Neer Dose Karnataka
Take a fresh look at your lifestyle.

ಒಂದು ವೇಳೆ ಪತ್ನಿ ಅಶ್ವಿನಿ ರವರ ಕೋಪಗೊಂಡರೆ ಅಪ್ಪು ರವರು ಯಾವ ಹಾಡು ಹಾಡಿ ಸಮಾಧಾನ ಮಾಡುತ್ತಿದ್ದರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಸಮಾಜದಲ್ಲಿ ಹೇಗೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಬಡವರ ಕಣ್ಣೀರಿಗೆ ಸಾಂತ್ವನವನ್ನು ಹೇಳುತ್ತಿದ್ದರೋ ಹಾಗೆಯೇ ಅವರ ಬಳಿಗೆ ಬಂದವರನ್ನು ಬರಿಗೈಯಲ್ಲಿ ಕಳಿಸಿದ್ದಿಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಸಿನಿಮಾದ ಮೂಲಕವೂ ಕೂಡ ಸದಾಕಾಲ ಸಾಮಾಜಿಕ ಹಾಗೂ ಸಾಂಸಾರಿಕ ಸಂದೇಶಗಳನ್ನು ಹೇಳುವ ಸಿನಿಮಾಗಳಲ್ಲಿ ಹಾಗೂ ಪಾತ್ರಗಳಲ್ಲಿ ನಟಿಸುತ್ತಿದ್ದರು.

ಅದರಲ್ಲೂ ರಾಜಕುಮಾರ ಚಿತ್ರದ ನಂತರ ಪುನೀತ್ ರಾಜಕುಮಾರ್ ರವರನ್ನು ಕನ್ನಡದ ಫ್ಯಾಮಿಲಿ ಆಡಿಯನ್ಸ್ ಅತ್ಯಂತ ಹೆಚ್ಚು ಇಷ್ಟಪಡುವ ನಟ ಎಂದು ಗುರುತಿಸಲಾಯಿತು. ಎಲ್ಲದಕ್ಕಿಂತ ಹೆಚ್ಚಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಜ ಜೀವನದಲ್ಲಿ ಕೂಡ ಕುಟುಂಬಕ್ಕೆ ಸಾಕಷ್ಟು ಸಮಯ ಹಾಗೂ ಮಹತ್ವವನ್ನು ನೀಡುತ್ತಾರೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ರವರು ಪ್ರೀತಿಸಿ ಮದುವೆಯಾಗಿದ್ದರು.

ಪುನೀತ್ ರಾಜಕುಮಾರ್ ರವರ ಮನೆಯಲ್ಲಿ ಮದುವೆಗೆ ಬೇಗ ಒಪ್ಪಿದರು ಕೂಡ ಅಶ್ವಿನಿ ಅವರ ಮನೆಯಲ್ಲಿ ಫಸ್ಟ್ ಗೆ ಒಪ್ಪಿರಲಿಲ್ಲ. ನಂತರ ಅವರು ಕೂಡ ಒಪ್ಪಿ 1999 ರಂದು ಡಿಸೆಂಬರ್ 1ರಂದು ಮದುವೆಯಾಗಿದ್ದಾರೆ. ಇನ್ನು ಮನೆಯಲ್ಲಿ ಇದ್ದಾಗಲೆಲ್ಲ ಪುನೀತ್ ರಾಜಕುಮಾರ್ ಅವರ ತಮ್ಮ ಹೆಂಡತಿಗೆ ರೋಮ್ಯಾಂಟಿಕ್ ಹಾಡನ್ನು ಹಾಡಿ ಸಂತೋಷ ಪಡಿಸುತ್ತಿದ್ದರಂತೆ. ಇನ್ನು ಅಶ್ವಿನಿ ಅವರು ಕೋಪ ಮಾಡಿಕೊಂಡಾಗಲಿಲ್ಲ ಚಂದ ಚಂದ ಚಂದ ನನ್ನ ಹೆಂಡತಿ ಹಾಡನ್ನು ಹಾಡುತ್ತಿದ್ದರಂತೆ. ಈಗ ಅಂತಹ ಸವಿನೆನಪುಗಳನ್ನು ನೆನಪಿಸಿಕೊಂಡು ಪತ್ನಿ ಅಶ್ವಿನಿ ಅವರು ಕಣ್ಣೀರು ಹಾಕುತ್ತಿದ್ದಾರೆ.

Comments are closed.