Neer Dose Karnataka
Take a fresh look at your lifestyle.

ಟಿವಿ ಅಲ್ಲಿ ಭಾಷಣ ಮಾಡುವುದು ದೊಡ್ಡದಲ್ಲ ಎಂದು ಬಾರಿ ಟ್ರೊಲ್ ಆದ ರಂಗಣ್ಣ, ಮಾಡಿಕೊಂಡ ದೊಡ್ಡ ಎಡವಟ್ಟು ಏನು ಗೊತ್ತೇ??

8

ನಮಸ್ಕಾರ ಸ್ನೇಹಿತರೇ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರು ಕೂಡ ಪಬ್ಲಿಕ್ ಟಿವಿ ರಂಗಣ್ಣನವರ ಕುರಿತಂತೆ ಗೊತ್ತೇ ಇರುತ್ತದೆ. ತಮ್ಮ ವಿಭಿನ್ನ ಶೈಲಿಯ ವಾರ್ತಾವಾಚನೆ ಯಿಂದಾಗಿ ಎಲ್ಲರ ಮನಗೆದ್ದಂತಹ ರಂಗಣ್ಣನವರು ಈಗಾಗಲೇ ಕರ್ನಾಟಕ ರಾಜ್ಯದಾದ್ಯಂತ ಎಲ್ಲರಿಗೂ ಕೂಡ ಚಿರಪರಿಚಿತರು. ಇನ್ನು ರಂಗಣ್ಣನವರು ಪಬ್ಲಿಕ್ ಟಿವಿಯನ್ನು ಕಟ್ಟುವುದಕ್ಕಾಗಿ ಕೂಡ ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂಬುದನ್ನು ನಾವು ಅವರ ವೀಕೆಂಡ್ ವಿತ್ ರಮೇಶ್ ಸಂಚಿಕೆಯಲ್ಲಿ ನೋಡಿದ್ದೇವೆ.

ಕೆಲಸ ಮಾಡುತ್ತಿದ್ದ ಸುದ್ದಿ ವಾಹಿನಿ ಸಂಸ್ಥೆಯಿಂದ ಹೊರಬಂದು ತಾವೇ ಕಷ್ಟಪಟ್ಟು ಪಬ್ಲಿಕ್ ಟಿವಿಯನ್ನು ಕಟ್ಟಿ ಯುವಜನತೆಗೆ ಮಾದರಿಯಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ರಂಗಣ್ಣನವರು ತಮ್ಮ ಮಗಳ ಮದುವೆಯನ್ನು ನವೆಂಬರ್ 21ರಂದು ಮಾಡಿದ್ದರು. ಪ್ರತಿಯೊಬ್ಬರಿಗೂ ಕೂಡ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಇದೇ ರೀತಿಯಲ್ಲಿ ತಮ್ಮ ಮಗಳ ಮದುವೆಯನ್ನು ಕೂಡ ಪಬ್ಲಿಕ್ ಟಿವಿ ರಂಗಣ್ಣ ಅದ್ದೂರಿಯಾಗಿ ಮಾಡಿ ಮುಗಿಸಿದ್ದರು. ಈ ಸಮಾರಂಭಕ್ಕೆ ಹಲವಾರು ಕ್ಷೇತ್ರದ ಗಣ್ಯಾತಿಗಣ್ಯರು ಆಗಮಿಸಿ ವಧು ವರರಿಗೆ ಆಶೀರ್ವಾದ ಮಾಡಿದ್ದರು. ಆದರೆ ಈ ಸಮಯದಲ್ಲಿ ಒಂದು ಎಡವಟ್ಟನ್ನು ಕೂಡ ರಂಗಣ್ಣನವರು ಮಾಡಿಕೊಂಡಿದ್ದಾರೆ.

ಅದೇನೆಂದರೆ ಇತ್ತೀಚಿಗಷ್ಟೇ ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಅದ್ದೂರಿಯಾಗಿ ನೆರವೇರಿಸಿದ್ದಾರೆ ನಮ್ಮ ರಂಗಣ್ಣನವರು. ಈ ಸಂದರ್ಭದಲ್ಲಿ ಹೊಸ ತಳಿಯ ಮಹಾಮಾರಿ ರಾಜ್ಯಕ್ಕೆ ವಕ್ಕರಿಸಿರುವುದರಿಂದಾಗಿ ಕೆಲವು ನಿಯಮಾವಳಿಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು ರಂಗಣ್ಣನವರ ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ಇದ್ಯಾವುದರ ಪಾಲನೆ ಕೂಡ ಆಗಿರಲಿಲ್ಲ. ಯಾರು ಕೂಡ ಮಾಸ್ ಹಾಕಿಕೊಂಡಿರಲಿಲ್ಲ ಸೋಶಿಯಲ್ ಡಿಸ್ಟೆನ್ಸ್ ಮಾಡಿರಲಿಲ್ಲ. ಇದಕ್ಕೆ ಈಗ ರಂಗಣ್ಣನವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕಾಪ್ರಹಾರ ಗಳು ಪ್ರಾರಂಭವಾಗಿದೆ. ಎಲ್ಲರಿಗೂ ಬುದ್ಧಿ ಹೇಳಬೇಕಾದ ರಂಗಣ್ಣನ ಹೇಗೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ.

Leave A Reply

Your email address will not be published.