Neer Dose Karnataka
Take a fresh look at your lifestyle.

ದರ್ಶನ್ ರವರ ನಿಂತುಹೋಗಿರುವ ಈ ಚಿತ್ರಗಳು ಮತ್ತೆ ಪ್ರಾರಂಭವಾಗುತ್ತಾ?? ಎಷ್ಟೆಲ್ಲ ಚಿತ್ರಗಳು ನಿಂತಿವೆ ಗೊತ್ತೇ?? ಪ್ರಾರಂಭವಾದರೆ ಸುವರ್ಣ ಯುಗವೇ ಪ್ರಾರಂಭವಾದಂತೆ.

6

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗ ಇದು ಬಂದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿಮಾಗಳು ಸಾಕಷ್ಟು ಇತ್ತೀಚಿನ ದಿನಗಳಲ್ಲಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಮಾಡರ್ನ್ ಹಾಗೂ ಪೌರಾಣಿಕ-ಐತಿಹಾಸಿಕ ಯಾವುದೇ ಪಾತ್ರಗಳನ್ನು ಕೂಡ ನಿರ್ವಹಿಸುವಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎತ್ತಿದ ಕೈ.

ಆದರೆ ಕೆಲವೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರಗಳು ಚಿತ್ರೀಕರಣ ಪ್ರಾರಂಭವಾಗಿದ್ದರೂ ಕೂಡ ಸುದ್ದಿಯಾಗದೆ ಉಳಿದುಕೊಂಡಿವೆ. ಇನ್ನು ಕೆಲವು ಚಿತ್ರಗಳು ಬರುತ್ತವೆ ಎಂದು ಸುದ್ದಿಯಾಗಿ ಈಗ ಸೈಲೆಂಟಾಗಿ ಉಳಿದಿವೆ. ಹಾಗಿದ್ದರೆ ಆ ಚಿತ್ರಗಳು ಯಾವುವು ಎಂಬುದನ್ನು ನಾವು ನಿಮಗೆ ವಿವರವಾಗಿ ತಿಳಿಸುತ್ತೇವೆ. ರಾಜ ವೀರ ಮದಕರಿ ನಾಯಕ ಬಿ ಎಲ್ ವೇಣು ಕಾದಂಬರಿ ಆಧಾರಿತ ಈ ಚಿತ್ರವನ್ನು ರಾಕಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದರೆ ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶನ ಮಾಡುತ್ತಿದ್ದರು.

ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಮಹಾಮಾರಿ ಬಂದ ಕಾರಣದಿಂದಾಗಿ ಈ ಚಿತ್ರವನ್ನು ಮುಂದೂಡಲಾಗಿತ್ತು. ಈ ಚಿತ್ರದ ಮೂಲಕ ಕನ್ನಡ ನಾಡು ಕಂಡಂತಹ ಶ್ರೇಷ್ಠ ಹಾಗೂ ವೀರಯೋಧನ ಒಬ್ಬನ ಕಥೆಯನ್ನು ಎಲ್ಲರೂ ಕೇಳುವ ಅವಕಾಶ ಒದಗಿಬಂದಿತ್ತು. ಸಿಂಧೂರ ಲಕ್ಷ್ಮಣ ರಾಬರ್ಟ್ ಚಿತ್ರದ ನಂತರ ಉಮಾಪತಿ ಶ್ರೀನಿವಾಸಗೌಡ ನಿರ್ಮಾಣದಲ್ಲಿ ಹಾಗೂ ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಬೇಕಾಗಿತ್ತು. ಉತ್ತರ ಕರ್ನಾಟಕದ ವೀರ ಸ್ವಾತಂತ್ರ್ಯ ಹೋರಾಟಗಾರನಾಗಿ ರುವ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಟಿಸಬೇಕೆಂಬುದು ಅವರ ಅಭಿಮಾನಿಗಳ ಆಶಯವಾಗಿತ್ತು. ಆದರೆ ಇತ್ತೀಚೆಗೆ ನಡೆದಿರುವ ಘಟನೆಗಳಿಂದಾಗಿ ಚಿತ್ರ ಟೇಕಾಫ್ ಆಗುತ್ತದೆ ಇಲ್ಲವೋ ಎಂಬುದು ಅನುಮಾನವಾಗಿದೆ.

ಗೋಲ್ಡ್ ರಿಂಗ್ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಹಾಗೂ ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಬೇಕಾಗಿತ್ತು. ಚಿತ್ರದ ಕುರಿತಂತೆ ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಕೂಡ ಉಂಟಾಗಿತ್ತು. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ದೇವಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿತ್ತು. ಆದರೆ ಚಿತ್ರ ಮಾತ್ರ ಅಧಿಕೃತವಾಗಿ ಎಲ್ಲೂ ಕೂಡ ಪ್ರಕಟಣೆ ಆಗಲಿಲ್ಲ.

ಮಂಡ್ಯ ಕರಿಯ ಚಿತ್ರದ ನಂತರ ಮತ್ತೊಮ್ಮೆ ಪ್ರೇಮ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಆಂಜನೇಯ ಚಿತ್ರದ ಮೂಲಕ ಒಂದಾಗಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ಘಟನೆಯ ಅವಲೋಕಿಸಿದರೆ ಈ ಚಿತ್ರ ಮುಂದುವರೆಯುವುದು ಖಂಡಿತವಾಗಿಯೂ ಅನುಮಾನವೇ. ಮೇಜರ್ ವೆನ್ ಕಮಾಂಡರ್ ಅಭಿನಂದನ್ ಅವರ ಜೀವನಾಧಾರಿತ ಕಥೆಯನ್ನು ಚಿತ್ರ ಮಾಡಿ ಅದರಲ್ಲಿ ದರ್ಶನ್ ಅವರನ್ನು ನಟಿಸುವುದಾಗಿ ನಿರ್ಮಾಪಕ ಮುನಿರತ್ನ ಅವರು ಘೋಷಿಸಿದರು

ಆದರೆ ಈ ಚಿತ್ರ ಕೂಡ ಇದಕ್ಕಿಂತ ಮುಂದುವರೆದಿದ್ದನ್ನು ನೋಡಲೇ ಇಲ್ಲ. ಇನ್ನು ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಿ ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣದ ವಿ ಹರಿಕೃಷ್ಣ ಸಂಗೀತ ಹಾಗೂ ನಿರ್ದೇಶನ ಇರುವ ರಚಿತರಾಮ್ ಸುಮಲತಾ ಅಂಬರೀಶ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕ್ರಾಂತಿ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Leave A Reply

Your email address will not be published.