Neer Dose Karnataka
Take a fresh look at your lifestyle.

ಪುನೀತ್ ನಮನ ಕಾರ್ಯಕ್ರಮದಲ್ಲಿ ದರ್ಶನ್ ರವರಿಗೆ ಪೊಲೀಸರಿಂದ ಅವಮಾನ, ಕೊನೆಗೂ ಶಿವಣ್ಣ ಮಾತನಾಡಿ ಹೇಳಿದ್ದೇನು ಗೊತ್ತೇ??

0

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ 20 ದಿನಗಳು ಕಳೆದುಹೋಗಿವೆ. ಇನ್ನು ನೆನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ ನಮನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ-ನಟಿಯರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರು ಹಾಗೂ ರಾಜ್ಯದ ಪ್ರಮುಖ ರಾಜಕೀಯ ನಾಯಕರುಗಳು ಕೂಡ ಆಗಮಿಸಿದ್ದರು.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್ ರವರು ಕೂಡ ಅಪ್ಪು ಕುರಿತಂತೆ ಭಾವುಕರಾಗಿ ಮಾತುಗಳನ್ನಾಡಿದ್ದರು. ಇನ್ನು ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕೂಡ ಆಗಮಿಸಿದ್ದರು. ಆದರೆ ಡಿಬಾಸ್ ಸಮಾರಂಭದ ಗೇಟ್ ಬಳಿ ಬಂದಾಗ ಅಲ್ಲಿನ ಪೊಲೀಸರು ಪಾಸ್ ಇಲ್ಲದಿದ್ದರೆ ಒಳಗೆ ಬಿಡಲು ಸಾಧ್ಯವಾಗುವುದಿಲ್ಲ ಕುಳಿತುಕೊಳ್ಳಲು ಚೇರ್ ಗಳು ಕಡಿಮೆ ಇದೆ ಎಂಬುದಾಗಿ ಹೇಳಿದ್ದರು. ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪರ್ವಾಗಿಲ್ಲ ಸರ್ ನಾವು ನಿಂತುಕೊಂಡೆ ಕಾರ್ಯಕ್ರಮವನ್ನು ನೋಡುತ್ತೇವೆ ಎಂಬುದಾಗಿ ಉದಾರತೆಯನ್ನು ಮೆರೆದಿದ್ದರು. ಇನ್ನು ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ತಮ್ಮ ಗೆಳೆಯ ಅಪ್ಪು ಅವರ ಕುರಿತಂತೆ ಭಾವುಕರಾಗಿ ಮಾತನಾಡಿದ್ದರು.

ಅಪ್ಪು ಅವರ ಸಾಮಾಜಿಕ ಕಾರ್ಯಗಳು ನಮಗೆ ಸ್ಫೂರ್ತಿ ಆದರೆ ಬ್ರಹ್ಮ ಅವರ ಆಯಸ್ಸನ್ನು ಮಾತ್ರ ಹೆಚ್ಚು ಮಾಡಲಿಲ್ಲ ಆದರೆ ಅವರು ಸದಾ ನಮ್ಮೊಂದಿಗೆ ಇರುತ್ತಾರೆ ಎಂಬುದಾಗಿ ಹೇಳಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಪೊಲೀಸರು ತಡೆದಿದ್ದು ಕೇಳಿದ ನಂತರ ಶಿವಣ್ಣನವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕರೆಮಾಡಿ ತಪ್ಪು ಭಾವಿಸಬೇಡಿ ಅವರಿಗೆ ಏನೂ ತಿಳಿಯದೆ ಹೀಗೆ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಅದಕ್ಕೆ ದರ್ಶನ್ ಅವರು ನಮ್ಮ ಮನೆಯ ವಿಚಾರಕ್ಕೆ ನಾವೇ ಬೇಸರ ಮಾಡಿಕೊಂಡರೆ ಹೇಗೆ ಹೇಳಿ ಎಂಬುದಾಗಿ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಕಾರ್ಯಕ್ರಮದ ಆಯೋಜಕರ ವಿರುದ್ಧ ಗರಂ ಆಗಿದ್ದಾರೆ ಹಾಗೂ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

Leave A Reply

Your email address will not be published.