Neer Dose Karnataka
Take a fresh look at your lifestyle.

ಮತ್ತೊಮ್ಮೆ ಬಿಜೆಪಿ ಪಕ್ಷದ ಹೈ ಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ BSY. ವಿಪಕ್ಷಗಳಲ್ಲಿ ಮತ್ತೊಮ್ಮೆ ಅದೇ ನಡುಕ. ಏನು ಗೊತ್ತೇ?

ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣಕ್ಕೆ, ಬಿ.ಎಸ್.ವೈ ಅವರು ಪಕ್ಷದಿಂದ ಹೊರಗಿದ್ದು, ವೈಯಕ್ತಿಕ ಜೀವನದಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಹೇಳಲಾಗಿತ್ತು, ಅದೇ ರೀತಿ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರು. ಅದಾದ ಬಳಿಕ ಬಿ.ಎಸ್.ವೈ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆಲ್ಲ ಈಗ ಯಡಿಯೂರಪ್ಪ ಅವರು ಖಡಕ್ ಆದ ಉತ್ತರ ಕೊಟ್ಟು, ಹೈ ಕಮಾಂಡ್ ಗೆ ಸಂದೇಶ ಒಂದನ್ನು ರವಾನಿಸಿದ್ದಾರೆ, ಇನ್ನು 10 ವರ್ಷವಾದರೂ ರಾಜ್ಯ ಪ್ರವಾಸ ಮಾಡಿ, ಪಕ್ಷ ಸಂಘಟನೆ ಮಾಡಿದ್ದಾರೆ ಬಿ.ಎಸ್.ವೈ.

ಬಿ.ಎಸ್.ವೈ ಅವರ ಮಗ ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ನಲ್ಲಿ ಸ್ಥಾನ ನೀಡದೆ ಇದ್ದಾಗ ಕೂಡ, ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಬಿ.ಎಸ್.ವೈ ಅವರು ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಇಷ್ಟು ಎತ್ತರಕ್ಕೆ ಬೆಳೆಯಲು ಬಹಳಷ್ಟು ಶ್ರಮ ವಹಿಸಿದ್ದಾರೆ. ಇದೀಗ ಬಿ.ಎಸ್.ವೈ ಅವರು ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆಯ ಪ್ರಚಾರದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಪಾಲ್ಗೊಂಡಿದ್ದಾಗ, ಭಾಷಣ ಮಾಡುವ ಸಮಯದಲ್ಲಿ ಸಂದೇಶ ನೀಡಿದ್ದಾರೆ. “ನನಗೆ 70 ವರ್ಷ ವಯಸ್ಸಾಗಿದೆ, 80 ವರ್ಷ ವಯಸ್ಸಾಗಿದೆ ಅಂತ ಯಾರು ಚಿಂತೆ ಮಾಡೋದು ಬೇಡ. ಇನ್ನು 10 ವರ್ಷಗಳ ಸಮಯ, ಇಡೀ ರಾಜ್ಯದಲ್ಲಿ ಪ್ರವಾಸ ಮಾಡ್ತೀನಿ, ಮುಂದಿನ ದಿನಗಳಲ್ಲಿ ಮತ್ತೆ ಬಂದು ರಾಜಕೀಯ ಭಾಷಣ ಮಾಡ್ತೀನಿ..” ಎಂದಿದ್ದಾರೆ ಬಿ.ಎಸ್.ವೈ.

ಇನ್ನು 10 ವರ್ಷಗಳ ಕಾಲ ಓಡಾಡಿ ಪಕ್ಷದ ಸಂಘಟನೆ ಮಾಡುತ್ತೇನೆ ಎನ್ನುವ ಖಡಕ್ ಸಂದೇಶವನ್ನು ಬಿ.ಎಸ್.ವೈ ಅವರು ಹೈಕಮಾಂಡ್ ಗೆ ನೀಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆ ತಮ್ಮ ನೇತೃತ್ವದಲ್ಲೇ ನಡೆಯುತ್ತದೆ ಎನ್ನುವುದನ್ನು ಸಹ ಸ್ಪಷ್ಟ ಪಡಿಸಿದ್ದಾರೆ. ಹಾಗೆಯೇ, ಇನ್ನು 10 ವರ್ಷಗಳ ಕಾಲ ಹೀಗೆ ಕೆಲಸ ಮಾಡ್ತೀನಿ, ನಿಮ್ಮ ಬೆಂಬಲ ಮತ್ತು ಸಹಕಾರ ಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ., ಬಿ.ಎಸ್.ವೈ ಅವರ 8 ಮಾತು ಕೇಳಿ, ನೆರೆದಿದ್ದ ಕಾರ್ಯಕರ್ತರು ಹಾಗೂ ಜನರು ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ. ಬಿ.ಎಸ್.ವೈ ಅವರಿಗೆ 90 ವರ್ಷ ಆಗುವ ವರೆಗೂ ಅವರು ರಾಜಕೀಯದಲ್ಲಿ ಇರುವುದು ಖಚಿತ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 140 ಶಾಸಕರನ್ನು ಸಹ ಗೆಲ್ಲಿಸಲು, ಕಾರ್ಯಕರ್ತರು ಶ್ರಮ ಹಾಕಬೇಕು ಎಂದು ಕರೆಕೊಟ್ಟಿದ್ದಾರೆ. ಇದೀಗ ಬಿ.ಎಸ್.ವೈ ಅವರು ಹೈಕಮಾಂಡ್ ಗೆ ನೀಡಿರುವ ಈ ಸಂದೇಶ ಎಲ್ಲೆಡೆ ಚರ್ಚೆಯಾಗುತ್ತಿದೆ.

Comments are closed.