Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಲವ್ ಸ್ಟೋರಿ: ಇದೀಗ ಮೂರನೇ ಲವ್ ಸ್ಟೋರಿ ಆರಂಭ: ಬಿಗ್ ಬಾಸ್ ನಲ್ಲಿ ಏನಾಗುತ್ತಿದೆ ಗೊತ್ತೇ?? ಹೊಸ ಜೋಡಿ ಯಾರು ಗೊತ್ತೇ??

ಬಿಗ್ ಬಾಸ್ ಮನೆಯಲ್ಲಿ ಪ್ರೇಮಕತೆಗಳು ಎಲ್ಲರಿಗೂ ಮನರಂಜನೆ ನೀಡುವ ಮೇಜರ್ ವಿಚಾರ. ಈ ಮನೆಯಲ್ಲಿ ಪ್ರತಿ ಸೀಸನ್ ನಲ್ಲೂ ಒಂದೊಂದು ಪ್ರೇಮ ಕಥೆಗಳು ನಡೆಯುತ್ತಲೇ ಇರುತ್ತದೆ. ಅದೇ ರೀತಿ ಈಗಿನ ಬಿಗ್ ಬಾಸ್ ಕನ್ನಡ ಓಟಿಟಿ ಶೋನಲ್ಲಿ ಸಹ ಲವ್ ಸ್ಟೋರಿ ಈಗಾಗಲೇ ಶುರುವಾಗಿದೆ. ಎರಡು ಲವ್ ಸ್ಟೋರಿಗಳ ಬಗ್ಗೆ ಈಗಾಗಲೇ ಎಲ್ಲರಿಗು ಗೊತ್ತಿದೆ. ಈಗಾಗಲೇ ಮೂರನೇ ಲವ್ ಸ್ಟೋರಿ ಸಹ ಬಿಗ್ ಬಾಸ್ ನಲ್ಲಿ ಶುರುವಾಗಿದೆ. ಈ ಹೊಸ ಲವ್ ಸ್ಟೋರಿ ಬಗ್ಗೆ ತಿಳಿಸುತ್ತೇವೆ ನೋಡಿ.. ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರ ಪಾಲಿಗೆ ಅಟ್ರಾಕ್ಷನ್ ಆಗಿರುವುದು ರಾಕೇಶ್ ಅಡಿಗ. ರಾಕೇಶ್ ಅಡಿಗ ಅವರು ಸ್ಪೂರ್ತಿ ಗೌಡ ಅವರೊಡನೆ ಕ್ಲೋಸ್ ಆಗಿದ್ದಾರೆ.

ಸ್ಪೂರ್ತಿ ಅವರಿಗು ರಾಕೇಶ್ ಅಂದ್ರೆ ಇಷ್ಟವಾಗಿ, ನಮ್ಮಿಬ್ಬರ ಮೆಂಟಾಲಿಟಿ ಒಂದೇ ಥರ ಇದೆ, ಎಂದೆಲ್ಲಾ ಹೇಳಿದ್ದಾರೆ. ರಾಕೇಶ್ ಸಹ ಸ್ಪೂರ್ತಿ ತಮಗೆ ಇಷ್ಟ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ. ಇತ್ತ ಸೋನು ಗೌಡ ಸಹ ತಮಗೆ ರಾಕೇಶ್ ಇಷ್ಟ ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಮತ್ತೊಂದು ಲವ್ ಸ್ಟೋರಿ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಅವರದ್ದು. ಇವರಿಬ್ಬರ ನಡುವೆ ಏನೋ ಇದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ ರೂಪೇಶ್ ಸಾನ್ಯಾ ಈಗಾಗಲೇ ತಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಮೂರನೇ ಲವ್ ಸ್ಟೋರಿ ಸಹ ಶುರುವಾಗಿದೆ ಎಂದು ಮನೆಯ ಕೆಲ ಸದಸ್ಯರಿಗೆ ಅನುಮಾನ ಶುರುವಾಗಿದೆ. ಅದು ಉದಯ್ ಸೂರ್ಯ ಮತ್ತು ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ ಅವರ ಮಹಿಳಾ ಗ್ಯಾಂಗ್ ನಲ್ಲಿ ಇದರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ರೀತಿ ಅನ್ನಿಸುವುದಕ್ಕೆ ಕಾರಣ, ಉದಯ್ ಅವರು ಅಕ್ಷತಾ ಕುಕ್ಕಿ ಅವರಿಗೆ ಸಪೋರ್ಟ್ ಮಾಡಿದ ಕಾರಣದಿಂದ. ಟಾಸ್ಕ್ ನಡೆಯುವ ವೇಳೆ, ಉದಯ್ ಸೂರ್ಯ ಎಲ್ಲರಿಗಿಂತ ಹೆಚ್ಚಾಗಿ ಅಕ್ಷತಾ ಅವರಿಗೆ ಸಪೋರ್ಟ್ ಮಾಡಿದ್ದು, ಇದನ್ನು ನೋಡಿ ಚೈತ್ರಾ ಹಾಗೂ ಇನ್ನಿತರರಿಗೆ ಈ ಅನುಮಾನ ಶುರುವಾಗಿದೆ.

Comments are closed.