Neer Dose Karnataka
Take a fresh look at your lifestyle.

ನೂರಾರು ಕೋಟಿ ಆಸ್ತಿ ಇದ್ರೂ ಬಡವನನ್ನು ಪ್ರೀತಿ ಮಾಡಿದ್ಲು, ಆದರೆ ನಂತರ ನಡೆದದ್ದೇನು ಗೊತ್ತೇ?? ಆಕೆಯೇ ಮಾತನಾಡಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲೂ ಕೂಡ ಶ್ರೀಮಂತರ ಹುಡುಗಿ ಬಡ ಹುಡುಗನನ್ನು ಪ್ರೀತಿಸುವುದು ಇದ್ದೇ ಇರುತ್ತದೆ. ಆದರೆ ಇದರಿಂದಾಗಿ ಆ ಹುಡುಗ ಎಷ್ಟು ಕಷ್ಟ ಪಡುತ್ತಾನೆ ಎಂಬುದು ಕೂಡ ನೋಡಬೇಕಾಗಿರುವ ವಿಷಯವಾಗಿರುತ್ತದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಭಾರತದಲ್ಲಿ ನಡೆದಿರುವ ನೈಜ ವಿಷಯದ ಕುರಿತಂತೆ.

ಲಕ್ಸ್ ಕೋಝಿ ಸಂಸ್ಥೆಯ ಹೆಸರನ್ನು ನೀವು ಕೇಳಿರಬಹುದು. ಈ ಸಂಸ್ಥೆಯ ಮಾಲೀಕ ಅಶೋಕ್ ಥೋಡಿ. ಇವರ ಬಳಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಇದೆ. ಆದರೆ ಇವರ ಮಗಳು ಪ್ರಿಯಾಂಕ ಕೋಲ್ಕತ್ತ ಮೂಲದ ರಿಜ್ವಾನ್ ಎಂಬಾತನ ಪ್ರೇಮಪಾಶಕ್ಕೆ ಬೀಳುತ್ತಾಳೆ. ಈ ವಿಚಾರದ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆಯವರೆಗೂ ಓದಿ. ತನ್ನ ವ್ಯಾಸಂಗ ಮುಗಿದ ಮೇಲೆ ಪ್ರಿಯಾಂಕ ರಿಜ್ವಾನ್ ಬಳಿ ಗ್ರಾಫಿಕ್ ಡಿಸೈನ್ ಕಲಿಯಲು ಪ್ರತಿದಿನ ತನ್ನ ಡ್ರೈವರ್ ನೊಂದಿಗೆ ಬರುತ್ತಿದ್ದಳು.

ರಿಜ್ವಾನ್ ಕೂಡ ಆಕೆಗೆ ಬೇರೆಯವರಂತೆ ಕಲಿಕೆಯ ಕುರಿತಂತೆ ಉತ್ತಮವಾಗಿ ತಿಳುವಳಿಕೆ ನೀಡುತ್ತಿದ್ದ ಹಾಗೂ ಸ್ನೇಹವನ್ನು ಕೂಡ ಹೊಂದಿದ್ದ. ಸ್ನೇಹ ಪ್ರೀತಿಗೆ ತಿರುಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಪ್ರಿಯಾಂಕಾ ಕೋಟ್ಯಾಧೀಶರ ನ ಮಗಳಾಗಿದ್ದರೂ ಕೂಡ ರಿಜ್ವಾನ್ ಅನ್ನು ಆಕೆ ನಿಜವಾಗಲೂ ಪ್ರೀತಿಸಿದಳು. ಇನ್ನು ಪ್ರಿಯಾಂಕಾಳಿಗೆ ಈ ವಿಷಯ ಮನೆಯವರಿಗೆ ತಿಳಿದರೆ ರಿಜ್ವಾನ್ ಪ್ರಾಣಕ್ಕೆ ಅಪಾಯ ನೀಡುತ್ತಾರೆ ಎಂಬ ಕುರಿತು ಚೆನ್ನಾಗಿ ಅರಿವಿತ್ತು. ಆದರೂ ಕೂಡ ಇವರಿಬ್ಬರ ನಡುವಿನ ಪ್ರೀತಿ ಕಡಿಮೆಯಾಗಲಿಲ್ಲ.

ಮದುವೆ ಸ್ಪೆಷಲ್ ಆಕ್ಟ್ ಪ್ರಕಾರ 2007 ರಲ್ಲಿ ಇವರಿಬ್ಬರೂ ಕೂಡ ಗುಟ್ಟಾಗಿ ಮದುವೆಯಾಗುತ್ತಾರೆ. ಇದು ಇವರ ಕೆಲವು ಸ್ನೇಹಿತರಿಗೆ ಬಿಟ್ಟು ಮತ್ಯಾರಿಗೂ ಕೂಡ ತಿಳಿದಿರಲಿಲ್ಲ. ಮದುವೆಯಾದ ಮೇಲೆ ಕೂಡ ರಿಜ್ವಾನ್ ಮನೆಯಲ್ಲಿ ಧರ್ಮದ ವಿಚಾರವಾಗಿ ಕ್ಯಾತೆ ತೆಗೆಯುತ್ತಾರೆ ಎಂಬ ಕಾರಣದಿಂದ ಹೇಳದೇ ಸುಮ್ಮನೆ ಉಳಿದಿದ್ದ. ಇನ್ನು ಇತ್ತ ಪ್ರಿಯಾಂಕ ಮನೆಯಲ್ಲಂತೂ ಈ ವಿಚಾರ ನಿಮಗೆ ಏನಾಗುತ್ತದೆ ಎಂಬುದು ಗೊತ್ತೇ ಇದೆ. ಆದರೂ ಈ ವಿಷಯವನ್ನು ಎಷ್ಟು ದಿನಗಳ ಕಾಲ ಮುಚ್ಚಿಡಲು ಸಾಧ್ಯ. ರಿಜ್ವಾನ್ ತನ್ನ ಮನೆಯವರಿಗೆ ಪ್ರಿಯಾಂಕಾಳನ್ನು ಕರೆತಂದು ಆಗಿರುವ ವಿಚಾರವನ್ನು ಹೇಳಿದ.

ಅವರು ಕೊಂಚ ಭಯವನ್ನು ವ್ಯಕ್ತಪಡಿಸಿದ್ದರು ಕೂಡ ಮತ್ತೇನನ್ನು ಹೇಳಲಿಲ್ಲ. ಇತ್ತ ಪ್ರಿಯಾಂಕಾ ಈ ವಿಚಾರವನ್ನು ತನ್ನ ತಂದೆಗೆ ಹೇಳಿದಾಗ ಅಶೋಕ್ ರವರು ಸುಮ್ಮನೆ ಕೂಲ್ ಆಗಿ ಮಾತಾಡಿ ಸುಮ್ಮನಾದರು. ನಂತರ ರಿಜ್ವಾನ್ ಗೆ ಕರೆ ಮಾಡಿ ವಾರ್ನಿಂಗ್ ನೀಡುತ್ತಾರೆ. ರಿಜ್ವಾನ್ ತನ್ನ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ ಎಂಬುದಾಗಿ ಕೂಡ ದೂರು ನೀಡುತ್ತಾರೆ. ಇದಕ್ಕೆ ಪ್ರಿಯಾಂಕಾ ನನ್ನನ್ನು ಯಾರು ಕೂಡ ಕಿಡ್ನಾಪ್ ಮಾಡಿಲ್ಲ ಎಂಬುದಾಗಿ ಪತ್ರದಲ್ಲಿ ಬರೆದುಕೊಡುತ್ತಾರೆ.

ರಿಜ್ವಾನ್ ಅನ್ಯ ಧರ್ಮ ನವರಾಗಿದ್ದರಿಂದ ಇದು ಅಶೋಕ್ ರವರಿಗೆ ಅಪಮಾನ ಜನಕವಾಗಿತ್ತು. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ಲಂಚ ಕೊಟ್ಟು ಬುಕ್ ಮಾಡಿ ರಿಜ್ವಾನ್ ಮೇಲೆ ಕಾರ್ಯಾಚರಣೆ ಮಾಡಲು ಕುಮ್ಮಕ್ಕು ನೀಡುತ್ತಾರೆ ಅಶೋಕ್. ಹಲವಾರು ಕಾರ್ಯಗಳನ್ನು ಕೂಡ ಅಶೋಕ್ ರವರ ಯಾವ ಕಾರ್ಯಗಳು ಸಫಲವಾಗಲಿಲ್ಲ. ನಂತರ ಅಶೋಕ ರವರು ನನ್ನ ಮಗಳನ್ನು ಒಂದುವಾರದ ಮಟ್ಟಿಗೆ ನಮ್ಮ ಮನೆಗೆ ಕಳಿಸಿಕೊಡಿ ಎಂದು ಕೇಳುತ್ತಾರೆ.

ಅದಕ್ಕೆ ರಿಜ್ವಾನ್ ಅಗ್ರಿಮೆಂಟ್ ಒಂದರಲ್ಲಿ ಒಂದು ವಾರದ ನಂತರ ಪ್ರಿಯಾಂಕಾಳನ್ನು ಮತ್ತೆ ಕಳುಹಿಸುವ ಕುರಿತಂತೆ ಅಶೋಕ್ ರವರಿಂದ ಸಹಿ ಪಡೆದುಕೊಂಡು ಕಳಿಸುತ್ತಾನೆ. ಒಂದು ವಾರದ ನಂತರ ಪ್ರಿಯಾಂಕ ಬರುವುದೇ ಇಲ್ಲ ಹಾಗೂ ಫೋನ್ ಕರೆಗೆ ಕೂಡ ಉತ್ತರಿಸುವುದಿಲ್ಲ. ಎನ್ ಜಿ ಓ ಗಳ ಬಳಿಗೆ ಹೋಗಿ ಅಗ್ರಿಮೆಂಟ್ ನಲ್ಲಿ ಸಹಿ ಹಾಕಿದ ಬಳಿಕವೂ ಕೂಡ ತನ್ನ ಪತ್ನಿಯನ್ನು ವಾಪಸ್ಸು ಕಳುಹಿಸಿ ಕೊಟ್ಟಿಲ್ಲ ಎಂಬುದಾಗಿ ಅಶೋಕ್ ರವರ ವಿರುದ್ಧ ಸಮರ ಸಾರುತ್ತಾರೆ. ಆದರೆ ಕೆಲವೇ ಸಮಯದಲ್ಲಿ ರಿಜ್ವಾನ್ ರೈಲ್ವೆ ಹಳಿಯಲ್ಲಿ ನಿರ್ಜೀವವಾಗಿ ಸಿಗುತ್ತಾನೆ.

ಇದರ ಕುರಿತಂತೆ ಸಾಕಷ್ಟು ಪ್ರತಿಭಟನೆಗಳು ಹಾಗೂ ಹೋರಾಟಗಳು ನಡೆದ ನಂತರ ಸಿಬಿಐ ತನಿಖೆಯನ್ನು ಮಾಡಿದಾಗ ರಿಜ್ವಾನ್ ತನ್ನ ಜೀವವನ್ನು ತಾನೇ ಕಳೆದುಕೊಂಡಿದ್ದಾನೆ ಆದರೆ ಈ ತರಹ ಮಾಡಲು ಆತನ ಮೇಲೆ ಹಲವಾರು ಒತ್ತಡವನ್ನು ಹಾಕಲಾಗಿತ್ತು ಎಂಬುದಾಗಿ ಹೇಳಿದ್ದಾರೆ. ಇದರ ಹಿನ್ನೆಲೆಯಲ್ಲಿ ಅಶೋಕ್ ಹಾಗೂ ಅವರ ಸಹಚರರು ವಿಚಾರಣೆಯನ್ನು ಅನುಭವಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಅತ್ಯಂತ ವಿಚಿತ್ರವಾಗಿ ಕಂಡು ಬಂದಿದ್ದು ಪ್ರಿಯಾಂಕಾ ಕೊನೆಯ ಬಾರಿಗೆ ನೀಡಿದ ಹೇಳಿಕೆ. ಪ್ರಿಯಾಂಕಳನ್ನು ಕೊನೆಯ ಬಾರಿ ವಿಚಾರಿಸಿದಾಗ ಆಕೆ ನನಗೂ ಹಾಗೂ ರಿಜ್ವಾನ್ ಯಾವುದೇ ವಿಧವಾದ ಅನುರಾಗ ಇರಲಿಲ್ಲ ಅವರು ಹೇಳಿದ ಕಡೆ ನಾನು ಸಹಿ ಹಾಕಿದ್ದೇನೆ ಅಷ್ಟೇ ಎಂಬುದಾಗಿ ಹೇಳಿಕೊಂಡು ಕೈತೊಳೆದುಕೊಂಡು ಬಿಟ್ಟಳು. ಇಂತಹ ಲವ್ ಸ್ಟೋರಿಗೆ ನೀವೇನು ಹೇಳುತ್ತೀರಿ.

Comments are closed.