Neer Dose Karnataka
Take a fresh look at your lifestyle.

ಕುಟುಂಬದಲ್ಲಿ ನಡೆದ ಆ ಒಂದು ವಿಚಾರವಾಗಿ ಸಂಪೂರ್ಣವಾಗಿ ಅತ್ತಿಗೆ ಗೀತಕ್ಕ ರವರ ಪರ ನಿಂತಿದ್ದ ಅಪ್ಪು, ಇದಪ್ಪ ದೊಡ್ಮನೆ ಹುಡುಗ ಅಂದ್ರೆ. ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಒಂದು ತಿಂಗಳು ಪೂರ್ತಿಯಾಗಿದೆ. ಇಂದಿಗೂ ಕೂಡ ಆ ಮನುಷ್ಯನ ಒಳ್ಳೆಯ ಗುಣಗಳನ್ನು ನೆನೆದರೆ ನಮಗೆ ದೇವರ ಮೇಲೆ ಕೋಪ ಮೂಡುವುದು ಗ್ಯಾರಂಟಿ. ಸಮಾಜಕ್ಕೆ ಎಷ್ಟು ಒಳ್ಳೆಯದನ್ನು ಬಯಸಿದ್ದರೋ ಅಷ್ಟೇ ಒಳ್ಳೆಯದನ್ನು ತಮ್ಮ ಕುಟುಂಬಕ್ಕೂ ಕೂಡ ಬಯಸಿದಂತಹ ಬಂಗಾರದ ಮನಸ್ಸಿನ ವ್ಯಕ್ತಿತ್ವ.

ಆದರೆ ಅವರನ್ನು ಇಂದು ಕಳೆದುಕೊಂಡಿರುವುದು ಖಂಡಿತವಾಗಿಯೂ ದೇವರು ನಮಗೆ ಎಸಗಿರುವ ಅಂತಹ ಅನ್ಯಾಯ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇನ್ನು ನಿಮಗೆಲ್ಲರಿಗೂ ಗೊತ್ತಿರುವಂತೆ ರಾಜಕುಮಾರ್ ಕುಟುಂಬದ ಮುಖ್ಯ ಶಕ್ತಿಯಾಗಿ ನಿಂತಿದ್ದು ಅಣ್ಣಾವ್ರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ರವರು. ಇನ್ನು ಅವರು ಪೂರ್ಣಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಹಲವಾರು ಚಿತ್ರಗಳನ್ನು ಕೂಡ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇನ್ನು ಮೈಸೂರಿನಲ್ಲಿ ಶಕ್ತಿಧಾಮ ಎನ್ನುವ ಹೆಸರಿನಲ್ಲಿ ಅನಾಥ ಹೆಣ್ಣುಮಕ್ಕಳಿಗೆ ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಾರಿದವರು.

ಶಕ್ತಿಧಾಮ ಸಂಸ್ಥೆಯ ಮೂಲಕ ಅದೆಷ್ಟೋ ಹೆಣ್ಣುಮಕ್ಕಳು ಈಗ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಗಂಡು ಮಕ್ಕಳಿಗಾದರೆ ಅನಾಥಾಶ್ರಮಗಳು ಇರುತ್ತವೆ ಆದರೆ ಹೆಣ್ಣುಮಕ್ಕಳಿಗೆ ಅನಾಥ ಆಶ್ರಮಗಳು ಇರುವುದಿಲ್ಲ. ಈ ದೃಷ್ಟಿಯಲ್ಲಿಯೇ ಪಾರ್ವತಮ್ಮ ರಾಜಕುಮಾರ್ ಅವರು ಶಕ್ತಿಧಾಮ ಅನಾಥಾಶ್ರಮ ವನ್ನು ಕಟ್ಟಿ ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಜೀವನವನ್ನು ನಡೆಸುವಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಪಾರ್ವತಮ್ಮ ರಾಜಕುಮಾರ್ ಅವರು ನಾಲ್ಕು ವರ್ಷಗಳ ಹಿಂದೆಯಷ್ಟೇ ನಮ್ಮನ್ನೆಲ್ಲಾ ಅಗಲಿ ಇಹಲೋಕಕ್ಕೆ ವಿದಾಯ ಹೇಳಿ ಹೋಗಿದ್ದಾರೆ.

ಇನ್ನು ಪಾರ್ವತಮ್ಮ ರಾಜಕುಮಾರ್ ಅವರು ಎಲ್ಲರನ್ನೂ ಆಗಲಿ ಹೋದಾಗ ದೊಡ್ಡ ಮನೆಯವರು ಒಟ್ಟಿಗೆ ಕುಳಿತುಕೊಂಡು ಶಕ್ತಿದಾಮ ಸಂಸ್ಥೆಯನ್ನು ಇನ್ನುಮುಂದೆ ಯಾರು ನಡೆಸಿಕೊಂಡು ಹೋಗಬೇಕು ಎಂಬುದಾಗಿ ಚರ್ಚೆಗೆ ಉಳಿದುಕೊಳ್ಳುತ್ತಾರೆ. ಈ ಚರ್ಚೆಯಲ್ಲಿ ದೊಡ್ಮನೆ ಸದಸ್ಯರೆಲ್ಲರೂ ಕೂಡ ಭಾಗವಹಿಸಿದ್ದರು. ಪಾರ್ವತಮ್ಮ ರಾಜಕುಮಾರ್ ಅವರೊಂದಿಗೆ ಹೆಚ್ಚಿನ ಕಾಲ ಕಳೆದಿದ್ದು ಅವರ ಕಿರಿಯ ಮಗ ಪುನೀತ್ ರಾಜಕುಮಾರ್ ಅವರು.

ಹೀಗಾಗಿ ತಾಯಿಯ ಎಲ್ಲಾ ಗುಣಗಳನ್ನು ಹಾಗೂ ನಡೆಗಳನ್ನು ಅರಿತಿದ್ದ ಪುನೀತ್ ರಾಜಕುಮಾರ್ ರವರು ಇದಕ್ಕೆ ಅತ್ತಿಗೆ ಗೀತಕ್ಕನ ಅವರೇ ಸರಿಯಾದ ವ್ಯಕ್ತಿ ಎಂಬುದಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಹೀಗಾಗಿ ಎಲ್ಲರೂ ಒಮ್ಮತದಿಂದ ಗೀತಕ್ಕನ ಅವರನ್ನು ಈ ಜವಾಬ್ದಾರಿಗೆ ಆಯ್ಕೆ ಮಾಡುತ್ತಾರೆ. ಇನ್ನು ಗೀತಕ್ಕ ನವರು ಕೂಡ ವಾರಕ್ಕೊಮ್ಮೆ ಬಂದು ಹೋಗುವುದನ್ನು ಮಾಡುತ್ತಿರುತ್ತಾರೆ. ಇನ್ನು ಪುನೀತ್ ರಾಜಕುಮಾರ್ ರವರು ಕೇವಲ ಗೀತಕ್ಕ ಅವರ ಹೆಸರನ್ನು ಸೂಚಿಸುವುದು ಮಾತ್ರವಲ್ಲದೆ ಅವರ ಬೆಂಬಲವಾಗಿ ಕೂಡ ನಿಲ್ಲುತ್ತಾರೆ.

ಶಕ್ತಿ ಧಾಮಕ್ಕೆ ಬೇಕಾಗಿರುವಂತಹ ಎಲ್ಲಾ ನೆರವುಗಳನ್ನು ಮತ್ತು ಕಿರುತೆರೆಯ ರಿಯಾಲಿಟಿ ಶೋಗಳಿಂದ ಬಂದಂತಹ ಹಣವನ್ನು ಕೂಡ ಶಕ್ತಿದಾಮದ ಹೆಸರಿಗೆ ನೀಡಿರುತ್ತಾರೆ. ಇನ್ನು ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲಾ ಅಗಲಿ ಹೋದ ನಂತರ ಶಕ್ತಿಧಾಮ ನಮಗೆ ಹಲವಾರು ಜನರು ಧಾವಿಸಿ ಬಂದಿದ್ದಾರೆ. ಅದರಲ್ಲಿ ತಮಿಳು ನಟ ವಿಶಾಲ್ ಕೂಡ ಒಬ್ಬರು. ಹೀಗಾಗಿ ಶಕ್ತಿ ಧಾಮದ ಟ್ರಸ್ಟಿಗಳ ಜೊತೆಗೆ ಸೇರಿ ಯಾರ ಹಣವೂ ಕೂಡ ದುರ್ಬಳಕೆ ಆಗಬಾರದೆಂಬ ನಿರ್ಣಯವನ್ನು ಶಿವಣ್ಣ ಹಾಗೂ ಕೆಲವು ಟ್ರಸ್ಟಿಗಳ ಮೂಲಕ ತೆಗೆದುಕೊಳ್ಳಲಾಗುತ್ತಿದೆ.

Comments are closed.