Neer Dose Karnataka
Take a fresh look at your lifestyle.

ಕೊನೆಗೂ ಬರೋಬ್ಬರಿ 20 ದಿನಗಳಾದ ಮೇಲೆ ಅಶ್ವಿನಿ ರವರ ಮುಂದಿನ ಜೀವನದ ಕುರಿತು ಮಹತ್ವದ ನಿರ್ಧಾರ, ದೊಡ್ಮನೆಯಿಂದ ಬಂತು ಮಹತ್ವದ ಸುದ್ದಿ, ಏನು ಗೊತ್ತೇ??

1

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ನೆನ್ನೆ ಮೊನ್ನೆಯಷ್ಟೇ ನೋಡಿದಂತಿತ್ತು ಅದಾಗಲೇ ಅವರನ್ನು ಕಳೆದುಕೊಂಡು 20 ದಿನಗಳು ಮೇಲೆ ಕಳೆದಿದೆ. ನಿಜವಾಗಲೂ ಕೂಡ ಅವರು ಇಲ್ಲ ಎಂಬ ಕಟುಸತ್ಯವನ್ನು ನಂಬಲು ಕೂಡ ಸಾಧ್ಯವಾಗುತ್ತಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್ ಎನ್ನುವುದಕ್ಕೆ ಹಲವಾರು ಉದಾಹರಣೆಗಳನ್ನು ನೀಡಬಹುದಾಗಿದೆ.

ತಂದೆ-ತಾಯಿಯರಿಗೆ ಒಬ್ಬ ಜವಾಬ್ದಾರಿಯುತ ಮಗನಾಗಿ ಸಹೋದರ ಹಾಗೂ ಸಹೋದರಿಯರಿಗೆ ನೆಚ್ಚಿನ ತಮ್ಮನಾಗಿ ತನ್ನನ್ನು ಮೆಚ್ಚಿ ಬಂದ ಹೆಂಡತಿಗೆ ಒಬ್ಬ ಗಂಡನಾಗಿ ತಮ್ಮ ಮಕ್ಕಳಿಗೆ ಒಬ್ಬ ಒಳ್ಳೆಯ ತಂದೆಯಾಗಿ ಪುನೀತ್ ರಾಜಕುಮಾರ್ ಅವರನ್ನು ನಾವು ಉದಾಹರಣೆಯಾಗಿ ನೀಡಬಹುದಾಗಿದೆ. ಕುಟುಂಬದ ಕುರಿತಂತೆ ಅವರು ಸಾಕಷ್ಟು ಆಸೆಯನ್ನು ಇಟ್ಟುಕೊಂಡಿದ್ದರು ಹಾಗೂ ಅದರಂತೆಯೇ ಜೀವನವನ್ನು ಕೂಡ ನಡೆಸಿದ್ದಾರೆ.

ಇನ್ನು ತಾವು ಕನ್ನಡದ ಕೋಟ್ಯಾಧಿಪತಿಯಲ್ಲಿ ಕಾರ್ಯಕ್ರಮ ನಡೆಸುವಾಗ ಯಾರಾದರೂ ಕಷ್ಟದಲ್ಲಿರುವವರು ಗೆದ್ದಂತಹ ಹಣವನ್ನು ಒಳ್ಳೆಯ ಕೆಲಸಕ್ಕಾಗಿ ಸಾಮಾಜಿಕ ಕಾರ್ಯಕ್ಕಾಗಿ ಉಪಯೋಗಿಸುತ್ತೇನೆ, ಎಂದರೆ ಮೊದಲು ನಿಮ್ಮ ತಂದೆ-ತಾಯಿ ನೋಡಿಕೊಳ್ಳಿ ಹಾಗೂ ಕುಟುಂಬವನ್ನು ನೋಡಿ ನಂತರ ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸಿ ಎಂದು ಹೇಳುತ್ತಿದ್ದಾರೆ. ಆದರೆ ಈಗ ಅವರೇ ಇಲ್ಲ ಎನ್ನುವುದು ಸಾಕಷ್ಟು ಬೇಸರದ ವಿಷಯವಾಗಿದೆ. ಈಗ ಅಶ್ವಿನಿ ಅವರ ಮೇಲೆ ಕುಟುಂಬದ ಹಾಗೂ ಪುನೀತ್ ರಾಜಕುಮಾರ್ ಅವರು ಮಾಡಿಕೊಂಡು ಬರುತ್ತಿದ್ದ ಎಲ್ಲಾ ಕೆಲಸಗಳ ಜವಾಬ್ದಾರಿ ಕೂಡ ಬಂದಿದೆ.

ಇದಕ್ಕಾಗಿ ಒಂದು ಹೊಸ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ. ಈ ಹಿಂದೆ ಅಶ್ವಿನಿ ಪುನೀತ್ ರಾಜಕುಮಾರ್ ರವರು ನಿರ್ಮಾಪಕಿಯಾಗಿ ಹಲವಾರು ಸಿನಿಮಾ ಹಾಗೂ ಧಾರವಾಹಿಗಳನ್ನು ನಿರ್ಮಿಸಿದ್ದಾರೆ. ಆದರೆ ಇಂತಹ ಯಾವುದೇ ವಿಷಯಗಳಿದ್ದರೂ ಕೂಡ ಪುನೀತ್ ರಾಜಕುಮಾರ್ ರವರ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಹೊರ ಬರುತ್ತಿತ್ತು.

ಆದರೆ ಈಗ ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ಕುಟುಂಬದ ಕುರಿತಂತೆ ಹಾಗೂ ಪುನೀತ್ ರಾಜಕುಮಾರ್ ಅವರ ಸಂಸ್ಥೆಗಳ ಕಾರ್ಯದ ಕುರಿತಂತೆ ಜನರಿಗೆ ತಲುಪಿಸಲು ರಾಜಕುಮಾರ್ ಅವರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಎಲ್ಲಾ ವಿಷಯಗಳ ಕುರಿತಂತೆ ಅಶ್ವಿನಿ ಪುನೀತ್ ರಾಜಕುಮಾರ್ ರವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅಧಿಕೃತ ಮಾಹಿತಿಗಳನ್ನು ನೀಡಲಿದ್ದಾರೆ.

ಇನ್ನು ಇಲ್ಲದಿದ್ದರೆ ಬೇರೆ ಬೇರೆ ಮಾಧ್ಯಮಗಳ ಮೂಲಕ ಸುಳ್ಳುಸುದ್ದಿ ಹರಡಬಹುದಾಗಿದೆ. ಪುನೀತ್ ರಾಜಕುಮಾರ್ ರವರು ಇರುವವರೆಗೂ ಕೂಡ ಅಶ್ವಿನಿ ಅವರು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ರಲಿಲ್ಲ. ಇನ್ನು ಪುನೀತ್ ರಾಜಕುಮಾರ್ ಅವರು ಕೂಡ ತಮ್ಮ ಮಡದಿ ಹಾಗೂ ಮಕ್ಕಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪ್ರಚಾರ ಮಾಡದೆ ಸಿಂಪಲಾಗಿ ಇದ್ದರು. ಆದರೆ ಈಗ ಅಶ್ವಿನಿ ಅವರು ಈ ನಿರ್ಧಾರ ಮಾಡಿರುವುದು ಅಭಿಮಾನಿಗಳಲ್ಲಿ ಕೂಡ ಸಂತಸವನ್ನುಂಟು ಮಾಡಿದೆ. ಇನ್ನು ಈ ವಿಚಾರದ ಕುರಿತಂತೆ ರಾಘವೇಂದ್ರ ರಾಜಕುಮಾರ್ ವಿನಯ ರಾಜಕುಮಾರ್ ಹಾಗೂ ಯುವರಾಜಕುಮಾರ್ ಎಲ್ಲರೂ ಕೂಡ ಸ್ಪಷ್ಟೀಕರಿಸಿದ್ದಾರೆ.

Leave A Reply

Your email address will not be published.