Neer Dose Karnataka
Take a fresh look at your lifestyle.

ಕಿರುತೆರೆಯ ಟಾಪ್ ನಟಿಯನ್ನು ತಮ್ಮ ಸಿನೆಮಾಗೆ ನಟಿಯಾಗಿ ಆಯ್ಕೆ ಮಾಡಿ ಶಿವಣ್ಣ. ಯಶಸ್ಸಿನ ಮೆಟ್ಟಿಲು ಹತ್ತಿದ ನಟಿ ಯಾರು ಗೊತ್ತೇ??

9

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟರಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣನವರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂದಿಗೂ ಕೂಡ ಅದೇ ಎನರ್ಜಿ ಹಾಗೂ ನಟನೆಯ ಮೂಲಕ ಟಾಪ್ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶಿವಣ್ಣ ನಟನೆಯ 125ನೇ ಚಿತ್ರವಾಗಿರುವ ವೇದ ಚಿತ್ರದ ಚಿತ್ರೀಕರಣ ಗಳು ಅತಿಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಈ ಚಿತ್ರವನ್ನು ಸ್ವತಃ ಶಿವಣ್ಣನವರ ಪತ್ನಿ ಆಗಿರುವ ಗೀತಕ್ಕ ನವರೇ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಚಿತ್ರವನ್ನು ಭಜರಂಗಿ ಸರಣಿ ಚಿತ್ರಗಳ ನಿರ್ದೇಶಕ ನಾಗಿರುವ ಹರ್ಷರವರೇ ನಿರ್ದೇಶನ ಮಾಡಲಿದ್ದು ಚಿತ್ರದ ಕುರಿತಂತೆ ಪ್ರೇಕ್ಷಕರಲ್ಲಿ ದೊಡ್ಡಮಟ್ಟದ ಕುತೂಹಲವಿದೆ. ಯಾಕೆಂದರೆ ಚಿತ್ರದಲ್ಲಿ ಶಿವಣ್ಣನವರು ಹಿಂದೆಂದೂ ಕಾಣದಂತಹ ವಿಭಿನ್ನ ಗೆಟಪ್ ಹಾಗು ಪಾತ್ರದಲ್ಲಿ ಕಾಣಿಸಿಕೊಳ್ಳಲು ಗತಕಾಲದ ಇತಿಹಾಸವನ್ನು ಮೆಲಕುಹಾಕುವ ಕಥೆಯನ್ನು ಈ ಚಿತ್ರ ಹೊಂದಿರಲಿದೆ ಎಂಬುದಾಗಿ ಮೇಲ್ನೋಟದಲ್ಲಿ ಕಾಣುತ್ತಿದೆ. ಇನ್ನು ಈ ಚಿತ್ರಕ್ಕೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತಂತೆ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿತ್ತು ಅದಕ್ಕೂ ಕೂಡ ಈಗಾಗಲೇ ಉತ್ತರ ಸಿಕ್ಕಿದೆ.

ಟಿ ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಗಾನವಿ ಲಕ್ಷ್ಮಣ ರವರು ಶಿವಣ್ಣನವರ ವೇದ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಗಾನವಿ ಅವರು ಈಗಾಗಲೇ ರಿಷಬ್ ಶೆಟ್ಟಿ ನಟನೆಯ ಹೀರೋ ಚಿತ್ರದಲ್ಲಿ ಕೂಡ ನಾಯಕಿಯಾಗಿ ಪಾದಾರ್ಪಣೆ ಮಾಡುವ ಮೂಲಕ ಸಿನಿಮಾರಂಗದಲ್ಲಿ ಭರವಸೆಯ ನಟಿಯಾಗಿ ಕಾಣಿಸಿಕೊಳ್ಳಬಲ್ಲ ಎಂಬ ಭರವಸೆಯನ್ನು ಮೂಡಿಸಿದ್ದರು. ಇನ್ನು ಎರಡನೇ ಚಿತ್ರದಲ್ಲೇ ಕರುನಾಡ ಚಕ್ರವರ್ತಿ ಶಿವಣ್ಣನವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ಗಾನವಿ ಲಕ್ಷ್ಮಣ ರವರು ಕನ್ನಡ ಚಿತ್ರರಂಗದಲ್ಲಿ ಮುಂದೊಂದು ದಿನ ಉದಯೋನ್ಮುಖ ನಟಿಯಾಗಿ ಬೆಳೆಯುವ ನಿರೀಕ್ಷೆಯಿದೆ.

Leave A Reply

Your email address will not be published.