Neer Dose Karnataka
Take a fresh look at your lifestyle.

ಇಷ್ಟವಿಲ್ಲದೆ ಮದುವೆಯಾದ್ರೆ ಏನಾಗುತ್ತದೆ ಗೊತ್ತೇ?? ವಿಚ್ಚೇದನ ಕೇಳಿದಕ್ಕೆ ಈ ಪತಿರಾಯ ಮಾಡಿರುವುದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ನಾವು ಹೇಳಲು ಹೊರಟಿರುವುದು ಮರ್ಯಾದಾಗಿ ಜೀವ ತೆಗೆದ ಕುರಿತಂತೆ. ನಮ್ಮ ಭಾರತ ದೇಶದಲ್ಲಿ ಇಂತಹ ಹಲವಾರು ಪ್ರಕರಣಗಳು ಹಿಂದೆ ನಡೆದಿದ್ದು ಹಾಗೂ ಈಗಲೂ ಕೂಡ ನಡೆಯುತ್ತಿವೆ. ಇನ್ನು ಇದು ನಡೆದಿರುವುದು ಭಾರತ ಮೂಲದ ಲಂಡನ್ ನಲ್ಲಿರುವ ಪಂಜಾಬಿ ಕುಟುಂಬದಲ್ಲಿ. ಸಾಮಾನ್ಯವಾಗಿ ಈ ತರಹ ನಡೆಯುವುದು ಹೆಣ್ಣುಮಕ್ಕಳ ತವರು ಮನೆಯವರಿಂದ. ಆದರೆ ಇಲ್ಲಿ ನಡೆದಿರುವುದು ಗಂಡನ ಮನೆ ಕಡೆಯಿಂದ.

ಸುರ್ಜೀತ್ ಕೌರ್ ಎಂಬಾಕೆ ಈ ಪ್ರಕರಣಕ್ಕೆ ಗುರಿಯಾದ ದುರ್ದೈವಿ. ಈಕೆಯ ಕುಟುಂಬ ಪಂಜಾಬ್ ಮೂಲದವರಾಗಿದ್ದರೂ ಕೂಡ ಚಿಕ್ಕವರಿರಬೇಕಾದರೆ ಇಂಗ್ಲೆಂಡ್ ನ ಲಂಡನ್ ಗೆ ಬಂದುಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸುರ್ಜೀತ್ ಕೌರ್ ಗೆ 19 ನೇ ವಯಸ್ಸಿನಲ್ಲಿಯೇ ಆಕೆಯನ್ನು ಆಕೆಯ ಅನುಮತಿ ಕೂಡ ಪಡೆಯದೆ ಸುಖದೇವ್ ಎನ್ನುವವನ ಜೊತೆಗೆ ಮದುವೆ ಮಾಡಿಕೊಡಲಾಗುತ್ತದೆ. ಸುರ್ಜಿತ್ ಗಿಂತ ಸುಖದೇವ್ ವಯಸ್ಸಿನಲ್ಲಿ ಎಂಟರಿಂದ ಒಂಬತ್ತು ವರ್ಷ ದೊಡ್ಡವನಾಗಿದ್ದ.

ಇನ್ನು ಮದುವೆಯಾಗಿ ಬಂದನಂತರ ಸುರ್ಜಿತ್ ಅವರಿಗೆ ತನ್ನ ಗಂಡನ ಮನೆಯಲ್ಲಿ ಅತ್ತೆಯದ್ದೇ ಎಲ್ಲ ಸರ್ವಾಧಿಕಾರತ್ವ ಎಂಬುದಾಗಿ ತಿಳಿದುಬಂದಿತ್ತು. ಸುಖದೇವ ತಾಯಿ ಪಚನ್ ಕೌರ್ ತನ್ನ ಸೊಸೆಯನ್ನು ಸೊಸೆ ರೀತಿ ಕಾಣದೆ ಮನೆ ಕೆಲಸದವಳಂತೆ ಕಾಣುತ್ತ ಬಂದಿದ್ದಳು. ಇನ್ನು ಸುರ್ಜಿತ್ ಕೌರ್ ಸಾಕಷ್ಟು ಸುಶಿಕ್ಷಿತ ಹೆಣ್ಣುಮಗಳ ಆಗಿದ್ದರಿಂದ ಅಲ್ಲಿನ ಹೆಚ್ಎಮ್ ಏರ್ಪೊರ್ಟ್ ನಲ್ಲಿ ಕಸ್ಟಮ್ ವಿಭಾಗದ ಕೆಲಸದಲ್ಲಿ ಸೇರಿಕೊಳ್ಳುತ್ತಾಳೆ.

ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ಪಾಶ್ಚಾತ್ಯ ಉಡುಗೆ ಹಾಗೂ ಮೇಕಪ್ ಗಳನ್ನು ಧರಿಸಿಕೊಂಡು ಬರಬೇಕಾಗಿತ್ತು. ಅತಿ ಬೇಗನೆ ಸುರ್ಜಿತ್ ಕೌರ್ ಎಲ್ಲರ ಮೆಚ್ಚುಗೆಯನ್ನು ಸಂಪಾದಿಸುತ್ತಾಳೆ. ಆದರೆ ಅತ್ತೆ ಮನೆಯವರು ಹಾಗೂ ಗಂಡ ಇದನ್ನು ಸಹಿಸಿಕೊಳ್ಳುವುದಿಲ್ಲ ಬದಲಾಗಿ ವಿರೋಧಿಸುತ್ತಾರೆ ಇದು ನಮ್ಮ ಮನೆಯ ಸಂಪ್ರದಾಯಕ್ಕೆ ವಿರುದ್ಧ ಎಂದು ಆಕೆಯ ಮೇಲೆ ಹರಿಹಾಯುತ್ತಾರೆ.

ಇನ್ನು ಪದೇಪದೇ ದಿನಕಳೆದಂತೆ ಸುರ್ಜಿತ್ ಕೌರ್ ಗೆ ಈ ಕೆಲಸದಲ್ಲಿ ಇನ್ನಷ್ಟು ಉತ್ತಮ ಹುದ್ದೆಯನ್ನು ಪಡೆದುಕೊಳ್ಳಬೇಕು ಎಂಬ ಆಸೆ ಇತ್ತು. ಇನ್ನು ಇತ್ತ ಸುಖದೇವ್ ಕೂಡ ತನ್ನ ಪತ್ನಿಯ ಮೇಲೆ ಅನುಮಾನ ಪಟ್ಟು ಬೇಹುಗಾರಿಕೆ ನಡೆಸಲು ಪ್ರಾರಂಭಿಸಿದನು. ಗಂಡನ ಕಾರ್ಯದಿಂದಾಗಿ ಬೇಸತ್ತು ಸುರ್ಜಿತ್ ಕೌರ್ ಕೆಲಸದಲ್ಲಿ ಇನ್ನೊಬ್ಬ ಗಂಡಸಿನ ಜೊತೆ ಪ್ರೇಮ ಸಂಬಂಧವನ್ನು ಹೊಂದಲು ಪ್ರಾರಂಭಿಸಿದಳು.

ಇತ್ತ ಗಂಡನೊಂದಿಗೆ ವಿಚ್ಛೇದನವನ್ನು ಪಡೆಯಲು ಕೂಡ ಯೋಚಿಸಿದಳು. ಇದು ಗಂಡ ಹಾಗೂ ಗಂಡನ ಮನೆಯವರಿಗೆ ಸಾಕಷ್ಟು ಕೋಪವನ್ನು ತರಿಸಿತು. ಒಂದು ಸಲ ಮದುವೆಯಾದಮೇಲೆ ವಿಚ್ಛೇದನ ಪಡೆಯುವ ರೀತಿ ನಿಯಮವೇ ನಮ್ಮ ವಂಶದಲ್ಲಿ ಇಲ್ಲ ಇದು ನಮ್ಮ ವಂಶಕ್ಕೆ ಮಾಡಿದಂತಹ ಅಪಮಾನ ಎಂಬುದಾಗಿ ರೊಚ್ಚಿಗೇಳುತ್ತಾರೆ. ಇದಕ್ಕೆ ಸುರ್ಜಿತ್ ಕೌರ್ ಇಷ್ಟವಿಲ್ಲದ ಮನುಷ್ಯನ ಜೊತೆಗೆ ಎಷ್ಟು ಕಾಲ ಎಂದು ಸುಖವಾಗಿ ಬಾಳಲು ಸಾಧ್ಯವಾಗುತ್ತದೆ ಎಂಬುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಳು.

ಇನ್ನು ಇದರ ಕುರಿತಂತೆ ತಿಳಿದಂತಹ ಆಕೆಯ ಅತ್ತೆ ಪಚನ್ ಕೌರ್ ಅವಳನ್ನು ಮುಗಿಸುವ ನಿರ್ಧಾರವನ್ನು ತನ್ನ ಮಗ ಹಾಗೂ ಕುಟುಂಬದವರೊಂದಿಗೆ ಸೇರಿ ಮಾಡುತ್ತಾಳೆ. ಇನ್ನು ಅತ್ತೆ ಸುರ್ಜಿತ್ ಕೌರ್ ಗೆ ನಿನಗೆ ವಿವಾಹ ವಿಚ್ಛೇದನ ಬೇಕಾದರೆ ಪಂಜಾಬಿನಲ್ಲಿ ನಡೆಯುವ ಎರಡು ಮದುವೆಗಳನ್ನು ನೀನು ನಿನ್ನ ಗಂಡನೊಂದಿಗೆ ಅಟೆಂಡ್ ಮಾಡಬೇಕು ಅದಾದನಂತರ ನೀನು ವಿಚ್ಛೇದನವನ್ನು ಪಡೆದುಕೊಳ್ಳಬಹುದು ಎಂಬುದಾಗಿ ಹೇಳುತ್ತಾರೆ. ಇದರ ಹಿಂದಿನ ಯಾವುದೇ ರಹಸ್ಯ ವಿಚಾರಗಳನ್ನು ಕೂಡ ತಿಳಿಯದ ಸುರ್ಜಿತ್ ಕೌರ್ ಗಂಡನೊಂದಿಗೆ ಪಂಜಾಬಿಗೆ ಹಾರಿದಳು. ಎರಡು ಮದುವೆಯನ್ನು ಅಟೆಂಡ್ ಮಾಡಿದ ನಂತರ ಕೆಲವೇ ಸಮಯಗಳಲ್ಲಿ ಅಕೆ ಕಾಣೆಯಾಗುತ್ತಾಳೆ. ಇದನ್ನು ಆಕೆಯ ಗಂಡ ಸುಖದೇವ್ ಅಲ್ಲಿನ ಪೊಲೀಸರಿಗೆ ಅವಳು ಬೇರೆಯವರೊಂದಿಗೆ ಲಂಡನ್ಗೆ ಹಾರಿರಬಹುದು ಎಂಬುದಾಗಿ ಅಲ್ಲಿ ಕೂಡ ವಿಚಾರಣೆ ನಡೆಯುತ್ತಿದೆ ಎಂಬುದಾಗಿ ಫೇಕ್ ಡಾಕ್ಯುಮೆಂಟ್ ನೀಡುತ್ತಾನೆ.

ಇನ್ನು ಲಂಡನ್ನಲ್ಲಿ ಕೂಡ ಸುರ್ಜೀತ್ ಕೌರ್ ಇದರ ಕುರಿತಂತೆ ಪತ್ರ ಬರೆದಿದ್ದಾಳೆ ಎಂಬುದಾಗಿ ಸುಳ್ಳು ಪತ್ರವನ್ನು ಬರೆದು ಲಂಡನ್ ಪೊಲೀಸರಿಗೂ ಕೂಡ ನೀಡುತ್ತಾನೆ. ಆದರೆ ಇದಾದ ಕೆಲವೇ ವರ್ಷಗಳಲ್ಲಿ ಸರಬ್ಜೀತ್ ಕೌರ್ ಎಂಬಾಕೆ ಆಕೆಯ ಸೋದರ ಸಂಬಂಧಿ ಪೊಲೀಸರಿಗೆ ಪಚನ್ ಕೌರ್ ನಡೆಸಿದ ಸುರ್ಜೀತ್ ಕೌರ್ ಳನ್ನು ಮುಗಿಸಲು ಕರಿಸಿದ್ದ ಸಂಬಂಧಿಕರ ಸಭೆಯಲ್ಲಿ ನಾನು ಕೂಡ ಇದ್ದೆ ಆಕೆಯನ್ನು ಪಂಜಾಬಿಗೆ ಹೋಗಿ ಇಬ್ಬರು ಸುಪಾರಿ ಗಳಿಂದ ಮುಗಿಸಲಾಗಿದೆ ಎಂಬುದಾಗಿ ಹೇಳಿದ್ದಾರೆ. ಇದಾದನಂತರ ಪಚನ್ ಕೌರ್ ಹಾಗೂ ಸುಖದೇವ್ ಇಬ್ಬರಿಗೂ ಕೂಡ 27 ವರ್ಷದ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಜೀವನದಲ್ಲಿ ಸಾಧಿಸ ಹೊರಟಿದ್ದ ಸುರ್ಜಿತ್ ಕೌರ್ ಗೆ ಇಂತಹ ದುಃಸ್ಥಿತಿ ಒದಗಿದ್ದು ನಿಜಕ್ಕೂ ಶೋಚನೀಯ.

Comments are closed.