Neer Dose Karnataka
Take a fresh look at your lifestyle.

ಪ್ರತಿ ಬಾರಿಯೂ ತಾಳಲಾರದ ಹೆಂಗಸರ ಮುಟ್ಟಿನ ಸಮಯದ ಹೊಟ್ಟೆನೋವಿಗೆ ಇಲ್ಲಿದೆ ನೋಡಿ ಅದ್ಭುತ ಮನೆಮದ್ದು, ಏನು ಮಾಡ್ಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇದನ್ನು ದುರ್ಭಾಗ್ಯ ಅನ್ನಬೇಕೋ, ಪ್ರಕೃತಿಯ ವಿಸ್ಮಯ ಅನ್ನಬೇಕೋ ಗೊತ್ತಿಲ್ಲ, ಆದರೆ ಈ ಸಮಯದಲ್ಲಿ ಕೆಲವು ಮಹಿಳೆಯರು ಅನುಭವಿಸುವ ಸಂಕಟ ಮಾತ್ರ ಹೇಳಲಾಗದಷ್ಟು. ಹೌದು ಅದುವೇ ಋತುಚಕ್ರ ಅಥವಾ ಮುಟ್ಟಿನ ಸಮಯ. ತಿಂಗಳಿಗೊಮ್ಮೆ ಮುಟ್ಟಿನ ಸಮಯದಲ್ಲಿ ಹಲವು ಮಹಿಳೆಯರು ಸಾಕಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ಕೆಲವರು ಋತುಚಕ್ರದ ಸಮಯದಲ್ಲಿ ನಾರ್ಮಲ್ ಆಗಿದ್ದರೆ ಇನ್ನೂ ಕೆಲವರು ಅಧಿಕ ರಕ್ತಸ್ರಾವ, ಹೊಟ್ಟೆನೋವು, ವಾಂತಿ, ತಲೆನೋವು ಮೊದಲಾದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದಕ್ಕೆಲ್ಲ ಔಷಧವನ್ನೂ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ಮನೆಮದ್ದುಗಳು ಸ್ವಲ್ಪ ಮಟ್ಟಿಗೆ ಈ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ.

ಸದಾಪುಷ್ಪ ಅಥವಾ ನಿತ್ಯ ಕಲ್ಯಾಣಿ ಎನ್ನುವ ಗಿಡದ ಬಗ್ಗೆ ನೀವು ಕೇಳಿರಬಹುದು. ಇದರಲ್ಲಿಇರುವ ಔಷಧೀಯ ಗುಣಗಳನ್ನು ಕೇಳಿದರೆ ನೀವು ನಿಜಕ್ಕೂ ಬೆರಗಾಗುತ್ತೀರಿ. ಹೌದು, ಹಳ್ಳಿಗಳಲ್ಲಿ ಸಾಮಾನ್ಯವಾಗಿ ಎಲ್ಲಾಕಡೆ ಇರುವ ಈ ಪುಟ್ಟ ಗಿಡ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಮುಟ್ಟಿನ ನೋವನ್ನು ನಿವಾರಣೆ ಮಾಡುವ ಒಂದು ಅದ್ಭುತ ಗಿಡ ಇದು. ಸದಾ ಪುಷ್ಪದ ಚೂರ್ಣವನ್ನು ಮಾಡಿ ಸೇವಿಸಿದರೆ ಮುಟ್ಟಿನ ನೋವು ಮರೆಯಾಗುತ್ತದೆ. ಹಾಗಾದರೆ ಬನ್ನಿ ಈ ಮನೆ ಮದ್ದನ್ನು ತಯಾರಿಸುವುದು ಹೇಗೆ ನೋಡೋಣ.

ಮೊದಲಿಗೆ ಸದಾಪುಷ್ಪ ಗಿಡವನ್ನು ಬುಡಸಮೇತ ಕಿತ್ತು ತಂದು ಒಣಗಿಸಬೇಕು. ಒಣಗಿದ ಗಿಡವನ್ನು ಮುಕ್ಸರ್ ನಲ್ಲಿ ಹಾಕಿ ಪುಡಿಮಾಡಿ ಇಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಈ ಪುಡಿಯನ್ನು ಹಾಕಬೇಕು. ನಂತರ ನೀರು ಕುದಿದು ಅರ್ಧದಷ್ಟು ಆಗುವವರೆಗೆ ಕುದಿಸಬೇಕು. ಈ ನೀರನ್ನು ಸೋಸಿ ಸ್ವಲ್ಪ ಉಗುರು ಬೆಚ್ಚಗೆ ಆಗುವಷ್ಟು ಆರಿದ ಮೇಲೆ ಅದಕ್ಕೆ ಜೇನುತುಪ್ಪ ಅಥವಾ ಕಲ್ಲುಸಕ್ಕರೆ ಹಾಕಿಕೊಂಡು ಕುಡಿಯಿರಿ. ದಿನವೂ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಋತುಚಕ್ರದ ನೋವು ನಿವಾರಣೆಯಾಗುತ್ತದೆ.

Comments are closed.