Neer Dose Karnataka
Take a fresh look at your lifestyle.

ತಮ್ಮನ್ನು ಬ್ಯಾನ್ ಮಾಡಿರುವ ಚಾನೆಲ್ಗಳಿಗೆ ಸಡ್ಡುಹೊಡೆದು ಹೊಸ ಚಾನೆಲ್ ಪ್ರಾರಂಭಿಸಿದ ಡಿ ಬಾಸ್. ಯಾವುದು ಗೊತ್ತೇ??

6

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚೆಗೆ ಅವರನ್ನು ಮಾಧ್ಯಮಗಳು ಬ್ಯಾನ್ ಮಾಡಿರುವ ವಿಷಯ ನಿಮಗೆ ಗೊತ್ತಿರಬಹುದು. ಇತ್ತೀಚಿಗಷ್ಟೇ ಸುಳ್ಳು ಲೋನ್ ಮಾಡಿರುವ ಆರೋಪದಡಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಹಾಗೂ ಅವರ ಆಪ್ತರಾಗಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡರ ಅವರಿಗೂ ಕೂಡ ಮನಸ್ತಾಪ ಬಂದಿತ್ತು.

ಇನ್ನು ಇದು ನಿಲ್ಲುತ್ತಿದ್ದಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿರುವ ಸಂದೇಶ ನಾಗರಾಜರವರ ಹೋಟೆಲ್ನಲ್ಲಿ ಸಪ್ಲೇಯರ್ ಹಲ್ಲೆ ಮಾಡಿದ್ದಾರೆ ಎಂಬ ಪ್ರಕರಣಗಳು ಕೂಡ ಕೇಳಿಬಂದಿತ್ತು. ಇದಕ್ಕೆ ಮತ್ತೊಂದು ಸೇರ್ಪಡೆಯೆಂಬಂತೆ ದರ್ಶನ್ ರವರ ವಿರುದ್ಧ ನಿರ್ದೇಶಕರಾಗಿರುವ ಇಂದ್ರಜಿತ್ ಲಂಕೇಶ್ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ಈ ಸಂದರ್ಭದಲ್ಲಿ ದರ್ಶನ್ ಅವರು ತಮ್ಮ ಕುರಿತಂತೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದರಿಂದಾಗಿ ಮಾಧ್ಯಮಗಳ ಮೇಲೆ ಅವಾಚ್ಯ ಶಬ್ದಗಳಿಂದ ಬೈದಿದ್ದರು ಎಂಬುದು ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ಇದರಿಂದಾಗಿ ದರ್ಶನ್ ರವರ ಕುರಿತಂತೆ ಯಾವುದೇ ವಿಷಯಗಳನ್ನು ಕೂಡ ತಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡದಂತೆ ಮಾಧ್ಯಮಗಳು ನಿರ್ಧರಿಸಿದ್ದರಂತೆ.

ಆದರೆ ಇದ್ಯಾವುದಕ್ಕೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಲೆಕೆಡಿಸಿಕೊಳ್ಳದಂತಿದೆ. ಇತ್ತೀಚಿಗಷ್ಟೇ ದರ್ಶನ್ ರವರ ಯಜಮಾನ ಚಿತ್ರದ ದಾಖಲೆ ಮಟ್ಟದ ಅವಾರ್ಡ್ ಗಳನ್ನು ಪಡೆದಿರುವ ವಿಷಯವನ್ನು ಕೂಡ ಮಾಧ್ಯಮಗಳು ಪ್ರಸಾರ ಮಾಡಿರಲಿಲ್ಲ. ಇದಕ್ಕೆ ಪ್ರತಿಯುತ್ತರ ಎಂಬಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕ್ರಾಂತಿ ಚಿತ್ರದ ಕಾರ್ಯಕ್ರಮದ ವಿಡಿಯೋ ಹಾಗೂ ದರ್ಶನ್ ರವರು ಒಂದು ದಿನದಲ್ಲಿ ಹೇಗೆ ಇರುತ್ತಾರೆ ಎಂಬುದರ ಸ್ವಾಭಾವಿಕ ವಿಡಿಯೋವನ್ನು ದರ್ಶನ್ ಅಭಿಮಾನಿಗಳ ಸಂಘ ಆಗಿರುವ ಡಿ ಕಂಪನಿಯ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ದರ್ಶನ್ ರವರ ಮುಂದಿನ ಎಲ್ಲಾ ಅಪ್ಡೇಟ್ಗಳು ಕೂಡ ಇದೇ ಚಾನೆಲ್ ನಲ್ಲಿ ಬರುವ ಸೂಚನೆ ಇದು ಯೂಟ್ಯೂಬ್ ಮೂಲಕ ತಮ್ಮನ್ನು ಬ್ಯಾನ್ ಮಾಡಿರುವ ಮಾಧ್ಯಮದವರಿಗೆ ಪ್ರತ್ಯುತ್ತರ ನೀಡಲು ಡಿಬಾಸ್ ರೆಡಿಯಾಗಿದ್ದಾರೆ.

Leave A Reply

Your email address will not be published.