Neer Dose Karnataka
Take a fresh look at your lifestyle.

ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಸಮಯ ಜೀವನ ಕಳೆಯಲು ಕಾರಣವೇನು ಗೊತ್ತೇ??

ಈ ಭೂಮಂಡಲದಲ್ಲಿ ಸಾಕಷ್ಟು ಜೀವರಾಶಿಗಳಿವೆ. ಹುಟ್ಟಿದ ಪ್ರತಿಯೊಂದು ಜೀವವು ಮುಕ್ತಿ ಪಡೆಯಲೇಬೇಕು. ಆ ಭಗವಂತನು ಎಲ್ಲಾ ಜೀವಿಗಳಿಗೂ, ಇಷ್ಟಿಷ್ಟು ಆಯಸ್ಸು ಎಂದು ತೀರ್ಮಾನ ಮಾಡಿದ್ದಾರೆ. ಕೆಲವೊಮ್ಮೆ ಆ ಆಯಸ್ಸಿನಲ್ಲಿ ಹೆಚ್ಚು ಕಮ್ಮಿ ಆಗಬಹುದು. ಪ್ರತಿ ಪ್ರಾಣಿ, ಮನುಷ್ಯ ಎಲ್ಲರಿಗೂ ಇಂತಿಷ್ಟು ಆಯಸ್ಸು ಎಂದು ಇದ್ದೇ ಇರುತ್ತದೆ. ಮನುಷ್ಯರಲ್ಲಿ ಮೊದಲೆಲ್ಲಾ, 100 ವರ್ಷಕ್ಕಿಂತ ಹೆಚ್ಚಿನ ಸಮಯ ಬದುಕುತ್ತಿದ್ದರು, ಆದರೆ ಈಗ ಮನುಷ್ಯನ ಆಯಸ್ಸು ಅದಕ್ಕಿಂತ ಕಡಿಮೆಯೇ.

ಮನುಷ್ಯನ ಆಯಸ್ಸು ಕಡಿಮೆಯಾಗಲು ಸೃಷ್ಟಿಯಲ್ಲಿ ಸಾಕಷ್ಟು ಕಾರಣಗಳಿವೆ. ಆದರೆ ಮನುಷ್ಯ ಮುಕ್ತಿ ಪಡೆಯಲು ಕೆಲವೊಮ್ಮೆ ದೇವರು ಕೊಟ್ಟಿರುವ ಆಯಸ್ಸು ಪೂರ್ತಿಯಾಗುವುದಿಲ್ಲ.
ಬದಲಾಗಿ ನುಷ್ಯನು ಅನಾರೋಗ್ಯಕ್ಕೆ ಗುರಿಯಾಗಬಹುದು, ಅಪಘಾತಕ್ಕೆ ತುತ್ತಾಗಬಹುದು. ಹೀಗೆ ಸಾಕಷ್ಟು ರೀತಿಗಳಲ್ಲಿ ಆಯಸ್ಸು ಪೂರ್ತಿಯಾಗುವ ಮೊದಲೇ ಮನುಷ್ಯನ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ. ಮನುಷ್ಯರಲ್ಲಿ ಹೆಚ್ಚಿನ ಕಾಲ ಬದುಕುವವರು ಹೆಣ್ಣುಮಕ್ಕಳಾ ಅಥವಾ ಗಂಡಸರಾ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಅದಕ್ಕೆ ಉತ್ತರವಾಗಿ, ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚಿನ ಕಾಲ ಬದುಕುತ್ತಾರೆ ಎನ್ನುವ ವಿಚಾರ ಈಗ ತಿಳಿದುಬಂದಿದೆ. ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ, ಜನಸಂಖ್ಯಾ ವಿಭಾಗದ ಪ್ರಾಧ್ಯಾಪಕರೊಬ್ಬರು ವರ್ಜಿನಿಯಾದಲ್ಲಿ ನಡೆಯಿಸಿರುವ ಅಧ್ಯಯನದ ಪ್ರಕಾರ, ಮಹಿಳೆಯರು ಹೆಚ್ಚು ಬದುಕುತ್ತಾರೆ ಎಂದು ತಿಳಿದುಬಂದಿದೆ. ಅಧ್ಯಯನದ ಪ್ರಕಾರ ಹೆಣ್ಣುಮಕ್ಕಳು ಯಾಕೆ ಹೆಚ್ಚಿನ ಕಾಲ ಬದುಕುತ್ತಾರೆ ಎನ್ನುವುದಕ್ಕೆ ಎರಡು ಕಾರಣಗಳನ್ನು ಸಹ ನೀಡಿದ್ದಾರೆ.

ಮೊದಲ ಕಾರಣ ಏನೆಂದರೆ, ಮಹಿಳೆಯರಲ್ಲಿ ಇಸ್ಟ್ರೋಜಿನ್ ಹಾರ್ಮೋನ್ ಹೆಚ್ಚಾಗಿ ಮತ್ತು ಟೆಸ್ಟೋಸ್ಟಿರೋನ್ ಹಾರ್ಮೋನ್ ಕಡಿಮೆ ಉತ್ಪತ್ತಿಯಾಗುತ್ತದೆ.. ಈ ಹಾರ್ಮೋನ್ ಗಳು, ಮಹಿಳೆಯರಿಗೆ ಹೃದಯ ಸಂಬಂಧಿ ಖಾಯಿಲೆಗಳು ಮತ್ತು ಇನ್ನಿತರ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ತಡೆಗಟ್ಟುತ್ತದೆ. ಮಹಿಳೆಯರ ಆಯಸ್ಸು ಹೆಚ್ಚಾಗಿರಲು ಇದೊಂದು ಮುಖ್ಯ ಕಾರಣವಾಗಿದೆ.

ಮತ್ತೊಂದು ವಿಚಾರ ಏನೆಂದರೆ, ಮಹಿಳೆಯರು ಪಕೃತಿಯಿಂದ ಒಂದು ವಿಶೇಷವಾದ ವರವನ್ನು ಪಡೆದುಕೊಂಡು ಬಂದಿದ್ದಾರೆ ಎಂದು ವರದಿಯ ಪ್ರಕಾರ ತಿಳಿದುಬಂದಿದೆ. ಈ ಕಾರಣದಿಂದಾಗಿ ಕೂಡ ಮಹಿಳೆಯರು ಪುರುಷರಿಗಿಂತ ಹೆಚ್ಚು ಆಯುಷ್ಯ ಪಡೆದಿದ್ದಾರೆ. ಮತ್ತೊಂದು ಪ್ರಮುಖ ಕಾರಣದ ಬಗ್ಗೆ ಹೇಳುವುದಾದರೆ, ಮಹಿಳೆಯರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ.

ಪುರುಷರು ಪ್ರತಿದಿನ, ತಾವು ಮಾಡುವ ಕೆಲಸಗಳು, ಅದರಲ್ಲಿನ ಜಂಜಾಟಗಳ ಕಾರಣ ಪುರುಷರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ. ಮಹಿಳೆಯರು ಆರೋಗ್ಯಕರವಾದ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯದಲ್ಲಿ ಸಮತೋಲನ ಕಾಪಡಿಕೊಂಡಿರುತ್ತಾರೆ. ಮಹಿಳೆಯರಲ್ಲಿ ಶೇ.33 ರಷ್ಟು ಮಾತ್ರ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಆಸ್ಪತ್ರೆಗೆ ಹೋಗುವ ಪುರುಷರ ಸಂಖ್ಯೆ ಅದಕ್ಕಿಂತ ಕಡಿಮೆ ಎನ್ನಲಾಗಿದೆ.

Comments are closed.