Neer Dose Karnataka
Take a fresh look at your lifestyle.

ಇದನ್ನು ಸ್ವಲ್ಪ ಹಚ್ಚಿದ್ದಕ್ಕೆ ನನ್ನ ಕೂದಲು ಎಷ್ಟು ಉದ್ದ ಬೆಳೆದಿವೆ ನೋಡಿ, ಇದು ಸತ್ಯ.

ಸಾಮಾನ್ಯವಾಗಿ ಈಗಿನ ಜೀವನ ಶೈಲಿಯಲ್ಲಿ ಕೂದಲಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಕೂದಲಿನ ಸಮಸ್ಯೆ ಎಂದರೆ ಕೂದಲು ಉದುರುವುದು, ಹೊಟ್ಟಿನ ಸಮಸ್ಯೆ, ಬೊಕ್ಕತಲೆಯ ಸಮಸ್ಯೆ, ಕೂದಲು ಬೆಳೆಯದೇ ಇರುವುದು.ಇಂದು ಈ ಲೇಖನದಲ್ಲಿ ನಾವು ಇದಕ್ಕೆ ಒಂದು ಪರಿಹಾರ ತಿಳಿಸಲಾಗಿದೆ. ನಾವು ಹೇಳುವ ಪದಾರ್ಥವನ್ನು ಎಣ್ಣೆಯಲ್ಲಿ ಮಿಕ್ಸ್ ಮಾಡಿ ಉಪಯೋಗಿಸಿದರೆ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯುತ್ತದೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ನಾನಾರೀತಿಯ ಶಾಪುಗಳಲ್ಲಿ ಈರುಳ್ಳಿಯನ್ನು ಬಳಸಿರುತ್ತಾರೆ. ಏಕೆಂದರೆ ಈರುಳ್ಳಿಯನ್ನು ಬೆರೆಸಿದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದ್ದ ಬೆಳೆಯುತ್ತದೆ ಮತ್ತು ಕೂದಲು ಉದುರುವುದಿಲ್ಲ. ಅಷ್ಟೇ ಅಲ್ಲದೆ ಕೂದಲಿಗೆ ಹೊಳಪನ್ನು ಸಹ ಹೆಚ್ಚುತ್ತದೆ. ಈರುಳ್ಳಿಯನ್ನು ಉಪಯೋಗಿಸಿಕೊಂಡು ಹೇಗೆ ಎಣ್ಣೆಯನ್ನು ತಯಾರಿಸಬೇಕು ಎಂದು ಮುಂದೆ ತಿಳಿಸಲಾಗಿದೆ.

ಮೊದಲಿಗೆ ಒಂದು ಈರುಳ್ಳಿಯನ್ನು ತೆಗೆದುಕೊಂಡು ಎರಡು ಭಾಗವಾಗಿ ಮಾಡಿ ಸಿಪ್ಪೆಯನ್ನು ತೆಗೆದುಕೊಳ್ಳಿ. ಸಿಪ್ಪೆಯನ್ನು ತೆಗೆದ ನಂತರ ಈರುಳ್ಳಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಈರುಳ್ಳಿಯನ್ನು ಒಂದು ಒಣ ಬಟ್ಟೆಯಿಂದ ಒರೆಸಿಕೊಳ್ಳಿ.ನಂತರ ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ 2 ಚಮಚ ಕೊಬ್ಬರಿ ಎಣ್ಣೆ ಎಣ್ಣೆಯನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ನನ್ನು ಇಟ್ಟು ಅದಕ್ಕೆ 1 ಸಣ್ಣ ಲೋಟದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡ ಈರುಳ್ಳಿಯನ್ನು ಹಾಕಿಕೊಂಡು ಮಧ್ಯಮ ಉರಿಯಲ್ಲಿ ಇಟ್ಟುಕೊಂಡು, ಈರುಳ್ಳಿಯು ಕೆಂಪುಬಣ್ಣ ತಿರುಗುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ.

ತಣ್ಣಗಾದ ನಂತರ ಕಾಟನ್ ಬಟ್ಟೆಯನ್ನು ಬಳಸಿ ಎಣ್ಣೆಯನ್ನು ಒಂದು ಬಾಟಲಿಗೆ ಸೋಸಿಕೊಳ್ಳಿ. ಈ ಎಣ್ಣೆಯನ್ನು ಒಂದು ದಿನ ಬಿಟ್ಟು ಇನ್ನೊಂದು ದಿನ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಬೇಕು. ಎಣ್ಣೆ ಹಚ್ಚಿದ ಮಾರನೇ ದಿನ ನೀವು ಉಪಯೋಗಿಸುವ ಶಾಂಪೂವನ್ನು ಬಳಸಿ ಸ್ನಾನ ಮಾಡಿ. ಆನಂತರ ಮಾರನೇ ದಿನ ಮತ್ತೆ ಎಣ್ಣೆಯನ್ನು ಹಚ್ಚಿಕೊಳ್ಳಿ. ಈ ರೀತಿ 7 ದಿನಗಳ ಕಾಲ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಉದ್ದವಾಗಿ ಬೆಳೆಯುತ್ತದೆ ಮತ್ತು ದಪ್ಪವಾಗಿ ಬೆಳೆಯುತ್ತದೆ.

Comments are closed.