲಿನಲ್ಲಿ ಮುಗಿಸಿ ಬಿಡುತ್ತಾನೆ. ಆತನನ್ನು ಚಿತ್ರದಲ್ಲಿ ವನ್ನಿಯರ್ ಎಂಬ ವರ್ಗದವನನ್ನಾಗಿ ಬಿಂಬಿಸಿದ್ದಾರೆ. ನಿಜ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಆಂಟೋನಿ ಸ್ವಾಮಿ ಎಂಬ ಕ್ರಿಶ್ಚಿಯನ್ ಆಗಿದ್ದ. ಆದರೆ ಚಿತ್ರದಲ್ಲಿ ಮಾತ್ರ ವನ್ನಿಯರ್ ವರ್ಗದ ಪೊಲೀಸ್ ಅಧಿಕಾರಿ ಎಂಬುದಾಗಿ ಉದ್ದೇಶ ಪೂರ್ವಕವಾಗಿ ಚಿತ್ರೀಕರಿಸಿದ್ದಾರೆ ಎಂಬುದಾಗಿ ಚಿತ್ರದ ಮೇಲೆ 5ಕೋಟಿ ರೂಪಾಯಿಯ ಪ್ರಕರಣವನ್ನು ವನ್ನಿಯರ್ ಸಂಘದ ಅಧ್ಯಕ್ಷ ಪ್ರಕರಣವನ್ನು ದಾಖಲಿಸಿದ್ದಾರೆ. ಈ ವಿಚಾರದ ಕುರಿತಂತೆ ನೀವು ಏನು ಹೇಳುತ್ತೀರಾ ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.