Neer Dose Karnataka
Take a fresh look at your lifestyle.

ಇದೊಂದು ವ್ಯಾಪಾರ ಮಾಡಲು ಸರ್ಕಾರನೇ ಹತ್ತು ಲಕ್ಷ ದುಡ್ಡು ಕೊಡುತ್ತೆ, ಓದು ಇಲ್ಲದೆ ಇದ್ದರೂ ಕೋಟಿ ಕೋಟಿ ದುಡಿಯಬಹುದು. ಹೇಗೆ ಗೊತ್ತೇ??

ಮನೆಯಲ್ಲೇ ಇದ್ದು ವ್ಯಾಪಾರ ಬ್ಯುಸಿನೆಸ್ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡಬೇಕು ಎಂದು ಹಲವರು ಅಂದುಕೊಂಡಿರುತ್ತಾರೆ. ಆ ರೀತಿಯ ಪ್ಲಾನ್ ಇರುವವರಿಗೆ ಒಳ್ಳೆಯ ಬ್ಯುಸಿನೆಸ್ ಐಡಿಯಾ, ಮನೆಯಲ್ಲೇ ಮಾಡಿ, ಒಳ್ಳೆಯ ಲಾಭ ಪಡೆಯುವ ಬ್ಯುಸಿನೆಸ್ ಐಡಿಯಾ ಒಂದನ್ನು ಇಂದು ನಿಮಗೆ ನೀಡುತ್ತೇವೆ..ಇದು ಬಿಸ್ಕೆಟ್ ಬ್ಯುಸಿನೆಸ್. ಬಿಸ್ಕೆಟ್ ಗಳಲ್ಲಿ ಪಾರ್ಲೆ ಜಿ, ಮಾರಿ ಗೋಲ್ಡ್, ಗುಡ್ ಡೇ ಈ ರೀತಿಯ ಹಲವು ಬ್ರ್ಯಾಂಡ್ ಗಳಿವೆ, ಇವುಗಳು ದೊಡ್ಡ ಬ್ರ್ಯಾಂಡ್ ಆಗಿರುವುದರಿಂದ, ಇವುಗಳ ಬೆಲೆ ಕೂಡ ಹೆಚ್ಚು. ನೀವು ಸ್ವದೇಶಿ ಆಗಿ ಬಿಸ್ಕೆಟ್ ತಯಾರಿಸುವ ಕಂಪನಿ ಶುರು ಮಾಡಿದರೆ, ಕಡಿಮೆ ಬಂಡವಾಳದಲ್ಲಿ ಬಿಸ್ಕೆಟ್ ತಯಾರಿಸಬಹುದು, ಹಾಗೆಯೇ ವಿವಿಧ ವಿನ್ಯಾಸದಲ್ಲಿ ಬಿಸ್ಕೆಟ್ ಗಳನ್ನು ತಯಾರಿಸಬಹುದು. ನಮ್ಮ ದೇಶದಲ್ಲಿ ಟೀ ಮತ್ತು ಬಿಸ್ಕೆಟ್ ಗೆ ಸದಾ ಬೇಡಿಕೆ ಇದೆ. ಮನೆಯಲ್ಲೇ ಈ ಬ್ಯುಸಿನೆಸ್ ಹೇಗೆ ಶುರು ಮಾಡುವುದು ಎಂದು ತಿಳಿಸುತ್ತೇವೆ ನೋಡಿ..

ಮೊದಲಿಗೆ ವ್ಯಾಪಾರದ ಪ್ಲಾನ್ ಹಾಕಿಕೊಳ್ಳಿ, ನೀವು ತಯಾರಿಸಿದ ಬಿಸ್ಕೆಟ್ ಅನ್ನು ಎಲ್ಲಿ ಮಾರಾಟ ಮಾಡಬೇಕು ಎಂದು ಪರಿಶೀಲಿಸಿ. ಹಾಗೆಯೇ ಬಿಸ್ಕೆಟ್ ನಲ್ಲಿ ಹಲವು ಫ್ಲೇವರ್ ಗಳಿವೆ, ನೀವು ವಿಭಿನ್ನವಾದ ಫ್ಲೇವರ್ ಬಿಸ್ಕೆಟ್ ತಯಾರಿಸಿದರೆ, ನಿಮಗೆ ಸ್ಪರ್ಧೆ ಇರುವುದಿಲ್ಲ. ಬಿಸ್ಕೆಟ್ ತಯಾರಿಸಲು ನಿಮಗೆ ಮೈದಾ ಒಂದು ಕೆಜಿಗೆ 30 ರಿಂದ 40 ರೂಪಾಯಿ, ಬೆಣ್ಣೆ 100 ಗ್ರಾಮ್ ಗೆ 35 ರೂಪಾಯಿ, ಉಪ್ಪು 1ಕೆಜಿಗೆ 20 ರೂಪಾಯಿ, ಸಕ್ಕರೆ 1ಕೆಜಿಗೆ 40 ರೂಪಾಯಿ, ಬೇಕಿಂಗ್ ಸೋಡಾ 1ಪ್ಯಾಕೆಟ್ 20 ರೂಪಾಯಿ, ಅರ್ಧ ಲೀಟರ್ ಹಾಲು 30 ರೂಪಾಯಿ, ಇದಲ್ಲದೆ ವೆನಿಲ್ಲಾ ಎಸೆನ್ಸ್, ಚಾಕೋ ಚಿಪ್ಸ್ 1ಕೆಜಿಗೆ 220 ರೂಪಾಯಿ, ಕೋಕೋನಟ್ ಪೌಡರ್ 1ಕೆಜಿಗೆ 230 ರೂಪಾಯಿ ಇವು ಬೇಕಾಗಬಹುದು. ಇವುಗಳನ್ನು ಮೊದಲು ಖರೀದಿ ಮಾಡಿ.

ಪದಾರ್ಥಗಳನ್ನು ಖರೀದಿ ಮಾಡಿದ ಬಳಿಕ ಅಡುಗೆ ಮಾಡಲು ಪಾತ್ರೆ, ಬಟ್ಟಲುಗಳು, ಚಮಚ, ಮೊಟ್ಟೆ ಬೀಟರ್, ಸ್ಟ್ರೈನರ್ , ನೀರಿನ ಪಾತ್ರೆ, ಹಾಲಿನ ಜಗ್, ಅಳತೆ ಮಾಡುವ ಕಪ್ ಗಳು, ಬಿಸ್ಕೆಟ್ ಟ್ರೇ ಗಳು, ಮೈಕ್ರೋವೇವ್ ಓವನ್ ಇವುಗಳು ಬೇಕಾಗುತ್ತದೆ. ನೀವು ತಯಾರಿಸುವ ಬಿಸ್ಕೆಟ್ ವಿಭಿನ್ನವಾಗಿದ್ದರೆ ಮಕ್ಕಳು ಹಾಗೂ ದೊಡ್ಡವರು ತಿನ್ನಲು ಇಷ್ಟಪಡುತ್ತಾರೆ. ಬಿಸ್ಕೆಟ್ ಗಳ ಮೇಕಿಂಗ್, ರುಚಿ ಬಣ್ಣ, ಪರಿಮಳ ಎಲ್ಲವೂ ವಿಭಿನ್ನವಾಗಿರಬೇಕು. ಈ ಮೂಲಕ ಕೊಳ್ಳುವವರಿಗೆ ಹೆಚ್ಚಿನ ಆಯ್ಕೆ ಕೊಡುತ್ತೀರಿ. ಇದರಿಂದ ಜನರು ನಿಮ್ಮ ಕುಕ್ಕಿ ಮತ್ತು ಬಿಸ್ಕೆಟ್ ಗಳನ್ನು ಖರೀದಿ ಮಾಡುತ್ತಾರೆ. ಈಗ ಮಾರ್ಕೆಟ್ ನಲ್ಲಿ ಕುಕ್ಕಿಸ್ ಮೇಕಿಂಗ್ ಯಂತ್ರ ಸಹ ಬಂದಿದ್ದು, ಅದನ್ನು ಖರೀದಿ ಮಾಡಿದರೆ, ವಿವಿಧ ರೀತಿಯಲ್ಲಿ ವಿವಿಧ ಶೇಪ್ ನಲ್ಲಿ ಬಿಸ್ಕೆಟ್ ತಯಾರಿಸಬಹುದು.

ನಿಮಗೆ ಬೇಕಾದ ಹಾಗೆ ಬಿಸ್ಕೆಟ್ ತಯಾರಿಸಿ ಮೈಕ್ರೋವೇವ್ ಓವಮ್ ನಲ್ಲಿ ಪಾಪ್ ಮಾಡಿ, ನಂತರ ಹೊರತೆಗೆದು ಅದರ ರುಚಿ ಬಣ್ಣ, ಪರಿಮಳ ಎಲ್ಲವನ್ನು ಪರೀಕ್ಷಿಸಿ. ಎಲ್ಲವು ಸರಿ ಇದ್ದರೆ ಪ್ಯಾಕ್ ಮಾಡಿ, ಬಿಸ್ಕೆಟ್ ತಣ್ಣಗಾದ ಬಳಿಕ ಪ್ಯಾಕ್ ಮಾಡಬೇಕು. ಬಿಸಿ ಇರುವಾಗ ಪ್ಯಾಕ್ ಮಾಡಬಾರದು. ಗಾಳಿ ಆಡದ ಹಾಗೆ ಬಿಸ್ಕೆಟ್ ಗಳನ್ನು ಪ್ಯಾಕ್ ಮಾಡಬೇಕು, ಇದಕ್ಕೆ ಸೀಲರ್ ಗಳು ಸಿಗುತ್ತವೆ, ಅವುಗಳ ಬೆಲೆ 3500 ರಿಂದ 4500 ರೂಪಾಯಿ ವರೆಗೂ ಇರುತ್ತದೆ. ಈ ಬ್ಯುಸಿನೆಸ್ ಶುರು ಮಾಡಲು, ಬೇಕಾಗುವ ಪದಾರ್ಥ, ಯಂತ್ರಗಳು, ಕೆಲಸಗಾರರ ವೆಚ್ಚ, ಜಾಗ ಎಲ್ಲವನ್ನು ಲೆಕ್ಕ ಹಾಕಿದರೆ ಸುಮಾರು 7 ಲಕ್ಷ ರೂಪಾಯಿ ಆರಂಭ ಹೂಡಿಕೆಯಾಗಿ ಬೇಕಾಗುತ್ತದೆ. ವಿದ್ಯುತ್ ಬಿಲ್, ಕಚ್ಚಾ ವಸ್ತುಗಳು ಇದೆಲ್ಲವೂ ಸೇರಿ 2 ಲಕ್ಷ ಆಗುತ್ತದೆ. ನಿಮ್ಮ ವೆಚ್ಚಗಳನ್ನು ನೋಡಿ, ಶೇ.30 ರಿಂದ 40 ರಷ್ಟು ಲಾಭ ಬರುವ ಹಾಗೆ ಬಿಸ್ಕೆಟ್ ಗಳ ಮಾರಾಟ ಮಾಡಬೇಕು.

Comments are closed.