Neer Dose Karnataka
Take a fresh look at your lifestyle.

5 ವರ್ಷಗಳ ಕಾಲ ಜೈಲಿನಲ್ಲಿದ್ದ ನಟಿಯ ಜೊತೆ ಅಫೇರ್ ಹೊಂದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ.

ನೀವು ಸಿನಿಮಾ ಹೆಚ್ಚಾಗಿ ನೋಡಿಲ್ಲ ಎಂದರು ಕೂಡ ಇವರ ಹೆಸರು ನಿಮಗೆ ತಿಳಿದಿರುವ ಸಾಧ್ಯತೆ ಇದೆ ಯಾಕೆಂದರೆ ಜನವರಿ 18, 1975ರಂದು ಪಂಜಾಬ್‌ನಲ್ಲಿ ಜನಿಸಿದ ಈ ನಟಿ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ಜೀವನದಿಂದ ಹೆಚ್ಚು ಸದ್ದು ಮಾಡಿದ್ದಾರೆ. ಕೆಲವೇ ಕೆಲವು ಬಾಲಿವುಡ್ ಸಿನೆಮಾಗಳಲ್ಲಿ ನಟನೆ ಮಾಡಿರುವ ನಟಿ ಮೋನಿಕಾ, ಚಿತ್ರರಂಗದಲ್ಲಿ ಹೆಚ್ಚಾಗಿ ಸದ್ದು ಮಾಡುವಲ್ಲಿ ವಿಫಲರಾದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅಧ್ಯಯನ ಮುಗಿಸಿದ ಮೋನಿಕಾ 1995ರಲ್ಲಿ ತೆಲುಗು ಚಿತ್ರ ತಾಜ್ ಮಹಲ್ ಮೂಲಕ ನಟನೆ ಆರಂಭಿಸಿದ ನಟಿ ಮೋನಿಕಾ ರವರು, ಅದೇ ವರ್ಷದಲ್ಲಿಯೇ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು.

ಹೌದು, ಸುನೀಲ್ ಶೆಟ್ಟಿ ಮತ್ತು ಸೈಫ್ ಅಲಿ ಖಾನ್ ನಟನೆ ಮಾಡಿರುವ ಸುರಕ್ಷಾ ಎಂಬ ಸಿನಿಮಾದ ಮೂಲಕ ಬಾಲಿವುಡ್ ಜರ್ನಿಯನ್ನು ಕೂಡ ಅದೇ ವರ್ಷ ಆರಂಭ ಮಾಡಿದರು. ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿ ಇತ್ತು, ಆದರೆ ಅಂಡರ್‌ವರ್ಲ್ಡ್‌ ಡಾನ್ ಅಬು ಸಲೀಮ್ ರವರನ್ನು ದುಬೈನಲ್ಲಿ ಶೋವೊಂದರಲ್ಲಿ ಭೇಟಿ ಮಾಡಿದ ಬಳಿಕ ಇಬ್ಬರ ಸ್ನೇಹ ಹೆಚ್ಚಾಯಿತು. ಮೋನಿಕಾ ರವರು ಇದೊಂದು ಲಿವಿಂಗ್ ರಿಲೇಷನ್ಶಿಪ್ ಎಂದರೆ ಅಂಡರ್‌ವರ್ಲ್ಡ್‌ ಡಾನ್ ಅಬು ಸಲೀಮ್ ಮಾತ್ರ ನಾನು ಮೋನಿಕಾ ರವರನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೆ ನೀಡಿದ. ಆದರೆ ಮೋನಿಕಾ ಇದನ್ನು ನಯವಾಗಿ ತಿರಸ್ಕರಿಸಿದರು. ಇದಾದ ಬಳಿಕ ಅಂಡರ್‌ವರ್ಲ್ಡ್‌ ಡಾನ್ ಅಬು ಸಲೀಮ್ ನಿಂದ ನಕಲಿ ಪಾಸ್ಪೋರ್ಟ್ ಮಾಡಿಸಿದ ಕಾರಣಕ್ಕೆ ಇವರನ್ನು 5 ವರ್ಷ ಜೈಲಿಗೆ ಕಳುಹಸಲಾಯಿತು.

ಜೈಲಿನಿಂದ ಬಿಡುಗಡೆ ಯಾದಾಗ ಎಂದಿನಂತೆ ಮಾಧ್ಯಮಗಳ ಫೇವರಿಟ್ ಎನಿಸಿದರು. ಇದು ಅವರನ್ನು ಮತ್ತೊಮ್ಮೆ ಚಿತ್ರರಂಗದತ್ತ ಮುಖ ಮಾಡುವಂತೆ ಮಾಡಿತ್ತು. ಮಾಜಿ ಕ್ರಿಕೆಟ್ ಆಟಗಾರ, ಅಜರುದ್ದೀನ್ ರವರ ಜೊತೆ ಅಫೇರ್ ಹೊಂದಿದ್ದಾರೆ ಎಂಬ ಸುದ್ದಿ ಹರಡಿತು, ಸಾಕಷ್ಟು ಫೋಟೋ ಸಾಕ್ಷಿಗಳು ಕೂಡ ಸಿಕ್ಕವು, ಅಜರುದ್ದೀನ್ ರವರ ಪುತ್ರನ ಮದುವೆಗೆ ಕೂಡ ಭೇಟಿ ನೀಡಿದ್ದ ಈ ನಟಿ ಬಹಳ ಕ್ಲೋಸ್ ಆಗಿ ಅಜರುದ್ದೀನ್ ರವರ ಜೊತೆ ಇದ್ದರು. ಇದು ವದಂತಿಗಳನ್ನು ಮತ್ತಷ್ಟು ಜಾಸ್ತಿ ಮಾಡಿತು. ತದ ನಂತರ ಇವರಿಬ್ಬರ ಖಾಸಗಿ ಕ್ಷಣಗಳ ಹಲವಾರು ಫೋಟೋಗಳು ಬಿಡುಗಡೆಯಾದವು, ಆದರೂ ಕೂಡ ಇಬ್ಬರು ಈ ಕುರಿತು ಒಂದು ಹೇಳಿಕೆ ಇಲ್ಲಿಯವರೆಗೂ ನೀಡಿಲ್ಲ.

Comments are closed.