Neer Dose Karnataka
Take a fresh look at your lifestyle.

ರಮೇಶ್ ಅರವಿಂದ್ ಖಡಕ್ ಪೊಲೀಸ್ ಆಗಿ ಬಾರಿಸಿದ್ರು 100. ಸಿನೆಮಾಗೆ ಭರ್ಜರಿ ರೇಟಿಂಗ್ ನೀಡಿದ ಪ್ರೇಕ್ಷಕರು.

ನಮಸ್ಕಾರ ಸ್ನೇಹಿತರೇ ನಿಂತ ನೀರಿನಂತಿದ್ದ ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ರೀತಿಯ ಸ್ಫೂರ್ತಿಯ ಚಿಲುಮೆಯನ್ನು ನೀಡಿದ ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿರುವ 100 ಚಿತ್ರ. ಹೊಸ ರೀತಿಯ ಚಿತ್ರವೊಂದನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಕನ್ನಡ ಚಿತ್ರಗಳಲ್ಲಿ ಕಂಟೆಂಟ್ ಗಿಂತ ಹೆಚ್ಚಾಗಿ ಕಮರ್ಷಿಯಲ್ ಎಲಿಮೆಂಟ್ಸ್ ಗಳ ಜಾಸ್ತಿಯಾಗಿದ್ದವು. ಆದರೆ ರಮೇಶ್ ಅರವಿಂದ್ ರವರ 100 ಚಿತ್ರದಲ್ಲಿ ಎಲ್ಲರೂ ಕೂಡ ತಿಳಿಯಲೇ ಬೇಕಾದಂತಹ ಪ್ರಮುಖವಾದ ಕಂಟೆಂಟ್ ಅನ್ನು ಹೇಳಲು ಹೊರಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹಲವಾರು ಜನರು ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ. ಮತ್ತು ಕೆಲವರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕ ಶೋಷಣೆಗೆ ಒಳಗಾಗಿರುತ್ತಾರೆ. ಇದೆಲ್ಲವನ್ನು ಕೂಡ ರಮೇಶ್ ಅರವಿಂದ್ ಅವರ 100 ಚಿತ್ರದಲ್ಲಿ ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ರೀತಿಯಲ್ಲಿ ಪ್ರೇಕ್ಷಕ ಮಹಾಪ್ರಭುಗಳಿಗೆ ಮನೋರಂಜನೆಯ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿತ್ರ ಎನ್ನುವುದಕ್ಕಿಂತ ಹೆಚ್ಚಾಗಿ ಈಗಿನ ಸಮಾಜದಲ್ಲಿ ನಾವು ಹೇಗೆ ಇರಬೇಕು ಹೇಗೆ ಎಲ್ಲ ನಡೆಯುತ್ತದೆ ಎಂಬುದರ ಕುರಿತಂತೆ ಸತ್ಯಾಂಶವನ್ನು ಹೊರಹಾಕುತ್ತದೆ ಈ ಚಿತ್ರ.

w

ಸೈಬರ್ ಕ್ರೈಂ ಕುರಿತಂತೆ ಕೇವಲ ಕೇಳುತ್ತಿದ್ದವರಿಗೆ 100 ಚಿತ್ರದ ಮೂಲಕ ನಿಜವಾಗಿಯೂ ಅದು ಏನು ಹಾಗು ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದಾಗಿ ನೋಡಲು ಕೂಡ ಅವಕಾಶ ಸಿಕ್ಕಿದೆ. ಇನ್ನು ಕೇವಲ ಸಾಮಾಜಿಕ ಸಂದೇಶದ ದೃಷ್ಟಿಯಲ್ಲಿ ಮಾತ್ರವಲ್ಲದೆ 100 ಚಿತ್ರ ಮನೋರಂಜನೆಯ ದೃಷ್ಟಿಯಲ್ಲಿ ಕೂಡ ಪ್ರೇಕ್ಷಕರಿಗೆ ಪೈಸಾ ವಸೂಲ್ ಮನೋರಂಜನೆಯನ್ನು ನೀಡುವುದರಲ್ಲಿ ಮೋಸ ಮಾಡಿಲ್ಲ. ಚಿತ್ರ ಎಲ್ಲೂ ಕೂಡ ಬೋರ್ ಹೊಡೆಸದೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ರಚಿತಾ ರಾಮ್ ಪೂರ್ಣ ಪ್ರಕಾಶ್ ಬೆಳವಾಡಿ ಶೋಬ್ರಾಜ್ ಹೀಗೆ ಎಲ್ಲರೂ ಕೂಡ ತಮಗೆ ಸಿಕ್ಕಿರುವ ಪಾತ್ರವನ್ನು ಅದಕ್ಕೆ 100% ನ್ಯಾಯ ಒದಗಿಸುವಂತಗ ನಟಿಸಿದ್ದಾರೆ. ಚಿತ್ರವನ್ನು ತಪ್ಪದೇ ಮನೆಮಂದಿಯೆಲ್ಲಾ ಕೂತು ನೋಡಲೇಬೇಕಾದಂತಹ ಜೀವನ ಸಾರವನ್ನು ಒಳಗೊಂಡಿದೆ.

Comments are closed.