Neer Dose Karnataka
Take a fresh look at your lifestyle.

ಕನ್ನಡದ ಎಲ್ಲಾ ನಟರಿಗೆ ವಿಶೇಷ ಮನವಿ ಮಾಡಿದ ಶಿವಣ್ಣ, ನೀವೆಲ್ಲರೂ ನನಗೆ ಅಪ್ಪು ಇದ್ದ ಹಾಗೆ, ಎಲ್ಲರೂ ಈ ಮಾತು ಕೇಳಿ ಎಂದದ್ದು ಯಾಕೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಜೀವನ ಒಂದು ಅನಿಶ್ಚಿತ. ಇಲ್ಲಿ ಯಾವುದನ್ನೂ ಊಹಿಸಲಾಗುವುದಿಲ್ಲ. ಬದುಕು,ಬವಣೆಗಳೆಲ್ಲವೂ ವಿಧಿಲಿಖಿತ. ಯಾವ ಸಮಯದಲ್ಲಿ ಏನಾಗಬೇಕೂ ಅದು ಆಗೇ ಆಗುತ್ತದೆ. ಇರುವಷ್ಟು ದಿನ ಪ್ರೀತಿ ಹಂಚಿ, ಕೈಲಾದ ಸಹಾಯ ಮಾಡಿ, ಜನೋಪಯೋಗಿ, ಪರೋಪಕಾರಿಯಾಗಿ ಇದ್ದು ಹೋಗಬೇಕು. ಆಗ ಮಾತ್ರ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ. ಇದು ನಟ ಪುನೀತ್ ರಾಜ್ ಕುಮಾರ್ ರವರ ಜೀವನದಿಂದ ನಾವು ತಿಳಿದುಕೊಳ್ಳಬೇಕಾದ ವಿಷಯವಾಗಿದೆ. ಕೇವಲ 46 ವರ್ಷದಲ್ಲಿ ಪುನೀತ್ ಸಾಧನೆ ನಿಜಕ್ಕೂ ಉತ್ತಮ.

ಪುನೀತ್ ರ ಸ್ಮರಣೆಗಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ನಮನ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಪುನೀತ್ ಬಗ್ಗೆ ಮಾತನಾಡಿದರು. ಎಲ್ಲಾರೂ ಒಂದಲ್ಲಾ ಒಂದು ದಿನ ಹೋಗಬೇಕು. ಆದರೇ ಇದ್ದಾಗ ಒಳ್ಳೆಯ ಕೆಲಸ ಮಾಡಿದರೇ, ಹೋದ ಮೇಲೆಯೂ ಅವು ನಮ್ಮ ಕಣ್ಣ ಮುಂದೆ ಇರುತ್ತವೆ. ಇದು ಪುನೀತ್ ನಮಗೆ ಕಲಿಸಿ ಹೋದ ಪಾಠ. ಅವರು ಇಲ್ಲ ಎಂದು ಊಹಿಸಿಕೊಳ್ಳಲು ಅಸಾಧ್ಯ.

ಅವರು ಎಲ್ಲಿಯೂ ಹೋಗಿಲ್ಲ. ಎಲ್ಲಾ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹೇಳಿದರು. ಇನ್ನು ಕನ್ನಡದ ಯುವ ನಟರಾಗಿರುವ ದರ್ಶನ್, ಯಶ್, ಗಣೇಶ್,ಸುದೀಪ್, ಧ್ರುವ ರಲ್ಲಿ ನಾನು ನನ್ನ ತಮ್ಮನನ್ನು ನೋಡುತ್ತೇನೆ. ಎಲ್ಲ ನಟರೂ ಒಂದಿಗಿ ಕನ್ನಡ ಚಿತ್ರೋದ್ಯಮವನ್ನು ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದು ಹೇಳಿದರು. ಈ ಮೂಲಕ ಯುವನಟರು ತಮ್ಮ ಸ್ಟಾರ್ ವಾರ್ ಗಳನ್ನ ಬದಿಗಿಟ್ಟು ಚಿತ್ರೋದ್ಯಮದ ಬೆಳವಣಿಗೆಗೆ ಮುಂದಾಗಬೇಕು ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.