Neer Dose Karnataka
Take a fresh look at your lifestyle.

ನಂಬರ್ ವನ್ ಕಾಮಿಡಿ ನಟ ವಡಿವೇಲ್ ರವರನ್ನು ತಮಿಳು ಚಿತ್ರರಂಗದಿಂದ ಬ್ಯಾನ್ ಮಾಡಿದ್ದು ಯಾಕೆ ಗೊತ್ತಾ?? ಇದರ ಹಿಂದೆ ಇರುವುದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ತಮಿಳು ಚಿತ್ರರಂಗ ಒಂದು ಬಂದಾಗ ನಮಗೆ ಮೊದಲಿಗೆ ನೆನಪಿಗೆ ಬರುವುದು ಸೂಪರ್ ಸ್ಟಾರ್ ರಜನಿಕಾಂತ್. ಅಂಥವರನ್ನೇ ನನ್ನ ಮುಂದೆ ಬಚ್ಚಾ ಎಂದು ಹೀಯಾಳಿಸಿದವರು ಖ್ಯಾತ ಹಾಸ್ಯ ನಟ ವಡಿವೇಲ್. ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ನಟರಾಗಿದ್ದ ವಡಿವೇಲ್ ಈಗ ಚಿತ್ರರಂಗದಿಂದ ಕಣ್ಮರೆಯಾಗಿರುವುದು ಯಾಕೆ ಗೊತ್ತಾ ಎಲ್ಲಾ ವಿಷಯದ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಈ ಲೇಖನಿಯನ್ನು ಓದಿ.

ವಡಿವೇಲ್ ಅವರು ಬಡ ಕುಟುಂಬದಲ್ಲಿ ಜನಿಸಿದವರು. ತಮ್ಮ ತಂದೆಯ ಜೊತೆಗೆ ಗ್ಲಾಸ್ ಕ’ತ್ತರಿಸುವ ಕೆಲಸದಲ್ಲಿ ವಡಿವೇಲ್ ರವರು ಕೆಲಸ ಪ್ರಾರಂಭಿಸಿದರು. ಬಡತನದ ಕಾರಣ ಅವರು ಹಾಗೂ ಅವರ ಸಹೋದರರು ಕೂಡ ತಂದೆಯವರ ಮರಣಾನಂತರವೂ ಕೂಡ ಅದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಇದಾದನಂತರ ಅವರು ತಮಿಳು ಚಿತ್ರವೊಂದರಲ್ಲಿ ನಟಿಸಿದ್ದರು ಕೂಡ ಅಂದಿನ ಕಾಲದಲ್ಲಿ ಗೌಂಡಮಣಿ ಹಾಗೂ ಸೆಂದಿಲ್ ರವರು ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟರಾಗಿದ್ದರು. ಹೀಗಾಗಿ ಅವರಿಗೆ ಅಷ್ಟೊಂದು ಜನ ಮನ್ನಣೆ ಸಿಗಲಿಲ್ಲ.

ಇನ್ನೊಮ್ಮೆ ತಮಿಳು ಚಿತ್ರರಂಗದ ಖ್ಯಾತ ನಟರಾಗಿರುವ ರಾಜ್ ಕಿರಣ್ ರವರೊಂದಿಗೆ ರೈಲಿನಲ್ಲಿ ಬರುತ್ತಿರಬೇಕಾದರೆ ತಮ್ಮ ಹಾಸ್ಯಬರಿತ ಸಂಭಾಷಣೆಯಿಂದ ಅವರ ಮನಸ್ಸನ್ನು ಗೆದ್ದಿದ್ದರು. ರಾಜ್ ಕಿರಣ್ ನಟನೆಯ ಚಿತ್ರದ ಮೂಲಕ ವಡಿವೇಲ್ ಅವರು ಅಧಿಕೃತವಾಗಿ ಎಂಟ್ರಿ ನೀಡುತ್ತಾರೆ. ಇದಾದನಂತರ ಒಂದಾದಮೇಲೊಂದರಂತೆ ವಡಿವೇಲ್ ರವರಿಗೆ ಸಿನಿಮಾಗಳ ಅವಕಾಶಗಳು ಹುಡುಕಿ ಬಂದವು. 1992 ರಲ್ಲಿ ಕಮಲ್ ಹಾಸನ್ ರವರೊಂದಿಗೆ ಎರಡು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಅದರಲ್ಲಿ ಒಂದು ಚಿತ್ರದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟನಾಗಿರುವ ಶಿವಾಜಿಗಣೇಶನ್ ಕೂಡ ನಟಿಸಿದ್ದರು. 1994 ರಲ್ಲಿ ಶಂಕರ್ ಹಾಗೂ ಪ್ರಭುದೇವ ಕಾಂಬಿನೇಷನ್ ನಲ್ಲಿ ಮೂಡಿಬಂದ ಕಾದಲನ್ ಸಿನಿಮಾದಲ್ಲಿ ಸೋಲೋ ಕಾಮಿಡಿ ಪಾತ್ರದಲ್ಲಿ ನಟಿಸಿ ತಮಿಳು ಪ್ರೇಕ್ಷಕರ ಮನಗೆದ್ದರು. ಇನ್ನು ಕಾಲಕಳೆದಂತೆ ತಮಿಳು ಚಿತ್ರರಂಗದಲ್ಲಿ ಕಮಲ್ ಹಾಸನ್ ಹಾಗೂ ರಜನಿಕಾಂತ್ ರವರ ಸ್ಥಾನವನ್ನು ವಿಜಯ್ ಹಾಗೂ ಅಜಿತ್ ಎಂಬ ಯುವ ನಟರು ತುಂಬುತ್ತ ಬಂದರು. ಇವರಿಗೆ ಸಮರ್ಥ ಕಾಮಿಡಿ ನಟನಾಗಿ ವಡಿವೇಲ್ ರವರು ತಮ್ಮ ಪ್ರಭಾವವನ್ನು ಬೀರಲು ಪ್ರಾರಂಭಿಸಿದರು. ಅಂದಿನ ಕಾಲದಲ್ಲಿ ವಡಿವೇಲ್ ನಟನೆಯ 15ರಿಂದ 20 ಚಿತ್ರಗಳು ವರ್ಷಕ್ಕೆ ಸೆಟ್ಟೇರುತ್ತಿದ್ದವು.

ಕೆಲವೊಂದು ಚಿತ್ರಗಳಲ್ಲಿ ನಾಯಕ ನಟರಿಗಿಂತ ಹೆಚ್ಚಾಗಿ ವಡಿವೇಲ್ ರವರಿಗೆ ಸಂಭಾವನೆ ದೊರಕುತ್ತಿತ್ತು. ಇನ್ನು 2006 ರಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕೂಡ ವಡಿವೇಲ್ ರವರು 23ನೇ ಪುಲಿಕೇಶಿ ಚಿತ್ರದಲ್ಲಿ ಕಾಣಿಸಿಕೊಂಡರು. ಇನ್ನು ಒಂದು ಸಮಯದಲ್ಲಿ ರಾಜಕೀಯ ಪ್ರಚಾರ ಮಾಡುತ್ತಿರಬೇಕಾದರೆ ಎದುರು ಪಕ್ಷದ ನಾಯಕ ಆಗಿದ್ದ ನಾಯಕ ನಟ ವಿಜಯಕಾಂತ್ ಅವರ ವಿರುದ್ಧ ಆತ ಕುಡುಕ ಆತನಿಂದ ಏನು ಕೂಡ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದಾಗಿ ಮಾತನಾಡಿದರು.

ಇನ್ನು ಅವರ ಸಿನಿಮಾ ಜೀವನಕ್ಕೆ ತಿರುವು ಕೊಟ್ಟ ನಿರ್ದೇಶಕ ಶಂಕರ್ ಅವರ ವಿರುದ್ಧವೂ ಕೂಡ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದರು. ಇನ್ನು ಚಂದ್ರಮುಖಿ ಚಿತ್ರದಲ್ಲಿ ಕೇವಲ ರಜನಿಕಾಂತ್ ಮಾತ್ರವಲ್ಲದೆ ನನ್ನ ಪಾತ್ರ ಕೂಡ ಬಹುಮುಖ್ಯವಾಗಿದ್ದು ಆತ ನನ್ನ ಮುಂದೆ ಬಚ್ಚಾ ಎಂಬುದಾಗಿ ಮಿತಿಮೀರಿದ ಹೇಳಿಕೆಯನ್ನು ಕೂಡ ನೀಡಿದ್ದರು. ಇದಾದ ನಂತರ ಅವರ 23ನೇ ಪುಲಕೇಶಿ ಚಿತ್ರದ ಯಶಸ್ಸಿನ ನಂತರ ಅದರ ಎರಡನೇ ಭಾಗವಾದ 24ನೇ ಪುಲಕೇಶಿ ಎಂಬ ಚಿತ್ರವನ್ನು ಕೂಡ ಪ್ರಾರಂಭ ಮಾಡಲಾಗಿತ್ತು.

ಇದಕ್ಕೆ ಚೆಂಬು ದೇವನ್ ನಿರ್ದೇಶಕ ಹಾಗೂ ಸ್ವತಹ ಶಂಕರ್ ಅವರು ನಿರ್ಮಾಣ ಮಾಡಿದ್ದರು. ಆದರೆ ಅಲ್ಲಿ ಚಿತ್ರೀಕರಣ ಸಂದರ್ಭದಲ್ಲಿ ನಡೆದಂತಹ ಚಿಕ್ಕ ಗಲಾಟೆಯಿಂದ ತಾನು ಚಿತ್ರವನ್ನು ಮಾಡುವುದಿಲ್ಲ ಎಂಬುದಾಗಿ ಪಟ್ಟುಹಿಡಿದು ಕುಳಿತಿದ್ದರು. ಚಿತ್ರೀಕರಣದಲ್ಲಿ ಭಾಗಿಯಾಗಿ ಎಂದು ಹೇಳಿದಾಗಲೂ ಕೂಡ ತಾನು ಭಾಗಿಯಾಗುವುದಿಲ್ಲ ಎಂಬುದಾಗಿ ವಡಿವೇಲ್ ರವರು ಅವರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಇದಾದನಂತರ ಅಲ್ಲಿಯವರೆಗೆ ಚಿತ್ರೀಕರಣಕ್ಕೆ ಖರ್ಚಾದ ಹಣವನ್ನು ಕೂಡ ನೀಡಿ ಎಂಬುದಾಗಿ ಹೇಳಲಾಗಿತ್ತು.

ಯಾವುದಕ್ಕೂ ಕೂಡ ವಡಿವೇಲ್ ರವರು ಸೊಪ್ಪು ಹಾಕಿರಲಿಲ್ಲ. ನಂತರ ಎಲ್ಲರೂ ಸೇರಿ ತಮಿಳು ಚಿತ್ರರಂಗದ ಸಮಿತಿಯಲ್ಲಿ ವಡಿವೇಲ್ ರವರ ಬ್ಯಾನ್ ನೋಟೀಸನ್ನು ಜಾರಿ ಮಾಡಿದ್ದಾರೆ. 2017 ರಲ್ಲಿ ಬಿಡುಗಡೆಯಾದ ತಲಪತಿ ವಿಜಯ್ ನಟನೆಯ ಮರ್ಸೆಲ್ ಚಿತ್ರದಲ್ಲಿ ನಟಿಸಿದ್ದೇ ವಡಿವೇಲ್ ಅವರು ಕೊನೆ. ಕಷ್ಟದಿಂದ ಮೇಲೆದ್ದು ಬಂದು ಪರಿಶ್ರಮದ ಮೂಲಕ ಸ್ಟಾರ್ ಗಿರಿಯನ್ನು ಪಡೆದುಕೊಂಡು ಮತ್ತೆ ಪುನಹ ಅದೇ ಸ್ಟಾರ್ ಗಿರಿಯಿಂದ ಅಹಂಕಾರ ವನ್ನು ಪಡೆದು ಚಿತ್ರರಂಗದಿಂದ ದೂರವಾಗಿದ್ದು ವಡಿವೇಲ್ ರವರ ದುರದೃಷ್ಟವೆಂದೇ ಹೇಳಬಹುದು.

Comments are closed.