Neer Dose Karnataka
Take a fresh look at your lifestyle.

ಬುದ್ದಿಯಿಂದ ಹಣ ಬಂತು, ಹಣ ಬಂತು ಬುದ್ದಿ ಹೋಯ್ತು; ಕೆಬಿಸಿಯಲ್ಲಿ ಐದು ಕೋಟಿ ಗೆದ್ದವನ ಕಥೆ ಏನಾಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಬುದ್ದಿ ನಮ್ಮ ಕೈಲಿದ್ದರೆ ಯಾವ ಅಪಾಯವೂ ಆಗಲಾರದು ಎನ್ನುತ್ತಾರೆ. ಯಾಕೆಂದರೆ ನಮ್ಮಲ್ಲಿರುವ ಬುದ್ದಿ ಅಥವಾ ಜ್ಞಾನವೇ ನಮ್ಮೆಲ್ಲಾ ಯಶಸ್ಸಿಗೆ ಮೆಟ್ಟಿಲು. ಬುದ್ದಿ ಚುರುಕಾಗಿದ್ದರೆ ಎಷ್ಟು ಬೇಕಾದರೂ ಹಣವನ್ನೂ ಕೂಡ ಗಳಿಸಬಹುದು. ಆದರೆ ಆ ಬುದ್ದಿ ಎಲ್ಲಿ ಹೇಗೆ? ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದು ಅರಿವಿರಬೇಕು. ಇದಕ್ಕೆ ವಿರುದ್ದವಾಗಿ ಬುದ್ದಿಯಿಂದ ಹಣ ಗಳಿಸಿ ಹಣ ಬಂದಾಗ ಬುದ್ದಿ ಕಳೆದುಕೊಳ್ಳಬೇಕಾಗಿಯೂ ಬರಬಹುದು. ಯಾಕೆಂದರೆ ಕೆಲವೊಮ್ಮೆ ನಮಗೆ ಅಚಾನಕ್ಕಾಗಿ ಬರುವ ಹಣದಿಂದ ನಮ್ಮ ಸ್ಥೀಮಿತವನ್ನೇ ಕಳೆದುಕೊಳ್ಳುತ್ತೆ, ಅತೀಯಾದ ಹಣ ನಮ್ಮ ಅಹಂಕಾರಕ್ಕೋ ಅಥವಾ ಮೂರ್ಖತನಕ್ಕೋ ಕಾರಣವಾಗಲೂ ಬಹುದು. ಹೀಗಾಗಿ ಕಷ್ಟ ಪಟ್ಟು ಗಳಿಸಿದ ಹಣವನ್ನೂ ಸಹ ಕಳೆದುಕೊಳ್ಳುವ ಸಂದರ್ಭ ಬಂದೊದಗುತ್ತೆ. ಇದಕ್ಕೆ ಒಂದು ಜ್ವಲಂತ ಉದಾಹರಣೆ ಎಂದರೆ ಕೌನ್ ಬನೇಗಾ ಕರೋಡ್ ಪತಿಯಲ್ಲಿ 5 ಕೋಟಿ ಹಣವನ್ನು ಗಳಿಸಿದ್ದ ಸುಶಿಲ್ ಕುಮಾರ್!

ಸ್ನೇಹಿತರೆ, 2011ರಲ್ಲಿ ಯುವಕನೊಬ್ಬ ತನ್ನ ಅತ್ಯಮೂಲ್ಯ ಉತ್ತರಗಳನ್ನು ನೀಡಿ ಕೌನ್ ಬನೇಗಾ ಕರೋಡ್ ಪತಿ ಶೋ ನಲ್ಲಿ 5 ಕೋಟಿ ಹಣಗಳಿಸಿದ್ದು ಮಾತ್ರವಲ್ಲದೇ ಬಿಗ್ ಬಿ ಗೇ ಆಶ್ಚರ್ಯವನ್ನುಂಟು ಮಾಡಿದ್ದ. ಬಿಹಾರದ ಬಡ ಕುಟುಂಬದಲ್ಲಿ ಹುಟ್ಟಿದ ಈತ, ಇಷ್ಟೋಂದು ಹಣವನ್ನು ಕೇವಲ ತನ್ನ ಬುದ್ದಿಶಕ್ತಿಯಿಂದಲೇ ಗಳಿಸಿದ್ದು ಆ ಊರಿಗೂ, ಜನರಿಗೂ ಹೆಮ್ಮೆಯನ್ನು ತಂದುಕೊಟ್ಟಿತ್ತು. ತನ್ನ ಈ ಸಾಧನೆಗೆ ಸ್ವತಃ ಸುಶೀಲ್ ಕುಮಾರ್ ಶಾಖ್ ಆಗಿದ್ದ!

ಸುಶೀಲ್ ಕುಮಾರ್ ನ ಈ ಸಾಧನೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂತು. ಜೊತೆಗೆ ಸುಶೀಲ್ ತಿಂಗಳಾನುಗಟ್ಟಲೆ ಟಿ ವಿ ಸಂದರ್ಶನಗಳಲ್ಲಿ ಮುಳುಗಿಹೋದರು. ಅವರು ಕೇಳುತ್ತಿದ್ದ ಪ್ರಶ್ನೆಗಳಿಗೂ ಎನೇನೂ ಉತ್ತರ ಕೊಡುತ್ತಿದ್ದರು. ಇಷ್ಟು ಹಣವನ್ನು ಏನು ಮಾಡುತ್ತೀರಿ ಎನ್ನುವವರಿಗೆ ತಾನೇ ಉದ್ಯಮ ಶುರು ಮಾಡುವುದಾಗಿ ಹೇಳುತ್ತಿದ್ದರು. ಹೀಗೆಂದು ತಾವೇ ಸ್ವತಃ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಮ್ಮ ಜೀವನ ಹಣಬಂದ ಮೇಲೆ ಹೇಗೆ ಬದಲಾಯಿತು ಎಂಬುದಾಗಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

ಸುಶೀಲ್ ಕುಮಾರ್ ದಿನಕಳೆದಂತೆ ಬಿಹಾರದಲ್ಲಿ ತುಂಬಾನೇ ಫೇಮಸ್ ಆಗ್ತಾರೆ. ಇದರಿಂದ ಅವರಿಗೆಅಹಂಕಾರ ಜಾಸ್ತಿಯಾಯ್ತೋ ಅಥವಾ ಬುದ್ದಿ ಮಟ್ಟ ಕಡಿಮೆ ಆಯ್ತೋ ಗೊತ್ತಿಲ್ಲ, ಒಟ್ಟಿನಲ್ಲಿ ಬಂದ ಹಣವೆಲ್ಲಾ ನೀರಾಗಿ ಕರಗಲು ಶುರುವಾಗತ್ತೆ, ಅಷ್ಟಲ್ಲದೇ ಹೇಳುತ್ತಾರೆಯೇ ’ಕೂತು ಉಂಡರೆ ಕುಡಿಕೆ ಹೊನ್ನೂ ಸಾಲದು’ ಅಂತ! ಸುಶೀಲ್ ತಮ್ಮ ಸಾಮಾಜಿಕ ಸೇವಾ ಮನೋಭಾವವನ್ನು ತೋರಿಸಲು ಶುರು ಮಾಡುತ್ತಾರೆ. ತಮ್ಮ ಬಳಿ ಸಹಾಯ ಕೇಳಿ ಬಂದವರಿಗೆ, ಸಂಘ ಸಂಸ್ಥೆಗಳಿಗೆ ಮನಸೋಇಚ್ಛೆ ದಾನ ಮಾಡಲು ಶೂರು ಮಾಡುತ್ತಾರೆ. ಹೀಗೇ ಮಾಡಿ ತಿಂಗಳಿಗೆ ಸುಮಾರು 50,000 ದವರೆಗೂ ಖರ್ಚು ಮಾಡುತ್ತಾರೆ. ಇದರಿಂದ ಬೇಸೆತ್ತ ಹೆಂಡತಿ ತಾಪ್ಪು ಮಾಡುತ್ತಿರುವುದಾಗಿ ಬುದ್ದಿ ಹೇಳುತ್ತಾಳೆ. ಅವಳು ಹೇಳಿದಂತೆ ಸಾಕಷ್ಟು ಜನ ಮೋಸವನ್ನು ಕೂಡ ಮಾಡುತ್ತಾರೆ. ಆದರೆ ಹೆಂಡತಿಯ ಮಾತನ್ನು ಸಂಪೂರ್ನವಾಗಿ ನಿರ್ಲಕ್ಷ ಮಾಡುತ್ತಾನೆ ಸುಶೀಲ್.

ಇನ್ನು ಕೈಯಲ್ಲಿರುವ ಕಾಸು ಕರಗುತ್ತಾ ಬಂದ ಹಾಗೆ ತಾನೇ ಒಂದು ಬ್ಯುಸಿನೆಸ್ ಮಾಡಲು ಸ್ನೇಹಿತನ ಸಹಾಯ ಪಡೆಯುತ್ತಾನೆ ಸುಶೀಲ್. ದೆಹಲಿಯಲ್ಲಿ ಕಾರನ್ನು ಕೊಂಡು ಅದನ್ನು ಬಾಡಿಗೆಗೆ ಬಿಡುವ ಪ್ಲಾನ್ ಮಾಡುತ್ತಾನೆ. ಹಾಗೆಯೇ ಕೆಲೌ ಕಾರ್ ಗಳನ್ನು ಖರೀದಿಸಿ ಬಾಡಿಗೆ ಬಿಡುತ್ತಾನೆ. ಈ ಸಮಯದಲ್ಲಿ ಬಿಹಾರ್ ನಿಂದ ದೆಹಲಿಗೆ ನಿತ್ಯವೂ ಓಡಾಡಬೇಕಾಗಿ ಬಂದಾಗ ದೆಹಲಿಯಲ್ಲಿಯೇ ರೂಮ್ ಮಾಡಿ ವಾಸಮಾಡುತ್ತಾನೆ. ಈ ಸಮಯದಲ್ಲಿ ಒಂದಿಷ್ಟು ವಿದ್ಯಾರ್ಥಿಗಳ ಪರಿಚಯವಾಗತ್ತೆ. ಅವರ ಬಳಿ ಮಾತನಾಡುವಾಗ ತಾನು ಬಾವಿಯೊಳಗಿರುವ ಕಪ್ಪೆ ತನಗೆ ಪ್ರಪಂಚದ ಜ್ಞಾನವೇ ಇಲ್ಲ ಎಮ್ಬುದು ಸುಶೀಲ್ ಗೆ ಅರಿವಾಗತ್ತೆ. ಹಾಗೆಯೇ ಸುಶೀಲ್ ಅವರುಗಳು ತನ್ನನ್ನು ಗೇಲಿ ಮಾಡುತ್ತಿದ್ದು ಇದರಿಂದಾಗಿ ತಾವು ದುಶ್ಚಟಗಳನ್ನು ಹಿಡಿಸಿಕೊಂಡಿದ್ದಾಗಿ ಬರೆದುಕೊಳ್ಳುತ್ತಾರೆ. ಹೌದು ಸುಶೀಲ್ ಮದ್ಯಪಾನ, ಧೂಮಪಾನಗಳಂಥ ಚಟಗಳ ದಾಸನಾಗುತ್ತಾ ಬರುತ್ತಾನೆ.

ಇದರಿಂದಲೂ ಒಂದಿಷ್ಟು ಹಣವನ್ನು ಕಳೆದುಕೊಂಡ ಸುಶೀಲ್, ನಂತರ ಸಿನಿಮಾ ನಿರ್ಮಾಣ ಮಾಡುವ ಸಾಹಸಕ್ಕೆ ಮುಂದಾಗುತ್ತಾರೆ. ಆ ಕಾರಣಕ್ಕೆ ಬಿಹಾರದ ತನ್ನ ಮನೆಗೆ ಹಿಂದಿರುಗಿ ಸಿನಿಮಾ ನೋಡಲು ಶುರು ಮಾಡುತ್ತಾನೆ. ಈ ಸಿನಿಮಾ ನೋಡುವ ರೀತಿಯಿಂದ ಬೇಸೆತ್ತ ಆತನ ಪತ್ನಿ ಸರಿಯಾಗಿ ಬಯ್ಯುತ್ತಾಳೆ. ಮೊದಲೇ ಹದಗೆಟ್ಟಿದ್ದ ಸಾಂಸಾರಿಕ ಜೀವನ ಇದೀಗ ಇನ್ನಷ್ಟು ಹಾಳಾಗುತ್ತೆ. ಆತನ ಪತ್ನಿ ಆತನ ಜೊತೆ ಜೀವನ ಮುಂದುವರೆಸಲು ನಿರಾಕರಿಸುತ್ತಾಳೆ. ಇದರಿಂದ ಬೇಸೆತ್ತು ದಾರಿಯಲ್ಲಿ ನಡೆದು ಹೋಗುವಾಗ ಪತ್ರಕರ್ತನೊಬ್ಬ ಸುಶೀಲ್ ಗೆ ಕಾಲ್ ಮಾಡುತ್ತಾನೆ. ಅವರೊಂದಿಗೆ ಸಿಟ್ಟಿನಲ್ಲಿ ಮಾತನಾಡಿದ ಸುಶೀಲ್, ತನ್ನ ಬಳಿ ಇರುವ ಹಣವೆಲ್ಲಾ ಖಾಲಿಯಾಗಿದೆ. ಇದೀಗ ಎರಡು ಹಸುವನ್ನು ಸಾಕಿ ಜೀವನ ಸಾಗಿಸುತ್ತಿದ್ದೇನೆ ಎಂದು ಉತ್ತರಿಸುತ್ತಾನೆ. ಇದನ್ನು ಯಥಾವತ್ತಾಗಿ ಪತ್ರಕರ್ತ ಪ್ರಕಟಿಸುತ್ತಾನೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಬಿಹಾರದ ತುಂಬೆಲ್ಲ ಹರಡುತ್ತದೆ. ಇದಾದ ಬಳಿಕ ಸುಶೀಲ್ ಮಾರ್ಕೇಟ್ ಕಡಿಮೆ ಯಾಗುತ್ತೆ. ಯಾವ ಸಂದರ್ಶನಕ್ಕೂ ಅವನನ್ನು ಕರೆಯುವುದೇ ಇಲ್ಲ.

ಇದೆಲ್ಲದರಿಂದ ಬೇಸೆತ್ತ ಸುಶೀಲ್ ಸಿನಿಮಾ ನಿರ್ಮಾಣವೇ ತನ್ನ ಮುಂದಿನ ಗುರಿ ಎಂದುಕೊಂಡು ಮುಂಬೈಗೆ ಹಾರುತ್ತಾರೆ. ಅಲ್ಲಿ ಕೆಲವರ ಸಹಾಯ ಪಡೆದು ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಾರೆ. ಆದರೆ ಆರು ತಿಂಗಳುಗಳ ಅಲ್ಲಿ ಕೆಲಸ ಮಾಡಿದ ನಂತರ ಬದುಕು ನೀರಸ ಎನಿಸುತ್ತದೆ. ತನ್ನ ತಪ್ಪಿನ ಅರಿವಾಗುತ್ತದೆ. ಪುನಃ ಬಿಹಾರ್ ಗೆ ಬಂದು ಮನಸ್ಸಿನ ಸಂತೋಷಕ್ಕಾಗಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ತನ್ನ ಮೂರ್ಖತನದಿಂದ ಹಣವನ್ನು ಸದುಪಯೋಗ ಪಡಿಸಿಕೊಳ್ಳದೇ ಇರುವುದು ಮಾತ್ರವಲ್ಲದೇ ಜೀವನದ ನೆಮ್ಮದಿಯನ್ನೇ ಕಳೆದುಕೊಂಡಿದ್ದ ಸುಶೀಲ್ ಇದೀಗ ದುಶ್ಚಟಗಳನ್ನೇಲ್ಲಾ ಬಿಟ್ಟು ತಾವು ಮಾಡುವ ಸಣ್ಣ ಪುಟ್ಟ ಕೆಲಸದಲ್ಲಿಯೇ ಸಂತೋಷವನ್ನು ಕಂಡುಕೊಂಡಿದ್ದಾರೆ.

ಹೀಗೆ ತಮ್ಮ ಜೀವನದ ಏಳು ಬೀಳುಗಳ ಬಗ್ಗೆ ದೀರ್ಘವಾಗಿ ಬರೆದುಕೊಂಡಿರುವ ಸುಶೀಲ್ ಕುಮಾರ್ ಹಣ ಬಂದಾಗ ಅದಕ್ಕೆ ದಾಸರಾಗದೆ ತಮ್ಮ ಬುದ್ದಿಯನ್ನು ಉಪಯೋಗಿಸಿ ನೆಮ್ಮದಿಯ ಜೀವನವನ್ನು ಕಂದುಕೊಳ್ಳಬೇಕು ಎಂದು ಇತರರಿಗೆ ತನ್ನ ಜೀವನ ಪಾಠವಾಗಲಿ ಎಂದು ಹೇಳಿಕೊಂಡಿದ್ದಾರೆ.

Comments are closed.