Neer Dose Karnataka
Take a fresh look at your lifestyle.

ದೇವರ ಫೋಟೋ ಇಡುವ ಜಾಗ ಅಥವಾ ದೇವರ ಕೋಣೆಯಲ್ಲಿ ಯಾವ ವಸ್ತು ಇಡಬೇಕು, ಯಾವುದನ್ನೂ ಇಡಬಾರದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ವಾಸ್ತು ಶಾಸ್ತ್ರವನ್ನು ನೀವು ನಂಬುವುದಾದರೆ ಅದರಲ್ಲಿ ಹೇಳುವ ಸಾಕಷ್ಟು ಅಂಶಗಳನ್ನು ಮನೆಯಲ್ಲಿ ಅಳವಡಿಸಿಕೊಂಡರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆರ್ಥಿಕ ಅಭಿವೃದ್ಧಿಯಾಗುವುದು ಖಂಡಿತ. ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ದೇವರ ಕೋಣೆ ಇರಬೇಕು ಯಾವ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು ಅಥವಾ ಶೌಚಾಲಯಗಳು ಇರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ಸಮಾಜಮುಖಿ ಹೊಸಮನೆಯನ್ನು ಕಟ್ಟುವವರು ವಾಸ್ತುಶಾಸ್ತ್ರದ ಪ್ರಕಾರವೇ ಮನೆಯನ್ನು ಕಟ್ಟುತ್ತಾರೆ. ವಾಸ್ತುಗೆ ವಿರುದ್ಧವಾಗಿ ಕೆಲವು ವಿಷಯಗಳು ಮನೆಯಲ್ಲಿ ಇದ್ದಲ್ಲಿ ಆ ಮನೆಯಲ್ಲಿ ಅನಾರೋಗ್ಯ ಸುಖ ಶಾಂತಿಗೆ ಭಂಗ ಇಂತಹ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ದೇವರ ಮನೆ ಎಲ್ಲಿ ಇಡಬೇಕು? ದೇವರ ಮನೆ ಹೇಗಿರಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಹಲವಾರು ಅಂಶಗಳನ್ನು ಹೇಳಲಾಗಿದೆ.

ಮನೆಯಲ್ಲಿ ದೇವರ ಕೋಣೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ ಹಾಗಾಗಿ ದೇವರಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ವಾಸ್ತುಶಾಸ್ತ್ರದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಮನೆ ಚಿಕ್ಕದಾಗಿದ್ದರೂ ದೇವರ ಮನೆಯನ್ನು ಸ್ಟೋ ರೂಂ ಮಾಡುವವರು ಸಾಕಷ್ಟು ಜನರಿದ್ದಾರೆ. ಆದರೆ ಇದು ತಪ್ಪು. ದೇವರು ಕೋಣೆಯಲ್ಲಿ ಪೂಜಾ ಸಾಮಗ್ರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ವಸ್ತುಗಳನ್ನು ತುಂಬಿಸುವುದು ಒಳ್ಳೆಯದಲ್ಲ.

ಇನ್ನು ದೇವರ ಮನೆಯನ್ನು ಆದಷ್ಟು ಸ್ವಚ್ಛವಾಗಿ, ಶುಭ್ರವಾಗಿ ಇಟ್ಟುಕೊಳ್ಳಬೇಕು. ದೇವರ ಪೂಜೆ ಮಾಡುವಾಗ ದೇವರಿಗೆ ಹೂಗಳನ್ನು ಅರ್ಪಿಸುವುದು ಸಾಮಾನ್ಯ ಆದರೆ ಹಳೆಯ ಹೂವುಗಳನ್ನು ದೇವರ ಕೋಣೆಯ ಮೂಲೆಯಲ್ಲಿ ಇಡುವುದು ಅಶುಭ. ಇನ್ನು ಪೂಜಾ ಕೊಠಡಿಯಲ್ಲಿ ದೊಡ್ಡ ದೊಡ್ಡ ವಿಗ್ರಹಗಳನ್ನು ಇಡಬಾರದು. ಅಲ್ಲದೆ ದೇವರ ಫೋಟೋ ಅಥವಾ ವಿಗ್ರಹಗಳನ್ನು ಒಂದಕ್ಕಿಂತ ಹೆಚ್ಚಿಗೆ ಇಡುವುದು ಒಳ್ಳೆಯದಲ್ಲ.

ಇನ್ನು ಪೂಜಾ ಕೊಠಡಿಯಲ್ಲಿ ಪೂರ್ವಜರ ಫೋಟೋವನ್ನು ಹಾಕಬಾರದು ಇದು ಪುರಾಣ ಶಾಸ್ತ್ರಗಳು ಕೂಡ ಅಮಂಗಳಕರ ಎಂದು ಹೇಳುತ್ತವೆ. ಇನ್ನು ನಿಮಗೆ ಪೂರ್ವಜರ ಫೋಟೋವನ್ನು ಹಾಕಲೇಬೇಕು ಎಂದಿದ್ದರೆ ಮನೆಯ ದಕ್ಷಿಣ ಭಾಗದಲ್ಲಿ ಹಾಕಿ. ಇದು ಅವರು ಮನಸ್ಸಿಗೂ ಶಾಂತಿಯನ್ನು ನೀಡುತ್ತದೆ. ಹಲವರು ಜಾಗದ ಅಭಾವದಿಂದ ಅಡುಗೆ ಮನೆಯಲ್ಲಿಯೇ ದೇವರ ವಿಗ್ರಹಗಳನ್ನು ಇಟ್ಟು ಪೂಜಿಸುತ್ತಾರೆ. ಆದರೆ ಈತರ ಮಾಡುವುದು ಒಳ್ಳೆಯದಲ್ಲ. ಅದರ ಬದಲು ಮನೆಯ ಈಶಾನ್ಯ ಮೂಲೆಯಲ್ಲಿ ದೇವರನ್ನು ಸ್ಥಾಪಿಸಬಹುದು.

ಹಾಗೆಯೇ ವಿಷ್ಣುವಿನ ಸಂಕೇತವಾಗಿರುವ ಶಂಖವನ್ನು ದೇವರ ಮನೆಯಲ್ಲಿ ಇಡಬೇಕು. ಆದರೆ ಒಂದಕ್ಕಿಂತ ಹೆಚ್ಚು ಶಂಖವನ್ನು ದೇವರ ಮನೆಯಲ್ಲಿ ಇಡಬಾರದು. ಅಲ್ಲದೇ ಶಂಖವನ್ನು ಆಗಾಗ ಬದಲಾಯಿಸುವುದು ಕೂಡ ಶುಭವಲ್ಲ. ಇನ್ನೂ ದೇವರ ಮನೆಯಲ್ಲಿ ಶಿವಲಿಂಗಗಳು ಸ್ಥಾಪಿಸಬಹುದು ಆದರೆ ಇದಕ್ಕೂ ಅದರದೇ ಆದ ನಿಯಮಗಳಿವೆ. ದೇವರ ಮನೆಯಲ್ಲಿ ಹೆಬ್ಬೆರಳಿಗಿಂತ ಹೆಚ್ಚಿನ ಉದ್ದದ ಶಿವಲಿಂಗವನ್ನು ಸ್ಥಾಪಿಸಬಾರದು.

ಇನ್ನು ಕೊನೆಯದಾಗಿ ಮನೆಯ ದೇವರ ಮನೆಯಲ್ಲಿ ಹರಿತವಾದ ಯಾವುದೇ ವಸ್ತುಗಳನ್ನು ಈಡಬಾರದು. ಹೀಗೆ ಮಾಡುವುದರಿಂದ ಶನಿ ದೋಷ ಉಂಟಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಮನೆಯನ್ನು ಆವರಿಸುತ್ತದೆ. ಈ ಕೆಲವು ನಿಯಮಗಳನ್ನು ನೀವು ನಿಮ್ಮ ದೇವರ ಮನೆಯಲ್ಲಿ ಪಾಲಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.

Comments are closed.