Neer Dose Karnataka
Take a fresh look at your lifestyle.

ಶಮಿ ಕುಟುಂಬದಲ್ಲಿ ಮತ್ತಷ್ಟು ಬಿಗಾಡಿಯಿಸಿದ ಪರಿಸ್ಥಿತಿ. ಗಂಡನ ವಿರುದ್ಧ ಮತ್ತೆ ಸಿಡಿದೆದ್ದ ಪತ್ನಿ, ಮಾಡಿದರು ಗಂಭೀರ ಆರೋಪ. ಏನು ಗೊತ್ತೇ??

ಭಾರತ ಕ್ರಿಕೆಟ್ ತಂಡದ ಬಲಿಷ್ಠ ಬೌಲರ್ ಗಳಲ್ಲಿ ಒಬ್ಬರು ಮೊಹಮ್ಮದ್ ಶಮಿ. ಈ ವರ್ಷ ಇವರು ಮತ್ತೊಮ್ಮೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಅವಕಾಶಗಳು ಜಾಸ್ತಿ ಇದೆ. ಇನ್ನು ಕ್ರಿಕೆಟ್ ವಿಚಾರದಿಂದ ಮಾತ್ರವಲ್ಲ, ಮೊಹಮ್ಮದ್ ಶಮಿ ಅವರು ವೈಯಕ್ತಿಕ ಜೀವನದ ವಿಚಾರದಿಂದ ಹೆಚ್ಚಾಗಿ ಸುದ್ದಿಯಾಗಿದ್ದಾರೆ. ಶಮಿ ಅವರು 2014ರಲ್ಲಿ ಹಸಿನ್ ಜಹಾನ್ ಅವರೊಡನೆ ಮದುವೆಯಾದರು.

ಆದರೆ ಕೆಲವು ವರ್ಷಗಳಿಂದ ಈ ಜೋಡಿ ಒಟ್ಟಾಗಿ ವಾಸ ಮಾಡುತ್ತಿಲ್ಲ. ಶಮಿ ಅವರ ಜೊತೆಗಿನ ಜಗಳದ ಕಾರಣ ಹಸಿನ್ ಜಹಾನ್ ಅವರು ತಮ್ಮ ಮಗಳ ಜೊತೆಗೆ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಹಸಿನ್ ಅವರು ವೃತ್ತಿಯಲ್ಲಿ ನಟಿ, ಬೆಂಗಾಲಿ ಸಿನಿಮಾ ರಂಗದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ತಮ್ಮ ಬೆಂಗಾಲಿ ಸಿನಿಮಾ ಪ್ರಚಾರದಲ್ಲಿ ಹಸಿನ್ ಜಹಾನ್ ಕಾಣಿಸಿಕೊಂಡರು, ಆಗ ಪತ್ರಕರ್ತರು ಶಮಿ ಅವರ ಬಗ್ಗೆ ಪ್ರಶ್ನೆ ಕೇಳಿದ್ದು, ಹಸಿನ್ ಅವರು ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಗಳನ್ನು ಭೇಟಿ ಮಾಡಲು ಶಮಿ ಅವರಿಗೆ ಇಷ್ಟವಿಲ್ಲ, ಮಗಳೊಡನೆ ಅನುಚಿತವಾಗಿ ವರ್ತನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

2015ರಲ್ಲಿ ಶಮಿ ಅವರು ಹೆಣ್ಣು ಮಗುವಿನ ತಂದೆಯಾದರು. ಹಸಿನ್ ಅವರು ಮಗಳು ಬೆಳೆಯುತ್ತಿದ್ದಾಳೆ, ಬೇರೆ ಮಕ್ಕಳ ತಂದೆಯ ಅವರಿಗೆ ಗಿಫ್ಟ್ ಕೊಡುವುದನ್ನು ನೋಡಿ, ತಮ್ಮನ್ನು ಕೇಳುತ್ತಾಳೆ ಎಂದು ಶಮಿ ಅವರನ್ನು ಕಾಂಟ್ಯಾಕ್ಟ್ ಮಾಡಲು ಟ್ರೈ ಮಾಡಿದ್ದು, ಮಗಳಿಗೆ 100 ರೂಪಾಯಿ ಡ್ರೆಸ್ ಅನ್ನು ಗಿಫ್ಟ್ ಆಗಿ ಕಳಿಸಿದ್ದರು, ಕೋಟಿ ಕೋಟಿ ಸಂಪಾದನೆ ಮಾಡಿ ಮಗಳಿಗೆ ಅಂತಹ ಕಳಪೆ ಗಿಫ್ಟ್ ಕಳಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ ಹಸಿನ್ ಜಹಾನ್. ಇದೀಗ ಹಸಿನ್ ಜಹಾನ್ ಮತ್ತು ಶಮಿ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Comments are closed.