Neer Dose Karnataka
Take a fresh look at your lifestyle.

ಕಂಠೀರವ ಸ್ಟುಡಿಯೋ ಯಾರಿಗೆ ಸೇರಿದ್ದು?? ದೊಡ್ಮನೆ ಕುಟುಂಬದವರನ್ನು ಇಲ್ಲೇಕೆ ಸಮಾಧಿ ಮಾಡುತ್ತಾರೆ ಗೊತ್ತೇ?? ಟೀಕೆ ಮಾಡುವ ಮುನ್ನ ಸತ್ಯ ತಿಳಿಯಿರಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ರಾಜ್ ಕುಟುಂಬದ ಮೂವರು ಸದಸ್ಯರನ್ನು ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಲಾಗಿದೆ. ಹಾಗಿದ್ದರೆ ಇದು ಅಣ್ಣಾವ್ರ ಫ್ಯಾಮಿಲಿಯ ಆಸ್ತಿನಾ ಅಥವಾ ಇದು ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದ್ಭವವಾಗಿದೆ. ಇಂದಿನ ವಿಚಾರದಲ್ಲಿ ಅನುಮಾನಗಳನ್ನು ನಾವು ನಿಮಗೆ ಪರಿಹರಿಸಲು ಸಿದ್ಧರಾಗಿದ್ದೇವೆ. ಹೌದು ಗೆಳೆಯರೇ ಕಂಠೀರವ ಸ್ಟುಡಿಯೋ ಎನ್ನುವುದು 7% ಕನ್ನಡ ಚಿತ್ರರಂಗಕ್ಕೆ ಸೇರಿದ್ದಾಗಿದೆ 93% ಕರ್ನಾಟಕ ಸರ್ಕಾರಕ್ಕೆ ಸೇರಿದ್ದಾಗಿದೆ.

ಇನ್ನು ಅಣ್ಣಾವ್ರ ಸಮಾಧಿಯನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡುವುದಕ್ಕೆ ಕೂಡಾ ಕಾರಣವಿದೆ. 2006 ರಲ್ಲಿ ಅಣ್ಣಾವ್ರು ನಿಧನರಾದಾಗ ಇಡೀ ಕರ್ನಾಟಕಕ್ಕೆ ಕರಿನೆರಳು ಆವರಿಸಿದಂತಿತ್ತು. ಆಗ ಅವರನ್ನು ಗಾಜನೂರಿನಲ್ಲಿ ಅಥವಾ ಅವರ ನೆಚ್ಚಿನ ರಾಮನಗರದ ಫಾರ್ಮ್ ಹೌಸ್ ನಲ್ಲಿ ಸಮಾಧಿ ಮಾಡುವ ಚರ್ಚೆಗಳು ನಡೆದಿದ್ದವು. ಆದರೆ ಅಣ್ಣಾವ್ರು ಕನ್ನಡಿಗರ ಆಸ್ತಿ ಆಗಿದ್ದರು ಹೀಗಾಗಿ ಅವರ ಸಮಾಧಿ ಎನ್ನುವುದು ಸಾರ್ವಜನಿಕ ದರ್ಶನಕ್ಕೆ ಅನುಕೂಲವಾಗಿರುವಂತೆ ಇರಬೇಕೆಂಬುದು ಆಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ನಿರ್ಧರಿಸಿತು. ಹೀಗಾಗಿ ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿಯನ್ನು ಮಾಡಲಾಯಿತು. ಅಣ್ಣಾವ್ರ ಸಮಾಧಿಯ ನಂತರ ಬಿಕೋ ಎನ್ನುತ್ತಿದ್ದ ಕಂಠೀರವ ಸ್ಟುಡಿಯೋ ಎನ್ನುವುದು ಜನರಿಂದ ತುಂಬಿ ತುಳುಕಾಡುವಂತೆ ಆಯಿತು.

ಇನ್ನು ಇದ್ದಾರಂತ ಪಾರ್ವತಮ್ಮ ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕೂಡ ಇದೇ ಮಾದರಿಯಾಗಿ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಲಾಯಿತು. ರಾಜ್ ಕುಟುಂಬದ ಮೂವರನ್ನು ಕೂಡ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಲು ಮುಖ್ಯ ಕಾರಣವೆಂದರೆ ಅವರು ಕನ್ನಡಿಗರ ಆಸ್ತಿಯಾಗಿದ್ದು ಸಾರ್ವಜನಿಕರ ದರ್ಶನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಲಾಯಿತು. ಇನ್ನು ಕೇವಲ ಇಷ್ಟು ಜನ ಮಾತ್ರವಲ್ಲದೆ ರೆಬಲ್ ಸ್ಟಾರ್ ಅಂಬರೀಶ್ ರವರನ್ನು ಕೂಡಾ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಲಾಗಿದೆ. ಹೀಗಾಗಿ ಕಂಠೀರವ ಸ್ಟುಡಿಯೋ ಎನ್ನುವುದು ಯಾರ ಆಸ್ತಿಯೂ ಅಲ್ಲ. ಬದಲಾಗಿ ಕನ್ನಡದ ಆಸ್ತಿ ಎಂದು ಅನಿಸಿಕೊಂಡಿರುವ ಮಹಾಶಯರನ್ನು ಇಲ್ಲಿ ಸಮಾಧಿ ಮಾಡಲಾಗಿದೆ ಅಷ್ಟೇ.

Comments are closed.