Neer Dose Karnataka
Take a fresh look at your lifestyle.

ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲಿಯೂ ಕೂಡ ನಟನೆ ಮಾಡಿದ್ದಾರೆ ಅಣ್ಣಾವ್ರು, ಯಾವ ಸಿನೆಮಾ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ದೇವರು ಯಾರು ಎಂದು ಕೇಳಿದಾಗ ಬರುವ ಒಂದೇ ಒಂದು ಉತ್ತರ ಎಂದರೆ ಅದು ಖಂಡಿತವಾಗಿಯೂ ನಟ ಸಾರ್ವಭೌಮ ಡಾ ರಾಜಕುಮಾರ್ ಎಂದು. ಕನ್ನಡ ಚಿತ್ರರಂಗದ ಮೇರು ನಟನಾಗಿ ಮಾತ್ರವಲ್ಲದೆ ಯಾವಾಗೆಲ್ಲಾ ಕನ್ನಡ ನಾಡು ನುಡಿ ನೆಲಕ್ಕೆ ಅನ್ಯಾಯವಾಗುತ್ತದೆಯೋ ಆವಾಗೆಲ್ಲಾ ರಾಜಕುಮಾರ್ ರವರು ಧ್ವನಿಯೆತ್ತಿ ಕನ್ನಡದ ಮಕ್ಕಳನ್ನು ಒಟ್ಟುಗೂಡಿಸಿ ಕನ್ನಡಕ್ಕೆ ಜಯ ತಂದುಕೊಟ್ಟಿದ್ದಾರೆ.

ಇದಕ್ಕಾಗಿಯೇ ಕನ್ನಡದ ಕುಲ ತಿಲಕ ಎಂಬುದಾಗಿ ಅಣ್ಣಾವ್ರನ್ನು ಕರೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡ ನಟ ಅಣ್ಣಾವ್ರು ಎಂದರೂ ತಪ್ಪಾಗಲಾರದು. ಬೇರೆ ನಟರು ಪಾತ್ರದಲ್ಲಿ ನಟಿಸಿದರೆ ನಮ್ಮ ಅಣ್ಣಾವ್ರು ಪಾತ್ರದಲ್ಲಿ ಜೀವಿಸುತ್ತಿದ್ದರು. ಒಬ್ಬ ಕನ್ನಡಿಗ ಹೇಗಿರಬೇಕೆಂಬುದರ ಕುರಿತಾಗಿ ಅಣ್ಣಾವ್ರನ್ನು ನೋಡಿ ನಾವು ಕಲಿಯಬೇಕು. ಕನ್ನಡದ ಸರ್ವಗುಣಸಂಪನ್ನ ರಾಜಕುಮಾರ್ ರವರು ಎಂದರೆ ಅತಿಶಯೋಕ್ತಿಯಲ್ಲ. ಇನ್ನು ಅಣ್ಣಾವ್ರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿ ಕೂಡ ಒಂದು ಚಿತ್ರದಲ್ಲಿ ನಟಿಸಿದ್ದರು ಎಂದರೆ ನೀವು ನಂಬುತ್ತೀರಾ ನಂಬಲೇಬೇಕು ಬನ್ನಿ ನಾವು ಅದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಗೆಳೆಯರೇ ಅಣ್ಣಾವ್ರು ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ನಟಿಸಿದ ಅಥವಾ ನಾಯಕ ನಟನಾಗಿ ನಟಿಸಿದ ಚಿತ್ರವೆಂದರೆ ಅದು ಬೇಡರಕಣ್ಣಪ್ಪ. ಬೇಡರಕಣ್ಣಪ್ಪ ಚಿತ್ರ ಮೇ 7 1954 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಹೆಚ್ ಎಲ್ ಎನ್ ಸಿಂಹರವರು ನಿರ್ದೇಶಿಸಿದ್ದರು. ಕನ್ನಡದಲ್ಲಿ ಪಂಡರಿಬಾಯಿರವರ ನಾಯಕಿಯಾಗಿ ನಟಿಸಿದ್ದಾರೆ ತೆಲುಗಿನಲ್ಲಿ ಕೆ ಮಾಲತಿ ಎಂಬುವವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ತೆಲುಗಿನಲ್ಲಿ ಇದು ಕಾಳಹಸ್ತಿ ಮಹತ್ಯಂ ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು. ಇದೇ ಮೊದಲ ಹಾಗೂ ಕೊನೆಯ ಚಿತ್ರ ಅಣ್ಣಾವ್ರು ಪರಭಾಷೆಯಲ್ಲಿ ನಟಿಸಿದ್ದು. ಇದಾದ ನಂತರ ಅವರು ತಮ್ಮ ಕೊನೆಯ ಉಸಿರಿನವರೆಗೂ ಕೂಡ ಕನ್ನಡಕ್ಕಾಗಿಯೇ ದುಡಿದವರು.

Comments are closed.