Neer Dose Karnataka
Take a fresh look at your lifestyle.

ಪರಿಶ್ರಮಕ್ಕೆ ಸಿಕ್ತು ಕೊನೆಗೂ ಪ್ರತಿಫಲ: ಸುಂದರ್ ಬದಲಿಗೆ ಮೊದಲ ಬಾರಿ ಭಾರತ ತಂಡ ಸೇರಿಕೊಂಡ ಆರ್ಸಿಬಿ ಪ್ಲೇಯರ್. ಯಾರು ಗೊತ್ತೇ??

ಆಗಸ್ಟ್ 18ರಿಂದ ಜಿಂಬಾಬ್ವೆ ನಲ್ಲಿ ಕ್ರಿಕೆಟ್ ಒನ್ ಡೇ ಪಂದ್ಯಗಳು ಶುರುವಾಗಲಿದೆ. ಭಾರತ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯಗಳಿಗೆ ಬಲಿಷ್ಠವಾದ ಭಾರತ ತಂಡ ಇರಬೇಕಿದ್ದು, ಇದಕ್ಕೀಗ ನಮ್ಮ ಆರ್.ಸಿ.ಬಿ ಪ್ಲೇಯರ್ ಸೇರ್ಪಡೆಯಾಗಿದ್ದಾರೆ ಎನ್ನುವುದು ವಿಶೇಷವಾಗಿದೆ. ವಾಷಿಂಗ್ಟನ್ ಸುಂದರ್ ಅವರು ಈ ಪಂದ್ಯಗಳಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರಿಗೆ ಇಂಜೂರಿ ಆಗಿರುವ ಕಾರಣ ವಾಷಿಂಗ್ಟನ್ ಸುಂದರ್ ಅವರು ಪಂದ್ಯಗಳಲ್ಲಿ ಭಾಗವಹಿಸಲು ಆಗುವುದಿಲ್ಲ.

ಇಂಗ್ಲೆಂಡ್ ವಿರುದ್ಧದ ಪಂದ್ಯ ನಡೆಯುವಾಗ, ವಾಷಿಂಗ್ಟನ್ ಸುಂದರ್ ಅವರು ಭುಜಕ್ಕೆ ಪೆಟ್ಟು ಮಾಡಿಕೊಂಡು, ಪಂದ್ಯದಿಂದ ಹೊರನಡೆದಿದ್ದರು. ಅವರ ಇಂಜೂರಿ ಸರಿ ಹೋಗದ ಕಾರಣ, ಸುಂದರ್ ಅವರಿಗೆ ದೀರ್ಘವಾದ ವಿಶ್ರಾಂತಿ ಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ವಾಷಿಂಗ್ಟನ್ ಸುಂದರ್ ಅವರು ಜಿಂಬಾಬ್ವೆ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ, ಇದೀಗ ಇವರ ಬದಲಾಗಿ ಆರ್.ಸಿ.ಬಿ ತಂಡದ ಆಲ್ ರೌಂಡರ್ ಶಾಬಾಜ್ ಅಹ್ಮದ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶಾಬಾಜ್ ಅವರು ಇದೇ ಮೊದಲ ಬಾರಿಗೆ ನ್ಯಾಷನಲ್ ಟೀಮ್ ಗೆ ಸೆಲೆಕ್ಟ್ ಆಗಿದ್ದಾರೆ.

ಇವರು ಆರ್.ಸಿ.ಬಿ ಪರವಾಗಿ 29 ಪಂದ್ಯಗಳನ್ನು ಆಡಿ, ಒಳ್ಳೆಯ ಪ್ರದರ್ಶನ ನೀಡಿದ್ದಾರೆ, ರಣಜಿ ಟ್ರೋಫಿ ಪಂದ್ಯಗಳಲ್ಲಿ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ಪಿನ್ ಬೌಲರ್ ಆಗಿ ಹೆಸರುವಾಸಿ ಆಗಿರುವ ಶಾಬಾಜ್ ಅವರು, ಎಲ್ಲಾ ಕ್ರಮಾಂಕದಲ್ಲಿ ಸಹ ಉತ್ತಮವಾದ ಬ್ಯಾಟಿಂಗ್ ನೀಡುತ್ತಾರೆ. ಹಾಗಾಗಿ ವಾಷಿಂಗ್ಟನ್ ಸುಂದರ್ ಅವರ ಬದಲಾಗಿ ಆಲ್ ರೌಂಡರ್ ಆಗಿರುವ ಶಾಬಾಜ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇವರ ಮೇಲೆ ಒಳ್ಳೆಯ ನಿರೀಕ್ಷೆ ಸೃಷ್ಟಿಯಾಗಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯಗಳು ಹೇಗೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.

Comments are closed.