Neer Dose Karnataka
Take a fresh look at your lifestyle.

ಸೌಂದರ್ಯ ರವರ ಹತ್ತಿರದ ಸಂಬಂಧಿ ಕನ್ನಡದ ಕಿರುತೆರೆಯ ಖ್ಯಾತ ನಟಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇಹಲೋಕ ತ್ಯಜಿಸಿ ಹಲವಾರು ವರ್ಷಗಳು ಕಳೆದರೂ ಕೂಡ ಜನರ ಅಚ್ಚುಮೆಚ್ಚಿನ ನಟಿಯಾಗಿರುವ ಸೌಂದರ್ಯ ರವರು ಇದೀಗ ನಮ್ಮ ಜೊತೆಗೆ ಇಲ್ಲ. ಇವರ ಸ್ಥಾನವನ್ನು ತುಂಬುವ ಮತ್ತೊಬ್ಬ ನಟಿ ಇಲ್ಲಿಯವರೆಗೂ ಯಾವುದೇ ಚಿತ್ರರಂಗದಲ್ಲಿಯೂ ಸಿಕ್ಕಿಲ್ಲ, ಅಸಲಿಗೆ ಸೌಂದರ್ಯ ರವರ ನಟನೆ ಹಾಗೂ ಅವರ ಮುಗ್ಧತೆ ನೋಡಿದ ಪ್ರತಿಯೊಬ್ಬರೂ ಇತರ ಸಿನಿಮಾ ನಟಿ ಗಳಂತೆ ಈ ರೀತಿಯ ಹುಡುಗಿ ನನಗೆ ಮದುವೆಯಾಗಲು ಸಿಗಬೇಕು ಎನ್ನುವ ಬದಲು ಈ ರೀತಿಯ ಹುಡುಗಿ ನಮ್ಮ ಮನೆಯಲ್ಲಿ ನನ್ನ ಸಹೋದರಿಯಾಗಿ ಇರಬೇಕು ಎಂದು ಅಂದುಕೊಳ್ಳುತ್ತಿದ್ದರು.

ಇಂತಹ ನಟಿಯ ಸ್ಥಾನಮಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇನ್ನು ನಾವು ಇಂದು ನಮ್ಮ ನಿಮ್ಮೆಲ್ಲರ ನೆಚ್ಚಿನ ಸೌಂದರ್ಯ ರವರ ಹತ್ತಿರದ ಸಂಬಂಧಿ ಹಾಗೂ ಸೌಂದರ್ಯ ರವರ ಸಹೋದರಿ ಯಾಗಿರುವ ಕನ್ನಡದ ಕಿರುತೆರೆಯ ಖ್ಯಾತ ನಟಿ ಯಾರು ಹಾಗೂ ಅವರ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ ಕೇಳಿ.

ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿ ಮನೆಮಾತಾಗಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿ ಕುರಿತು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಧಾರವಾಹಿ ಆರಂಭವಾದ ಕೆಲವು ವರ್ಷಗಳ ಕಾಲ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಲಕ್ಷ್ಮಿ ಪಾತ್ರಧಾರಿಯಾಗಿ ಕವಿತಾ ಗೌಡ ರವರು ಕಾಣಿಸಿಕೊಂಡಿದ್ದರು. ತದನಂತರ ಅನಿವಾರ್ಯ ಕಾರಣಗಳಿಂದ ಕವಿತಾ ರವರು ಧಾರವಾಹಿ ಬಿಟ್ಟು ತೆರಳಿದಾಗ ಲಕ್ಷ್ಮಿ ಪಾತ್ರಕ್ಕೆ ಆಯ್ಕೆಯಾಗಿ, ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾ ರಶ್ಮಿ ಪ್ರಭಾಕರ್ ರವರು ಇದೀಗ ಸೌಂದರ್ಯ ರವರ ಸಹೋದರ ಸಂಬಂಧಿ ಎಂಬ ಮಾಹಿತಿ ತಿಳಿದು ಬಂದಿದೆ. ಭರತನಾಟ್ಯ ಕಲಾವಿದೆಯಾಗಿರುವ ರಶ್ಮಿ ಪ್ರಭಾಕರ್ ಅವರು ಇದೀಗ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ.

Comments are closed.